--Ads--

ಹೊಸಕೋಟೆಯಲ್ಲಿ ಮತದಾರರ ಜಾಗೃತಿ ಮ್ಯಾರಾಥಾನ್ ಹಾಗೂ SIR ವಿಶೇಷ ಆಂದೋಲನಕ್ಕೆ ಜಿ. ಪಂ. ಸಿಇಒ ಡಾ.ವಾಸಂತಿ ಅಮರ್ ಚಾಲನೆ

On: September 19, 2026 5:29 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸಮರ್ಥ ಪ್ರಜಾಸತ್ತೆಗೆ ಪ್ರತಿಯೊಬ್ಬರ ಮತ ಮೌಲ್ಯಯುತ: ಡಾ. ವಾಸಂತಿ ಅಮರ್

ಹೊಸಕೋಟೆಯಲ್ಲಿ ಮತದಾರರ ಜಾಗೃತಿ ಮ್ಯಾರಾಥಾನ್ ಹಾಗೂ SIR ವಿಶೇಷ ಆಂದೋಲನಕ್ಕೆ ಜಿ. ಪಂ. ಸಿಇಒ ಡಾ.ವಾಸಂತಿ ಅಮರ್ ಚಾಲನೆ

ತಾವರೆಕೆರೆ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನ ಮತವೂ ಅತ್ಯಂತ ಮೌಲ್ಯಯುತವಾಗಿದ್ದು, ಅರ್ಹ ಪ್ರಜೆಗಳೆಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹೊಸಕೋಟೆಯ ಶ್ರೀ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ “ಮತದಾರರ ವಿಶೇಷ ಜಾಗೃತಿ ಮ್ಯಾರಾಥಾನ್ – 2026” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವಿಶೇಷ ಜಾಗೃತಿ ಮ್ಯಾರಾಥಾನ್ ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ  ಡಾ. ವಾಸಂತಿ ಅಮರ್ ಅವರು ಅಧಿಕೃತವಾಗಿ ಚಾಲನೆ ನೀಡಿದರು.

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (SIR) – 2026: ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಿಇಒ ಡಾ. ವಾಸಂತಿ ಅಮರ್ ಅವರು, ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (SIR) – 2026ರ ಆಂದೋಲನದ ಕುರಿತು ಸಾರ್ವಜನಿಕರಿಗೆ ವಿವರವಾದ ಮಾಹಿತಿ ನೀಡಿದರು.

ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸಲು ಪ್ರತಿಯೊಬ್ಬ ಯುವಜನರು ಮತ್ತು ಅರ್ಹ ನಾಗರಿಕರು ಮತದಾರರ ಪಟ್ಟಿಗೆ ಸೇರ್ಪಡೆಯಾಗುವುದು ಅಗತ್ಯ ಎಂದು ಅವರು ತಿಳಿಸಿದರು. ಸಾರ್ವಜನಿಕರು ಮತ್ತು ಯುವಜನತೆಗೆ ನೀಡಿದ ಪ್ರಮುಖ ಸೂಚನೆಗಳು:
ಹೆಸರು ಪರಿಶೀಲನೆ: ಪ್ರತಿಯೊಬ್ಬ ನಾಗರಿಕರು ತಮ್ಮ ಹೆಸರು ಪ್ರಸ್ತುತ ಕರಡು ಮತದಾರರ ಪಟ್ಟಿಯಲ್ಲಿದೆಯೇ ಎಂಬುದನ್ನು ತಕ್ಷಣ ಪರಿಶೀಲಿಸಿಕೊಳ್ಳಬೇಕು.

ಹೊಸ ಹೆಸರು ಸೇರ್ಪಡೆ (18 ವರ್ಷ ತುಂಬಿದವರಿಗೆ): 18 ವರ್ಷ ಪೂರೈಸಿದ ಎಲ್ಲಾ ಯುವಕ-ಯುವತಿಯರು ತಪ್ಪದೇ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಅರ್ಜಿ ಸಲ್ಲಿಸಬೇಕು.

ತಿದ್ದುಪಡಿ ಮತ್ತು ವಿಳಾಸ ಬದಲಾವಣೆ: ಮತದಾರರ ಗುರುತಿನ ಚೀಟಿಯಲ್ಲಿ ತಿದ್ದುಪಡಿಗಳು, ವಿಳಾಸ ಬದಲಾವಣೆ ಅಥವಾ ಹೊಸದಾಗಿ ಹೆಸರು ಸೇರ್ಪಡೆ ಮಾಡಲು ನಿಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳನ್ನು (BLO) ನೇರವಾಗಿ ಸಂಪರ್ಕಿಸಬಹುದು.
ಡಿಜಿಟಲ್ ಬಳಕೆ: ಸಾರ್ವಜನಿಕರು ಆನ್‌ಲೈನ್ ಮೂಲಕ ಸುಲಭವಾಗಿ ಸೇವೆ ಪಡೆಯಲು Voter Helpline App ಅನ್ನು ಬಳಸಬಹುದು ಎಂದು ತಿಳಿಸಲಾಯಿತು.

ತಾಲೂಕು ಸ್ವೀಪ್ ಸಮಿತಿ ಹಾಗೂ ನಗರಸಭೆ ಹೊಸಕೋಟೆ (ಜಿಲ್ಲಾ ಸ್ವೀಪ್ ಸಮಿತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ)
“ನನ್ನ ಮತ – ನನ್ನ ಹಕ್ಕು, ಪ್ರಜಾಪ್ರಭುತ್ವಕ್ಕೆ ನಮ್ಮ ಕೊಡುಗೆ” ಹಾಗೂ “ಓಡಿ ಬನ್ನಿ ಜಾಗೃತಿ ಮೂಡಿಸಿ, ತಪ್ಪದೇ ಮತದಾನ ಮಾಡಿ” ಎಂಬ ಆಕರ್ಷಕ ಧ್ವಯಗಳೊಂದಿಗೆ ನೂರಾರು ಯುವಕ-ಯುವತಿಯರು ಮತ್ತು ಸಾರ್ವಜನಿಕರು ನಗರದ ಮುಖ್ಯ ರಸ್ತೆಗಳು ಹಾಗು ಜನನಿಬಿಡ ಪ್ರದೇಶಗಳಾದ ಮಾರುಕಟ್ಟೆ ಹಾಗು ವಿವಿಧ ಪೇಟೆಗಳಲ್ಲಿ ಓಡುವ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು ಹಾಗು ಹೊಸಕೋಟೆ ತಾಲ್ಲೂಕಿನ ಮತದಾರ ನೊಂದಣಾಧಿಕಾರಿ  ಶಿವಕುಮಾರ್ ಬಿ, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ  ಮುನಿಯಪ್ಪ ಹಾಗು ನಗರಸಭೆ ಆಯುಕ್ತರು ನೀಲಾ ಲೋಚನಾ ಪ್ರಭು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ನಗರಸಭೆ ಸಿಬ್ಬಂದಿ, ಜಿ.ಪಂ ಪ್ರತಿನಿಧಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now