--Ads--

ಶ್ರೀಲಂಕಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಶಾಸ್ತ್ರೀಯ ನೃತ್ಯೋತ್ಸವ,: ಭಾರತವನ್ನು ಪ್ರತಿನಿಧಿಸಲಿರುವ ಬೆಂಗಳೂರಿನ ಶ್ರೀ ಲಲಿತಾ ಕಲಾ ನಿಕೇತನ.

On: September 21, 2026 9:37 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…….

ಶ್ರೀಲಂಕಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಶಾಸ್ತ್ರೀಯ ನೃತ್ಯೋತ್ಸವ,: ಭಾರತವನ್ನು ಪ್ರತಿನಿಧಿಸಲಿರುವ ಬೆಂಗಳೂರಿನ ಶ್ರೀ ಲಲಿತಾ ಕಲಾ ನಿಕೇತನ

ಬೆಂಗಳೂರು: ನೃತ್ಯ ಗುರು ವಿದುಷಿ ಶ್ರೀಮತಿ ರೇಖಾ ಜಗದೀಶ್ ಅವರ ತಾಂತ್ರಿಕ ಅಕಾಡೆಮಿಕ್ ಮಾರ್ಗದರ್ಶನ ಹಾಗೂ ಕಲಾತ್ಮಕ ನೃತ್ಯ ನಿರ್ದೇಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಲಲಿತಾ ಕಲಾ ನಿಕೇತನ ಸಂಸ್ಥೆಯು ಶ್ರೀಲಂಕಾದಲ್ಲಿ ನಡೆಯುವ ಪ್ರತಿಷ್ಠಿತ ICCR ನೃತ್ಯೋತ್ಸವದಲ್ಲಿ ಭರತನಾಟ್ಯ ಪ್ರದರ್ಶನವನ್ನು ನೀಡಲು ಭಾರತದ ಪರವಾಗಿ ಬೆಂಗಳೂರಿನ ಈ ಸಂಸ್ಥೆ ಗೌರವಾನ್ವಿತ ಅವಕಾಶವನ್ನು ಪಡೆದಿದೆ.

ಈ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ಶ್ರೀ ಲಲಿತಾ ಕಲಾ ನಿಕೇತನದ ಕಲಾವಿದರು ಭಾರತದ ಶ್ರೀಮಂತ ಶಾಸ್ತ್ರೀಯ ನೃತ್ಯ ಪರಂಪರೆ, ಭರತನಾಟ್ಯದ ಸೌಂದರ್ಯ, ಶಾಸ್ತ್ರೀಯತೆಯ ಹಾಗೂ ಕಲಾತ್ಮಕ ವೈಭವವನ್ನು ಶ್ರೀಲಂಕಾದ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಅನಾವರಣಗೊಳಿಸಿ ಭಾರತೀಯ ಸಂಸ್ಕೃತಿಕ ನೃತ್ಯ ಪರಂಪರೆಯನ್ನ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶನ ಗೊಳಿಸಲಿದ್ದಾರೆ

ಇದರ ಜೊತೆಗೆ, **ಶ್ರೀಲಂಕಾದಲ್ಲಿರುವ ಭಾರತದ ರಾಯಭಾರಿ ಕಚೇರಿ (High Commission of India)**ಯ ಸಮ್ಮುಖದಲ್ಲಿ ವಿಶೇಷ ಭರತನಾಟ್ಯ ಪ್ರದರ್ಶನವನ್ನು ನೀಡುವ ಸೌಭಾಗ್ಯವೂ ಶ್ರೀ ಲಲಿತಾ ಕಲಾ ನಿಕೇತನಕ್ಕೆ ದೊರೆತಿದೆ.
ಎಂಬುದು ಅಭಿನಂದನೆಯ

ಈ ಅವಕಾಶವು ಬೆಂಗಳೂರಿನ ಶ್ರೀ ಲಲಿತಾ ಕಲಾ ನಿಕೇತನದ ಕಲಾಯಾತ್ರೆಯಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಭಾರತೀಯ ಶಾಸ್ತ್ರೀಯ ನೃತ್ಯವನ್ನು ಸಂರಕ್ಷಿಸುವ, ಉತ್ತೇಜಿಸುವ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವ ಸಂಸ್ಥೆಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಗುರು ವಿದುಷಿ ಶ್ರೀಮತಿ ರೇಖಾ ಜಗದೀಶ್ ಅವರು ICCR, ಭಾರತದ ರಾಯಭಾರಿ ಕಚೇರಿ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರ
ಕರ್ನಾಟಕದ ನೃತ್ಯ ಗುರುಗಳು ಪೂಜ್ಯ ಗುರುಗಳು, ಹಿರಿಯರು, ಹಿತೈಷಿಗಳು ಹಾಗೂ ನೃತ್ಯ ರಸಿಕರು ನೀಡುತ್ತಿರುವ ನಿರಂತರ ಪ್ರೋತ್ಸಾಹ ಮತ್ತು ಬೆಂಬಲಕ್ಕಾಗಿ ಹೃತ್ಪೂರ್ವಕ ವಂದನೆಗಳನ್ನ ವಿದುಷಿ ರೇಖಾ ಜಗದೀಶ್
ಕೃತಜ್ಞತಾಪೂರ್ವಕವಾಗಿಸಲ್ಲಿಸಿದ್ದಾರೆ.

ಈ ಸಾಧನೆಗೆ ಪತ್ರಕರ್ತರ ವೇದಿಕೆ ಬೆಂಗಳೂರು ಮತ್ತು ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರ ಬೆಂಗಳೂರು ವಿದುಷಿ ರೇಖಾ ಜಗದೀಶ್ ತಂಡವನ್ನು ಅಭಿನಂದನೆಸುತ್ತದೆ.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ವಿಜಯಿ ಭಾರತ್ ಫೌಂಡೇಶನ್ನ Khele Sanand Sports Utsav 2026 ಸೈನಾ ನೆಹ್ವಾಲ್ ಅವರ ಉಪಸ್ಥಿತಿಯಲ್ಲಿ ಆರಂಭ; 25,000+ ವಿದ್ಯಾರ್ಥಿಗಳ ಭಾಗವಹಿಸುವಿಕೆ

ಸಂವಿಧಾನದ ಆಶಯಗಳು ಈಡೇರಬೇಕಾದರೆ ಸಾಮಾಜಿಕ ಅಸಮಾನತೆ ನಿವಾರಣೆಯಾಗಬೇಕು: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರಿನ ಅಪೋಲೋ ಆಸ್ಪತ್ರೆಯಿಂದ ಭಾರತದ ಮೊದಲ ಎಕ್ಸೈಮ್ ಟೆಂಪರರಿ ಪ್ರೊಸ್ಟಾಟಿಕ್ ಶಸ್ತ್ರಚಿಕಿತ್ಸೆ; ಐದು ರೋಗಿಗಳಿಗೆ ಚಿಕಿತ್ಸೆ

ಎಸಿ ರೂಂನಲ್ಲಿ ಕೂರಬೇಡಿ, ಫೀಲ್ಡಿಗಿಳಿಯಿರಿ: ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಚಾಟ

20 ಕ್ಕೆ ಸಾಹಿತಿ ಕೆ.ಎಂ.ರೇವಣ್ಣ ಸರ್ವಾಧ್ಯಕ್ಷತೆಯಲ್ಲಿ 16 ನೇ ಕನ್ನಡ ಸಾಹಿತ್ಯ, ಸಂಸ್ಕೃತಿ ಸಮ್ಮೇಳನ

ಕ್ಯಾನ್‌ಬೆರಾ ವಿವಿಯಿಂದ ಯುಸಿ ಕ್ರಿಕೆಟ್ ಚಾಲೆಂಜ್‌ನ ಮೂರನೇ ಆವೃತ್ತಿ ಮುಕ್ತಾಯ: ಕ್ರೀಡೆ ಮತ್ತು ಶಿಕ್ಷಣ ಸಂಪರ್ಕಿಸುವ ಮಾರ್ಗಗಳ ಸೃಷ್ಟಿ