--Ads--

ಯುಕೆಪಿ-3 ಭೂಸ್ವಾಧೀನಕ್ಕೆ ಚುರುಕು: ಮುಳುಗಡೆ ಸಂತ್ರಸ್ತರಿಗೆ ಮೊದಲ ಆದ್ಯತೆ : ಸಚಿವ ಚಲುವರಾಯಸ್ವಾಮಿ

On: September 21, 2026 12:28 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಯುಕೆಪಿ-3 ಭೂಸ್ವಾಧೀನಕ್ಕೆ ಚುರುಕು: ಮುಳುಗಡೆ ಸಂತ್ರಸ್ತರಿಗೆ ಮೊದಲ ಆದ್ಯತೆ : ಸಚಿವ ಚಲುವರಾಯಸ್ವಾಮಿ

184 ಗ್ರಾಮಗಳ ಜಮೀನು ಸ್ವಾಧೀನ ಚರ್ಚೆ: 6 ಕ್ಷೇತ್ರಗಳಿಗೆ ತಲಾ 500 ಕೋಟಿ, ಒಟ್ಟು 3000 ಕೋಟಿ ಹಂಚಿಕೆ ಭರವಸೆ

ಯುಕೆಪಿ-3 ಭೂಸ್ವಾಧೀನ ಪ್ರಕ್ರಿಯೆಗೆ ಚುರುಕು – ಮುಳುಗಡೆ ಸಂತ್ರಸ್ತರಿಗೆ ಆದ್ಯತೆಯ ಪರಿಹಾರ

ಬೆಂಗಳೂರು, ಸೆ.21: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಹಂತ-1 ಮತ್ತು 2ರ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಆದ್ಯತೆಯ ಮೇರೆಗೆ ಪರಿಹಾರ ನೀಡಬೇಕು ಹಾಗೂ ಹಂತ-3ರ ವ್ಯಾಪ್ತಿಯಲ್ಲಿ ನಿಯಮಾನುಸಾರ ಪ್ರೊಪೋರ್ಷನೇಟ್ ಆಧಾರದಲ್ಲಿ ಭೂಸ್ವಾಧೀನ ಕೈಗೊಳ್ಳಬೇಕೆಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟ ಸೂಚನೆ ನೀಡಿದರು.

ವಿಧಾನಸೌಧದ ಕೊಠಡಿ ಸಂಖ್ಯೆ 313ರಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ 184 ಗ್ರಾಮಗಳ ಜಮೀನು ಸ್ವಾಧೀನ ಕುರಿತು ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಅಧಿಕಾರಿಗಳು ಮನಸೋಇಚ್ಛೆ ಕೆಲಸ ಮಾಡದೆ ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಯೋಜನೆ ವ್ಯಾಪ್ತಿಯ ಸಚಿವರು ಮತ್ತು ಶಾಸಕರು ಭೂಸ್ವಾಧೀನ ಹಂತಗಳ ಕುರಿತು ಪತ್ರದ ಮೂಲಕವೂ ಸಲಹೆ ನೀಡಬಹುದು ಎಂದರು.

ಕಳೆದ ವರ್ಷ ಹೊರಡಿಸಲಾದ ಸರ್ಕಾರಿ ಆದೇಶದನ್ವಯ ಪ್ರತಿ ಎಕರೆ ಭೂಮಿಗೆ ದರ ನಿಗದಿಯಾಗಿದ್ದು, ಕಟ್ಟಡಗಳ ಪರಿಹಾರ ದರ ನಿಗದಿಯಲ್ಲಿ ಗೊಂದಲಗಳಿದ್ದರೆ ಅಧಿಕಾರಿಗಳು ಇಲಾಖೆಗೆ ಪತ್ರ ಬರೆದು ಸ್ಪಷ್ಟತೆ ಪಡೆಯಬೇಕು. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದರು.

ಪುನರ್ವಸತಿ ಕಲ್ಪಿಸಲು ಜಮೀನು ಗುರುತಿಸುವ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದ್ದು, ಪುನರ್ವಸತಿ ಕೇಂದ್ರಗಳಲ್ಲಿ ಕೆಲವರು ಕೋಟ್ಯಂತರ ರೂಪಾಯಿಗಳ ಮಾರಾಟ ಒಪ್ಪಂದ (ಸೇಲ್ ಅಗ್ರಿಮೆಂಟ್) ಮಾಡಿಕೊಂಡಿರುವ ಆರೋಪಗಳ ಕುರಿತು ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಶೀಘ್ರದಲ್ಲೇ ಪ್ರತ್ಯೇಕ ಸಭೆ

ಸಂತ್ರಸ್ತರ ಹಿತದೃಷ್ಟಿಯಿಂದ ಆರ್.ಸಿ. ಶೆಲ್ಟರ್ ಕುರಿತು ಪ್ರತ್ಯೇಕ ಸಭೆ ನಡೆಸುವ ತೀರ್ಮಾನವನ್ನು ಸಭೆಯಲ್ಲಿ ಪ್ರಕಟಿಸಿದರು.

ಮುಳುಗಡೆಯಾಗಲಿರುವ 184 ಗ್ರಾಮಗಳ ಪೈಕಿ ವಿವಿಧ ಹಂತದ ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ 79 ಗ್ರಾಮಗಳಿಗೆ ಆದ್ಯತೆ ನೀಡುವುದು, ಇನ್ನೂ ಅಧಿಸೂಚನೆ ಹೊರಡಿಸಬೇಕಿರುವ 87 ಗ್ರಾಮಗಳನ್ನು ಪ್ರವಾಹ ಬಾಧಿತ ಸ್ಥಿತಿಗತಿಯ ಆಧಾರದ ಮೇಲೆ ಸ್ವಾಧೀನ ಪಡಿಸಿಕೊಳ್ಳುವುದು ಹಾಗೂ ಕೊನೆಯ ಹಂತದ ಗ್ರಾಮಗಳನ್ನು ಅಂತಿಮವಾಗಿ ಪರಿಗಣಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಪ್ರಸಕ್ತ ವರ್ಷ ಒಟ್ಟು 75,563 ಎಕರೆ ಜಮೀನಿನ ಪೈಕಿ ಅಂದಾಜು 15,000 ಎಕರೆಗೆ ಪರಿಹಾರ ವಿತರಿಸುವ ಗುರಿ ಇದೆ. ಈ ಪೈಕಿ ಬಬಲೇಶ್ವರ ವ್ಯಾಪ್ತಿಯ 5,600 ಎಕರೆಯಲ್ಲಿ ಕನಿಷ್ಠ 1,000 ಎಕರೆಗಾದರೂ ತಕ್ಷಣವೇ ಪರಿಹಾರ ನೀಡಬೇಕು. ಈಗಾಗಲೇ 18 ಗ್ರಾಮಗಳಿಗೆ ಹಣ ಬಿಡುಗಡೆಯಾಗಿದ್ದರೂ ವಿಜಯಪುರ ಜಿಲ್ಲೆಯ ಗ್ರಾಮಗಳು ಅದರಲ್ಲಿ ಸೇರಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ಚಲುವರಾಯಸ್ವಾಮಿ, ಪ್ರಸ್ತುತ ಪ್ರಸ್ತಾಪಿಸಿರುವ 3,000 ಕೋಟಿ ರೂ. ಮೊತ್ತದಲ್ಲಿ ಯೋಜನಾ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳಿಗೆ ತಲಾ 500 ಕೋಟಿ ರೂ. ಹಂಚಿಕೆ ಮಾಡುವ ಭರವಸೆ ನೀಡಿದರು.

ಏನಿದು ಯೋಜನೆ

ಆಲಮಟ್ಟಿ ಅಣೆಕಟ್ಟಿನ ಗೇಟುಗಳ ಎತ್ತರವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಏರಿಸಿ 100 ಟಿಎಂಸಿ ಹೆಚ್ಚುವರಿ ನೀರು ಸಂಗ್ರಹಿಸುವುದು ಮತ್ತು 9 ಉಪ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಈ ಯೋಜನೆಯ ಮುಖ್ಯ ಗುರಿ. ಇದಕ್ಕಾಗಿ ಒಟ್ಟು 1,33,867 ಎಕರೆ ಭೂಸ್ವಾಧೀನದ ಅಗತ್ಯವಿದೆ. ಈ ಹಿಂದೆ ಎಕರೆಗೆ 2 ಲಕ್ಷ ರೂ. ಇದ್ದ ಪರಿಹಾರವನ್ನು ಕಳೆದ ವರ್ಷ ನೀರಾವರಿ ಜಮೀನಿಗೆ 40 ಲಕ್ಷ ರೂ. ಮತ್ತು ಒಣಭೂಮಿಗೆ 30 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಈಗಾಗಲೇ 18 ಗ್ರಾಮಗಳ ಭೂಸ್ವಾಧೀನ ಮುಕ್ತಾಯಗೊಂಡಿದ್ದು, ಉಳಿದ 166 ಗ್ರಾಮಗಳ 71,284 ಎಕರೆ ಸ್ವಾಧೀನ ಬಾಕಿ ಇದೆ. ಕೆಲವು ನ್ಯಾಯಾಲಯ ವ್ಯಾಜ್ಯಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲಾಗುತ್ತಿದೆ.

ಈ ಉನ್ನತ ಮಟ್ಟದ ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ, ಶಾಸಕರಾದ ವಿಜಯಾನಂದ ಕಾಶಪ್ಪನವರ್, ಲಕ್ಷ್ಮಣ ಸವದಿ, ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ, ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹಾಗೂ ಕೆಬಿಜೆಎನ್‌ಎಲ್ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿನ್ನೀರಿನ ಬಾಧಿತರೊಂದಿಗೆ ಸಭೆ

ಯುಕೆಪಿ-3 ಸಭೆ ಬಳಿಕ ದೇವದುರ್ಗ ತಾಲೂಕಿನ ರಾಮದುರ್ಗ ಕೆರೆಯ ಹಿನ್ನೀರಿನಿಂದ ಬಾಧಿತರಾಗಿರುವ ಗೋವಿಂದಪಲ್ಲಿ ಮತ್ತು ಕರಡಿಗುಡ್ಡ ಗ್ರಾಮಗಳ ಜಮೀನುಗಳ ಭೂಸ್ವಾಧೀನ ಕುರಿತು ಸಭೆ ನಡೆಸಿದ ಸಚಿವರು, ಬಾಧಿತ 243.43 ಎಕರೆ ಭೂಮಿಗೆ ಪರಿಹಾರ ನೀಡಲು ಹಿನ್ನೀರಿನಿಂದ ಸಮಸ್ಯೆಯಾಗಿರುವ ಗ್ರಾಮಗಳ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಶ್ರೀಲಂಕಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಶಾಸ್ತ್ರೀಯ ನೃತ್ಯೋತ್ಸವ,: ಭಾರತವನ್ನು ಪ್ರತಿನಿಧಿಸಲಿರುವ ಬೆಂಗಳೂರಿನ ಶ್ರೀ ಲಲಿತಾ ಕಲಾ ನಿಕೇತನ.

ವಿಜಯಿ ಭಾರತ್ ಫೌಂಡೇಶನ್ನ Khele Sanand Sports Utsav 2026 ಸೈನಾ ನೆಹ್ವಾಲ್ ಅವರ ಉಪಸ್ಥಿತಿಯಲ್ಲಿ ಆರಂಭ; 25,000+ ವಿದ್ಯಾರ್ಥಿಗಳ ಭಾಗವಹಿಸುವಿಕೆ

ಸಂವಿಧಾನದ ಆಶಯಗಳು ಈಡೇರಬೇಕಾದರೆ ಸಾಮಾಜಿಕ ಅಸಮಾನತೆ ನಿವಾರಣೆಯಾಗಬೇಕು: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರಿನ ಅಪೋಲೋ ಆಸ್ಪತ್ರೆಯಿಂದ ಭಾರತದ ಮೊದಲ ಎಕ್ಸೈಮ್ ಟೆಂಪರರಿ ಪ್ರೊಸ್ಟಾಟಿಕ್ ಶಸ್ತ್ರಚಿಕಿತ್ಸೆ; ಐದು ರೋಗಿಗಳಿಗೆ ಚಿಕಿತ್ಸೆ

ಎಸಿ ರೂಂನಲ್ಲಿ ಕೂರಬೇಡಿ, ಫೀಲ್ಡಿಗಿಳಿಯಿರಿ: ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಚಾಟ

20 ಕ್ಕೆ ಸಾಹಿತಿ ಕೆ.ಎಂ.ರೇವಣ್ಣ ಸರ್ವಾಧ್ಯಕ್ಷತೆಯಲ್ಲಿ 16 ನೇ ಕನ್ನಡ ಸಾಹಿತ್ಯ, ಸಂಸ್ಕೃತಿ ಸಮ್ಮೇಳನ