ವಿಜಯ ದರ್ಪಣ ನ್ಯೂಸ್…..
ನವರಾತ್ರಿ ನೃತ್ಯ ಸಂಭ್ರಮ
ಮಹೇಶ್ವರಿ ದೇವಸ್ಥಾನದಲ್ಲಿ ನೃತ್ಯ ದಿಶಾ ಟ್ರಸ್ಟ್ನಿಂದ ಭಕ್ತಿಪೂರ್ಣ ನೃತ್ಯಾರಾಧನೆ

ಬೆಂಗಳೂರು: ನವರಾತ್ರಿ ಮಹೋತ್ಸವದ ಅಂಗವಾಗಿ ಮಲ್ಲೇಶ್ವರದ ಮಹೇಶ್ವರಿ ದೇವಸ್ಥಾನದಲ್ಲಿ ನೃತ್ಯ ದಿಶಾ ಟ್ರಸ್ಟ್ನ ಕಲಾವಿದರು ಮನಮೋಹಕ ನೃತ್ಯ ಪ್ರದರ್ಶನವನ್ನು ನೀಡಿ ಭಕ್ತರ ಮನಸೂರೆಗೊಂಡರು.
ಕಲಾಭೂಷಿಣಿ ಡಾ. ದರ್ಶಿನಿ ಮಂಜುನಾಥ್ ಅವರ ಶಿಷ್ಯವೃಂದವು ದೇವಿಯ ಮಹಿಮೆಯನ್ನು ಸಾರುವ ವಿವಿಧ ದೇವಿ ಕೃತಿಗಳನ್ನು ಭರತನಾಟ್ಯದ ಮೂಲಕ ಭಕ್ತಿಭಾವದಿಂದ ಪ್ರಸ್ತುತಪಡಿಸಿತು. ನವರಾತ್ರಿಯ ಆಧ್ಯಾತ್ಮಿಕ ಸೊಬಗಿಗೆ ನೃತ್ಯಕಲೆಯ ಸೌಂದರ್ಯವನ್ನು ಬೆಸೆದ ಈ ನೃತ್ಯಾರಾಧನೆ ಪ್ರೇಕ್ಷಕರಿಗೆ ವಿಶೇಷ ಅನುಭವವನ್ನು ನೀಡಿತು.
ಸಹನ, ದಿಶಾ, ದೀಪರಾಣಿ, ಸಾನ್ವಿ, ಭಾಮಿನಿ, ಹನ್ಸಿಕಾ, ದೀಪ ,ಸ್ಪೂರ್ತಿ, ಪ್ರಿಯಾಂಕಾ, ದೈವಿಕ, ಭವ್ಯಶ್ರೀ, ಕೀರ್ತನ, ಜೀವಿತಾ, ತನ್ಮಯ ಸೇರಿದಂತೆ ಅನೇಕ ಕಲಾವಿದರು ತಮ್ಮ ನೃತ್ಯಪ್ರತಿಭೆಯನ್ನು ಅನಾವರಣಗೊಳಿಸಿ, ದೇವಿಯ ಆರಾಧನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಭಕ್ತಿ, ಲಯ, ಭಾವ ಮತ್ತು ಕಲಾತ್ಮಕ ಅಭಿವ್ಯಕ್ತಿಗಳ ಸಮ್ಮಿಲನದೊಂದಿಗೆ ಮೂಡಿಬಂದ ಈ ನೃತ್ಯ ಪ್ರದರ್ಶನವು ನವರಾತ್ರಿ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿತು. ಕಲೆಯ ಮೂಲಕ ದೇವಿಯನ್ನು ಆರಾಧಿಸಿ, ಆಕೆಯ ಕೃಪೆಗೆ ಪಾತ್ರರಾದ ನೃತ್ಯ ದಿಶಾ ಟ್ರಸ್ಟ್ನ ಕಲಾವಿದರ ತಂಡದ ಪ್ರಯತ್ನವು ಶ್ಲಾಘನೀಯವಾಗಿತ್ತು.










