ವಿಜಯ ದರ್ಪಣ ನ್ಯೂಸ್…….
ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬೆಳೆಯಲು ಮಾಜಿ ಸಚಿವ ವಿ.ಮುನಿಯಪ್ಪ ಕೊಡುಗೆ ಇದೆ : ಶಾಸಕ ಡಾ.ಎಂ.ಸಿ.ಸುಧಾಕರ್

ಶಿಡ್ಲಘಟ್ಟ : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿವಮಾಜಿ ಸಚಿವ ವಿ.ಮುನಿಯಪ್ಪ ಅವರು ಕಾಂಗ್ರೆಸ್ ಅನ್ನು ತಳಮಟ್ಟದಲ್ಲಿ ಕಟ್ಟಿ ಬೆಳೆಸಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಬೇಕು ಅವರ ನೆರವು, ಸಹಕಾರವಿಲ್ಲದೆ ಯಾರೂ ರಾಜಕೀಯವಾಗಿ ಬೆಳೆದಿಲ್ಲ ಅವರನ್ನು ಅಲ್ಲಗೆಳೆಯುವ ಕೆಲಸ ಮಾಡುವವರಿಗೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಹಾಗು ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದ ಮಾಜಿ ಸಚಿವ ವಿ.ಮುನಿಯಪ್ಪ ನಿವಾಸದ ಆವರಣದಲ್ಲಿ ವಿಧಾನ ಪರಿಷತ್‌ನ ಆಗ್ನಿಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಪರ ಕಾಂಗ್ರೆಸ್ ಮುಖಂಡರು ಹಮ್ಮಿಕೊಂಡಿದ್ದ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ರಾಜಕೀಯವಾಗಿ ಯಾರಾದರೂ ಕಾಂಗ್ರೆಸ್ ನಲ್ಲಿ ಬೆಳೆದು ನಿಂತಿದ್ದಾರೆ ಹಿರಿಯರಾದ ವಿ.ಮುನಿಯಪ್ಪ ಕೃಪೆಯಿಂದ ಮಾತ್ರ ಅವರ ಸಹಕಾರ, ನೆರವು ಇಲ್ಲದೆ ರಾಜಕೀಯವಾಗಿ ನೆಲೆನಿಂತ ನಾಯಕರಿಲ್ಲ ಎಂಬುದನ್ನು ನೇರವಾಗಿ ಹೇಳುತ್ತೇನೆ ಎಂದು ಹೇಳಿದರು.
ಕೃಷಿಯೊಂದಿಗೆ ಕೈಗಾರಿಕೆ ಕ್ಷೇತ್ರದ ಬೆಳವಣಿಗೆ ನಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರದ ಆಶಯವಾಗಿದ್ದು, ಜಿಲ್ಲೆಯಲ್ಲಿ 10 ಸಾವಿರ ಎಕರೆಯಷ್ಟು ಜಮೀನನ್ನು ಕೈಗಾರಿಕೆ ಪ್ರದೇಶ ಅಭಿವೃದ್ಧಿಗಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಲ್ಲಿಯೂ ಯಾರನ್ನೂ ಒಕ್ಕಲೆಬ್ಬಿಸಿಲ್ಲ ,ರೈತರ ಒಪ್ಪಿಗೆ ಇಲ್ಲದೆ ಬಲವಂತವಾಗಿ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ವೆಂಕಟೇಶ್ವರ ಇಂಜಿನಿಯರಿಂಗ್ ಕಾಲೇಜ್ ವ್ಯವಸ್ಥಾಪಕ ಎಂ.ಶಶಿಧರ್ ಮುನಿಯಪ್ಪ ಮಾತನಾಡಿ, ಪದವೀಧರ ಕ್ಷೇತ್ರದ ಮತದಾರರು ಪ್ರತಿ 3 ವರ್ಷಕ್ಕೊಮ್ಮೆ ಮತದಾನ ಪಟ್ಟಿಯನ್ನು ನವೀಕರಣ ಮಾಡುವುದನ್ನು ಚುನಾವಣಾ ಆಯೋಗವು ಆ ಕ್ರಿಯೆನ್ನು ತಪ್ಪಿಸಿ ಒಮ್ಮೆ ನೋಂದಣಿ ಮಾಡಿಸಿದರೆ ಮತ್ತೆ ಮತ್ತೆ ಮರು ನೋಂದಣಿ ಮಾಡಿಸಬೇಕಿಲ್ಲ ಒಂದೊಮ್ಮೆ ಕ್ಷೇತ್ರ ಬದಲಾವಣೆ ಆದಾಗ ಅಥವಾ ಮೃತಪಟ್ಟಾಗ ಮಾತ್ರ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಆಗ್ರಹಿಸಿದರು.
ಕ್ಷೇತ್ರದಲ್ಲಿ ಗುಂಪುಗಾರಿಕೆ ಇರುವುದು ಸತ್ಯ ಆದರೆ ಅದನ್ನೇ ಮುಂದುವರಿಸಿಕೊಂಡು ಹೋಗುವುದು ಪಕ್ಷ , ಕಾರ್ಯಕರ್ತರ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುವುದನ್ನು ಅರಿತು ಅನೇಕ ಸಲ ಹೈ ಕಮಾಂಡ್
ಬಳಿ ನಾನು ಹಾಗೂ ಶಾಸಕ ಡಾ.ಎಂ.ಸಿ.ಸುಧಾಕರ್ ಪ್ರಸ್ತಾಪಿಸಿದ್ದು ಸತ್ಯ ಎಂದು ಹೇಳಿದರು.
ಆದರೆ ಏಕೋ ಹೈಕಮಾಂಡ್ ಅಷ್ಟಾಗಿ ಗಮನ ಹರಿಸಲಿಲ್ಲ ಎಂದು ಬೇಸರ ವಕ್ತಪಡಿಸಿದ ಅವರು ಸಮಯ ಬಂದಾಗ ಎಲ್ಲಾ ಸರಿಹೋಗುತ್ತದೆ ಎಂದರು.
ಆಗ್ನೆಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಮಾತನಾಡಿ , ನಾನು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತನಾಗಿದ್ದು ನಿಮ್ಮಗಳ ಸೇವೆ ಮಾಡಲು ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಆರಿಸಿ ಕಳುಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಆಂಜಿನಪ್ಪ (ಪುಟ್ಟು),ಕೋಚಿಮುಲ್ ಮಾಜಿ ನಿರ್ದೇಶಕ ಶ್ರೀನಿವಾಸ್ , ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾಲ್ಫಿನ್ ನಾಗರಾಜ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಹೊಸಪೇಟೆ ಮುನಿಯಪ್ಪ, ಜಿಪಂ ಮಾಜಿ ಅಧ್ಯಕ್ಷ ವಿ.ಸುಬ್ರಮಣಿ, ಯುವ ಕಾಂಗ್ರೆಸ್ ಉಪಾಧ್ಯಕ್ಷ ದೇವರಮಳ್ಳೂರು ರಾಕೇಶ್, ಸಿ.ಎನ್.ಮಹೇಶ್ ,ಡಿ.ವಿ.ಆಂಜನೇಯರೆಡ್ಡಿ , ಸುನಿಲ್ ಮುಂತಾದವರು ಹಾಜರಿದ್ದರು.









