ವಿಜಯ ದರ್ಪಣ ನ್ಯೂಸ್…….
ಗಂಗಾಭವಾನಿ ಎಫ್.ಪಿ.ಒ. ರೈತ ಷೇರುದಾರರಿಗೆ ಸೂಕ್ಷ್ಮ ಪೋಷಕಾಂಶ ಬಳಕೆ ಕುರಿತು ತರಬೇತಿ ಹಾಗೂ ಕೃಷಿ ಪರಿಕರ ವಿತರಣೆ

ಶಿಡ್ಲಘಟ್ಟ : ಐಸಿಎಆರ್ -ಐಐಎಚ್ಆರ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ರಮ್ಯಾ, ಬಾಲಕೃಷ್ಣ, ವಾಸುಗಿ, ಕ್ಯಾರೋಲಿನ್, ಭುವನೇಶ್ವರಿ ರೈತರಿಗೆ ಮಣ್ಣಿನ ಆರೋಗ್ಯ, ಸಮತೋಲಿತ ಪೋಷಕಾಂಶ, ಸಮಗ್ರ ಕೀಟ ನಿರ್ವಹಣೆ, ಯಾಂತ್ರೀಕರಣ ಹಾಗೂ ಮೌಲ್ಯವರ್ಧನೆ ಕುರಿತು ಮಾರ್ಗದರ್ಶನ ನೀಡಿದರು.
ವೈಜ್ಞಾನಿಕ ಕೃಷಿ ಅಳವಡಿಕೆ, ಮಣ್ಣಿನ ಆರೋಗ್ಯ ಸಂರಕ್ಷಣೆ ಹಾಗೂ ತೋಟಗಾರಿಕಾ ಉತ್ಪಾದಕತೆ ಹೆಚ್ಚಿಸಲು ಸೆಹಗಲ್ ಫೌಂಡೇಶನ್ ವತಿಯಿಂದ ಬಶೆಟ್ಟಿಹಳ್ಳಿಯ ಗಂಗಾಭವಾನಿ ಎಫ್.ಪಿ.ಒ ರೈತ ಷೇರುದಾರರಿಗೆ ಸೂಕ್ಷ್ಮ ಪೋಷಕಾಂಶ ಬಳಕೆ ಕುರಿತು ತರಬೇತಿ ಹಾಗೂ ಕೃಷಿ ಪರಿಕರ ವಿತರಣೆ ನಡೆಯಿತು.
ರೈತರಿಗೆ ಜೈವಿಕ ಗೊಬ್ಬರ, ತರಕಾರಿ ಬೀಜ ಕಿಟ್, ಹಣ್ಣಿನ ನೊಣ ಬಲೆ, ಸೀಬೆ ಸಸಿ, ಪಿಒಪಿ ಕಿಟ್ ನೀಡಿ, ಅರ್ಕಾ ಈರುಳ್ಳಿ ಬಿತ್ತನೆ ಯಂತ್ರ ಎಫ್.ಪಿ.ಒಗೆ ಹಸ್ತಾಂತರಿಸಲಾಯಿತು.
ಇದೇ ವೇಳೆ ರೈತ-ವಿಜ್ಞಾನಿ ಸಂವಾದ ನಡೆಯಿತು,
ಗಂಗಾಭವಾನಿ FPO ಅಧ್ಯಕ್ಷರಾದ ಶ್ರೀ ವಿಜಯ ಬಾವರೆಡ್ಡಿ ಮಾತನಾಡಿದರು.
ಈ ಸಂದರ್ಭದಲ್ಲಿ ICAR-IIHRನ ಪ್ರಧಾನ ವಿಜ್ಞಾನಿಗಳಾದ ಡಾ. ರಮ್ಯಾ ಎಚ್.ಆರ್ , ಡಾ. ಬಿ. ಬಾಲಕೃಷ್ಣ, ಡಾ. ವಾಸುಗಿ, ಡಾ.ಕ್ಯಾರೋಲಿನ್ ರಥಿನಕುಮಾರಿ, ಡಾ. ಭುವನೇಶ್ವರಿ ,ಸೆಹಗಲ್ ಫೌಂಡೇಶನ್ ವತಿಯಿಂದ ಕ್ಷೇತ್ರ ತಜ್ಞರಾದ ನವೀನ್ ಕುಮಾರ್, ರಮೇಶ್, ನಾಗರಾಜು, ಗಂಗಾಭವಾನಿ FPO ಅಧ್ಯಕ್ಷ ಶ್ರೀ ವಿಜಯ ಬಾವರೆಡ್ಡಿ,ನಿರ್ದೇಶಕರಾದ ಟಿ.ಕೆ.ಅರುಣಕುಮಾರ್ , ಲಕ್ಕೇನಹಳ್ಳಿ ವೆಂಕಟೇಶ್, ಆನೆಮಡಗು ಶಿವಣ್ಣ, ಗೌಡನಹಳ್ಳಿ ರವಿಕುಮಾರ್ , ಬಂದರಘಟ್ಟ ಕೋನಪ್ಪರೆಡ್ಡಿ , DEO ಬೈರೇಗೌಡ ಹಾಗೂ ರೈತ ಷೇರುದಾರರು ಹಾಜರಿದ್ದರು.








