ವಿಜಯ ದರ್ಪಣ ನ್ಯೂಸ್……
ಪದವೀಧರರ ನಿಜವಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಏಕೈಕ ಉದ್ದೇಶದಿಂದ ಸ್ಪರ್ಧೆ : ಪಕ್ಷೇತರ ಅಭ್ಯರ್ಥಿ ಬರೀದ್

ಶಿಡ್ಲಘಟ್ಟ : ಪದವೀಧರರ ನಿಜವಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಏಕೈಕ ಉದ್ದೇಶದಿಂದ ಸ್ಪರ್ಧಿಸುತ್ತಿದ್ದೇನೆ ಈ ಕ್ಷೇತ್ರದಲ್ಲಿ ಸೇವೆ ಮಾಡುವ
ಒಳ್ಳೆಯ ಉದ್ದೇಶದಿಂದ ನಿಮ್ಮ ಮುಂದೆ ಬಂದಿದ್ದೇನೆ
ಎಂದು ಆಗ್ನೇಯ ಪದವಿಧರರ ಪಕ್ಷೇತರ ಅಭ್ಯರ್ಥಿ ಬರೀದ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು
ಪದವೀಧರರ ಸಮಸ್ಯೆಗಳ ಪರ ನಿರಂತರವಾಗಿ ಧ್ವನಿ ಎತ್ತುವುದರ ಜತೆಗೆ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸೇವೆ ಸಲ್ಲಿಸುತ್ತೇನೆ ,ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಾನು ಆಯ್ಕೆಯಾದರೆ ಪದವೀಧರರ ಧ್ವನಿಯಾಗಿ ಮೇಲ್ಮನೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ತಾವು ಕಳೆದ 10 ವರ್ಷಗಳಿಂದ ವಕೀಲ ವೃತ್ತಿಯಲ್ಲಿ ನಿರತರಾಗಿದ್ದು,ಯಾವುದೇ ಬಂಡವಾಳ ಹೂಡಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಬಂದಿಲ್ಲ ಎಂದರು.
ಐದು ಜಿಲ್ಲೆಗಳ ವ್ಯಾಪ್ತಿಯ ಪದವೀಧರ ಮತದಾರರು ನನ್ನ ಉದ್ದೇಶವನ್ನು ಪರಿಗಣಿಸಿ ಮತ ನೀಡಬೇಕು ನನ್ನನ್ನು ಆಯ್ಕೆ ಮಾಡಿ ಕಳುಹಿಸಿದರೆ ನಾನು ನಿಮ್ಮ ನಿಜವಾದ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಚುನಾವಣೆಯಲ್ಲಿ ಅಭ್ಯರ್ಥಿಯ ವ್ಯಕ್ತಿತ್ವ, ಸೇವಾ ಮನೋಭಾವ ಮತ್ತು ಜನರೊಂದಿಗಿನ ಸಂಪರ್ಕವನ್ನು ಗಮನಿಸಿ ಮತದಾರರು ಮತ ಚಲಾಯಿಸಬೇಕು
ಮನವಿ ಮಾಡಿದರು.
ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿರುವುದು ನೋವು ತಂದಿದೆ ಮತದಾರರೊಂದಿಗಿನ ನಿರಂತರ ಸಂಪರ್ಕವೇ ನನ್ನ ದೊಡ್ಡ ಆಸ್ತಿ ನನಗೆ ಒಂದು ಅವಕಾಶ ನೀಡಿದರೆ, ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಚುನಾವಣೆ ಹಣ ಖರ್ಚು ಮಾಡುವ ಸ್ಪರ್ಧೆಯಾಗದೆ, ಜನಸೇವೆಗೆ ವೇದಿಕೆಯಾಗಬೇಕು ಎಂದು ಮನವಿ ಮಾಡಿದರು.
ಹಣ ಹೂಡಿ, ಗೆದ್ದ ಬಳಿಕ ಅದನ್ನು ಮರಳಿ ಪಡೆಯುವ ಮನೋಭಾವ ಬೆಳೆಯುತ್ತಿರುವುದು ಸರಿಯಲ್ಲ , ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ಕಾಲಹರಣ ಮಾಡಲಾಗುತ್ತಿದೆ ರಾಜಕೀಯದಲ್ಲಿ ಜನಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜಮೀರ್ ,ಜಾಹೀದ್ , ಇನಾಯತ್ತುಲ್ಲಾ ,ವಸೀಮ್ ಮತ್ತಿತರರು ಹಾಜರಿದ್ದರು.










