--Ads--

ನಂದಿನಿ ಲೇಔಟ್ ನಲ್ಲಿ 25 ನೇ ವರ್ಷದ ನವರಾತ್ರಿ ನಂದಿನಿ ಉತ್ಸವ 2026 ಶಾಸಕ ಗೋಪಾಲಯ್ಯ ಚಾಲನೆ.

On: October 15, 2026 4:46 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…….

ನಂದಿನಿ ಲೇಔಟ್ ನಲ್ಲಿ 25 ನೇ ವರ್ಷದ ನವರಾತ್ರಿ ನಂದಿನಿ ಉತ್ಸವ 2026 ಶಾಸಕ ಗೋಪಾಲಯ್ಯ ಚಾಲನೆ.

ಮಹಾಲಕ್ಷ್ಮೀ ಲೇಔಟ್ ಬೆಂಗಳೂರು : ನಂದಿನಿ ಲೇಔಟ್ ನಲ್ಲಿ 25ನೇ ವರ್ಷದ ಈ ನವರಾತ್ರಿ ನಂದಿನಿ ಉತ್ಸವಕ್ಕೆ ಸ್ಥಳೀಯ ಜನಪ್ರಿಯ ಶಾಸಕರು ಮಾಜಿ ಸಚಿವ ಕೆ ಗೋಪಾಲಯ್ಯ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 12 ರ ಸ್ಪರ್ಧಿ ಧೃವಂತ್, ಮತ್ತು ಜ್ಯೂನಿಯರ್ ಉಪೇಂದ್ರ ಪಾಲ್ಗೊಂಡು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಡಾ. ಡಿ ಎಲ್ ನಾಗೇಂದ್ರ, ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡ ಎನ್ ಜಯರಾಮಣ್ಣ ,ನವರಾತ್ರಿ ನಂದಿನಿ ಉತ್ಸವವನ್ನು ಕಳೆದ 25 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ
ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಎಫ್ ಕೆ ಸಿ ಸಿ ನಿರ್ದೇಶಕರಾದ ಕೆ ವಿ ರಾಜೇಂದ್ರ ಕುಮಾರ್, ನಿಕಟಪೂರ್ವ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಅವಿನ್ ಆರಾಧ್ಯ, ನಿಸರ್ಗ ಜಗದೀಶ್, ವಾರ್ಡ್ ಅಧ್ಯಕ್ಷ ಭಾಸ್ಕರ್, ಮುಖಂಡರುಗಳಾದ ಶಿವಾನಂದ ಮೂರ್ತಿ, ,ಆನಂದ್, ಶಿವಕುಮಾರ್, ಕುಣಿಗಲ್ ನಾಗರಾಜ್, ಬೈಲಪ್ಪ, ಕಣ್ಣನ್, ಪುಷ್ಪಾ ರಾಜೇಂದ್ರ ಕುಮಾರ್ ಸೇರಿದಂತೆ ಹಲವು ಗಣ್ಯರು ಈ ವರ್ಣರಂಜಿತ ಸಮಾರಂಭದಲ್ಲಿ ಪಾಲ್ಗೊಂಡು ವಿದ್ಯುಕ್ತವಾಗಿ ಚಾಲನೆ ನೀಡಿದರು.

ಈ ಬಾರಿಯ ವಿಶೇಷವೇನೆಂದರೆ ಈ ನವರಾತ್ರಿ ನಂದಿನಿ ಉತ್ಸವ 25ನೇ ವರ್ಷ ಆಚರಣೆ ಮಾಡಲಿದ್ದು, 9 ದಿನಗಳ ಕಾಲ ಮಹಾಲಕ್ಷ್ಮಿ ಲೇಔಟ್ ನಂದಿನಿ ಲೇಔಟ್ ಅಕ್ಕಪಕ್ಕದ ಬಡಾವಣೆಗಳ ಜನರಿಗೆ ಭರಪೂರ ಮನರಂಜನೆ ಸಿಗಲಿದ್ದು, ಉತ್ಸವ ಕಮಿಟಿ ಅಧ್ಯಕ್ಷ ಕೆ ವಿ ರಾಜೇಂದ್ರ ಕುಮಾರ್ ಎಲ್ಲರೂ ಭಾಗವಹಿಸಿ ಈ ನವರಾತ್ರಿ ಹಾಗೂ ನಂದಿನಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದ್ದಾರೆ.

ಈ ಬಾರಿ ವಿಶೇಷವಾಗಿ ಮಹಿಳಾ ದಸರಾ ಯುವ ದಸರಾ ಆಯೋಜನೆ ಮಾಡಲಾಗಿದ್ದು ಮಹಿಳಾ ದಸರಾವನ್ನು ಶ್ರೀಮತಿ ಹೇಮಲತಾ ಗೋಪಾಲಯ್ಯನವರು ಯುವ ದಸರಾ ವನ್ನು ಮಂಜುನಾಥಗೌಡ ಗೋಪಾಲಯ್ಯರವರು ಉದ್ಘಾಟನೆ ಮಾಡಲಿದ್ದಾರೆ, ಇದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಶಿವತಾಂಡವಡ್ಯಾನ್ಸ್, ರೋಟರಿ ನಂದಿನಿ ಅವರ ಕಡೆಯಿಂದ ಗೊಂಬೆಯಾಟ, ಯೋಗ ನಾಟಕ ಚಲನಚಿತ್ರ ಗೀತೆಗಳು, ಗಾಯನ ಮತ್ತು ವಿಶೇಷವಾಗಿ ನಗೆಕೂಟ ಆಯೋಜನೆ ಮಾಡಿದ್ದು, ಗಂಗಾವತಿ ಬೀಚಿ ಪ್ರಾಣೇಶ್ ಮತ್ತು ತಂಡ ನಗೆಹಬ್ಬ ಭಾಗವಹಿಸಿ ಕಾರ್ಯಕ್ರಮ ನೀಡಲಿದ್ದಾರೆ. ರೂಪದರ್ಶಿ ಹಾಗೂ ನಟಿ ಅಮೂಲ್ಯ ಗೌಡ,ಬಿಗ್ ಬಾಸ್ ಕನ್ನಡ12 ರಿಯಾಲಿಟಿ ಶೋ ಸ್ಪರ್ಧಿ ಧೃವಂತ್ ಸೇರಿದಂತೆ ಹಲವು ಸೀನಿತಾರೆಯರ ಸಮಾಗಮ ಇರಲಿದೆ. ಜೊತೆಗೆ ರಾಜಕೀಯ ನಾಯಕರುಗಳಾದ ಆರ್, ಅಶೋಕ್, ಅಶ್ವಥ್ ನಾರಾಯಣ್ ಹಲವು ಶಾಸಕರು, ಸಚಿವರು, ಕೇಂದ್ರ ಸಚಿವರು ರಾಜ್ಯದ ಎಲ್ಲ ಪಕ್ಷಗಳ ಗಣ್ಯರು ಪಕ್ಷಾತೀತವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ವರುಣನ ಸಿಂಚನ ಈ ಕಾರ್ಯಕ್ರಮಕ್ಕೆ ಅಡ್ಡಿಯಾದ್ರೂ ಜನರು ಉತ್ಸಾಹದಿಂದ ಪಾಲ್ಗೊಂಡು ನೆಚ್ಚಿನ ತಾರೆಗಳನ್ನು ನೋಡಿ ಖುಷಿ ಪಟ್ಟರು.

ಸಂಗೀತ ಕಾರ್ಯಕ್ರಮ

ಬೆಂಗಳೂರು ; ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ವಯ್ಯಾಲಿಕಾವಲಿನ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ದಸರಾ ಬ್ರಹ್ಮೋತ್ಸವದ ಪ್ರಯುಕ್ತ ಅಕ್ಟೋಬರ್ 16, ಶುಕ್ರವಾರ ಸಂಜೆ 6-00ಕ್ಕೆ ಕು|| ಅನ್ವಿತಾ ಶ್ರೀಧರ್ ರವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ಶ್ರೀ ಎಸ್. ಶಶಿಧರ್ ಮತ್ತು ತಬಲಾ ವಾದನದಲ್ಲಿ ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಸಹಕರಿಸಲಿದ್ದಾರೆ ಎಂದು ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

WhatsApp

Join Now

Telegram

Join Now

Instagram

Join Now