--Ads--

ದುರ್ಗಾ ಮಹೇಶ್ವರಿ ದೇವಾಲಯದಲ್ಲಿ ನವರಾತ್ರಿಯ ದುರ್ಗಾಷ್ಟಮಿ ಮಹೋತ್ಸವ : ಸಂಪನ್ನರಾದ ಭಕ್ತ ಸಮೂಹ 

On: October 23, 2026 6:45 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ದುರ್ಗಾ ಮಹೇಶ್ವರಿ ದೇವಾಲಯದಲ್ಲಿ ನವರಾತ್ರಿಯ ದುರ್ಗಾಷ್ಟಮಿ ಮಹೋತ್ಸವ : ಸಂಪನ್ನರಾದ ಭಕ್ತ ಸಮೂಹ 

ದೇವನಹಳ್ಳಿ ತಾಲ್ಲೂಕು :  ವಿಜಯಪುರ ಹೋಬಳಿಯ ಗಡ್ಡದನಾಯಕನಹಳ್ಳಿಯ ದುರ್ಗಾ ಮಹೇಶ್ವರಿ ದೇವಾಲಯದಲ್ಲಿ ನವರಾತ್ರಿಯ ದುರ್ಗಾಷ್ಟಮಿ ಮಹೋತ್ಸವದ ಪ್ರಯುಕ್ತ ಬುಧವಾರ ದುರ್ಗಾಮಹೇಶ್ವರಿ ಪಲ್ಲಕ್ಕಿ ಉತ್ಸವ ನೆರವೇರಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ದುರ್ಗಾಮಹೇಶ್ವರಿ ಪಲ್ಲಕ್ಕಿ ಉತ್ಸವಕ್ಕೆ ವಿವಿಧ ಕಲಾ ತಂಡಗಳು ಮೆರಗು ನೀಡಿದವು. ದೇವಾಲಯದಲ್ಲಿ ದುರ್ಗಾ ಸಹಸ್ರನಾಮ ಪಾರಾಯಣ, ವಿವಿಧ ಪೂಜೆ ಹೋಮ, ದೇವಿಗೆ ಕುಂಬಾಭಿಷೇಕ, ಅಲಂಕಾರ, ದರ್ಶನ ಏರ್ಪಡಿಸಲಾಗಿತ್ತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೇವಿಯ ದರ್ಶನ ಪಡೆದರು. ಅನ್ನಸಂತರ್ಪಣೆ, ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಜೆ ಪರಿವರ್ತನ ನಾಟ್ಯ ಕಲಾ ಸಂಸ್ಥೆಯಿಂದ ನಾಟಕ, ಬೆಂಗಳೂರು ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

ಗಡ್ಡದನಾಯಕನಹಳ್ಳಿಯಲ್ಲಿ ಪ್ರತಿ ವರ್ಷ ನವರಾತ್ರಿ ದುರ್ಗಾಷ್ಟಮಿ ಮಹೋತ್ಸವ ಪ್ರಯುಕ್ತ ದುರ್ಗಾ ಮಹೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು,ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ನಾಗರಾಜಪ್ಪಸ್ವಾಮಿ ತಿಳಿಸಿದರು.

WhatsApp

Join Now

Telegram

Join Now

Instagram

Join Now