--Ads--

ವಿಜಯದಶಮಿ ಆಚರಣಾ ಪ್ರಯುಕ್ತ ಕುದುರೆ ಏರಿ ಬಂದ ತಹಶಿಲ್ದಾರ್ ಗಗನಸಿಂಧು

On: October 23, 2026 6:49 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ವಿಜಯದಶಮಿ ಆಚರಣಾ ಪ್ರಯುಕ್ತ ಕುದುರೆ ಏರಿ
ಬಂದ ತಹಶಿಲ್ದಾರ್ ಗಗನಸಿಂಧು

ಶಿಡ್ಲಘಟ್ಟ : ತಹಶೀಲ್ದಾರ್ ಗಗನಸಿಂಧು ಅವರು ವಿಜಯದಶಮಿ ಪ್ರಯುಕ್ತ ತಾಲ್ಲೂಕು ಕಚೇರಿಯಿಂದ ಕುದುರೆ ಏರಿ ಮೆರವಣಿಗೆಯಲ್ಲಿ ದೇವಾಲಯಕ್ಕೆ ಆಗಮಿಸಿದ್ದು ಸಾರ್ವಜನಿಕರ ಗಮನ ಸೆಳೆಯಿತು.
ವಿಜಯದಶಮಿ ಅಂಗವಾಗಿ ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ಸಂಜೆ ಶಮೀ (ಬನ್ನಿ) ವೃಕ್ಷ ಪೂಜೆ ನಡೆಯಿತು.
ಮೈಸೂರು ಪೇಟ ಧರಿಸಿ, ಕಚ್ಚೆ ಉಟ್ಟು, ಕುದುರೆ ಏರಿ ಬಂದ ತಹಶೀಲ್ದಾ‌ರ್ ಅವರನ್ನು ನಗರದ ಜನರು ಸಂಭ್ರಮದಿಂದ ಸ್ವಾಗತಿಸಿದರು.
ದೇವಾಲಯದ ಆವರಣದಲ್ಲಿ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿದ ತಹಶೀಲ್ದಾ‌ರ್, ಅಷ್ಟ ದಿಕ್ಕುಗಳಿಗೂ ಬಾಣಗಳನ್ನು ಬಿಡುವ ಮೂಲಕ ಸಾಂಪ್ರದಾಯಿಕ ಆಚರಣೆಯಲ್ಲಿ ಪಾಲ್ಗೊಂಡರು ಬಳಿಕ ಮಹಾ ಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಯಿತು.
ಭಕ್ತರು ಶಮೀ ವೃಕ್ಷದ ಎಲೆಗಳನ್ನು ಭಕ್ತಿಯಿಂದ ಸ್ವೀಕರಿಸಿ, ಕೆಲವರು ತಲೆಗೆ ಮುಡಿದರೆ, ಇನ್ನು ಕೆಲವರು ಮನೆಗೆ ಕೊಂಡೊಯ್ದರು.
ಸಂಪ್ರದಾಯದ ಆಚರಣೆಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ಕುದರೆ ಏರಿ ರಸ್ತೆಯ ಮೂಲಕ ಆಗಮಿಸಿದ್ದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

WhatsApp

Join Now

Telegram

Join Now

Instagram

Join Now