ವಿಜಯ ದರ್ಪಣ ನ್ಯೂಸ್…….
ಮಾಜಿ ಮಹಾಪೌರ ಎಂ.ಗೌತಮ್ ಕುಮಾರ್ ರವರ ಹುಟ್ಟುಹಬ್ಬದ ಸಂಭ್ರಮಾಚರಣೆ

ಸಾಮಾನ್ಯ ಕಾರ್ಯಕರ್ತ ಪ್ರಧಾನಿ ಸ್ಥಾನ ಅಲಂಕಾರಿಸುವ ಕಾರ್ಯಕರ್ತರಿಗೆ ಗೌರವ ನೀಡುವ ಪಕ್ಷ ಬಿಜೆಪಿ ಎಂ.ಗೌತಮ್ ಕುಮಾರ್
ಬೆಂಗಳೂರು: ಮಾಜಿ ಮಹಾಪೌರರು, ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಗೌತಮ್ ಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ.
ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್ ರವರು, ಕೇಂದ್ರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸಪ್ತಗಿರಿಗೌಡರು ಎಂ.ಗೌತಮ್ ಕುಮಾರ್ ರವರಿಗೆ ಶುಭ ಕೋರಿ ಸನ್ಮಾನಿಸಿದರು. ಕಾರ್ಯದರ್ಶಿ ಯದುಕುಮಾರ್ ಗೌಡ, ಮಹಿಳಾ ಮುಖಂಡರುಗಳಾದ ನೀತಾ ರೆಡ್ಡಿ, ಆನಿತಾ, ರೇವತಿ, ವರ್ಷಾ ಶರ್ಮ, ಮಾಜಿ ಪಾಲಿಕೆ ಸದಸ್ಯ ಕೃಷ್ಣಪ್ಪ, ಆರ್.ಎಸ್.ಎಸ್.ಮುಖಂಡರು, ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.ಗೋಪೂಜೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎಂ.ಗೌತಮ್ ಕುಮಾರ್ ರವರು ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಾರ್ಟಿ ನನ್ನ ಜೀವನದಲ್ಲಿ ಶಿಸ್ತು, ತಾಳ್ಮೆ ಮತ್ತು ಸಂಘಟನೆ ಹೋರಾಟ ಇವೆಲ್ಲವು ಕಲಿಸಿತು.
ದೇಶ ಮೊದಲು, ದೇಶಕ್ಕಾಗಿ ನಾವು ಎಂಬ ದೇಶಭಕ್ತಿ ಕಲಿಸಿತು. ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನು ದೇಶದ ಪ್ರಧಾನಿಯಾಗಬಲ್ಲ ಎಂಬುದು ನಿರೂಪಿಸಿದ್ದಾರೆ. ಚಹಾ ಮಾರುತ್ತಿದ್ದ ಬಾಲಕ ಇಂದು ದೇಶದ ಪ್ರಧಾನಿ ಸ್ಥಾನ ಅಲಂಕಾರಿಸಿದ್ದಾರೆ .
ಸಾಮಾನ್ಯ ಕಾರ್ಯಕರ್ತನಾದ ನನಗೆ ಎರಡು ಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟರು. ಜನರ ಬೆಂಬಲ ಮತ್ತು ಪಕ್ಷದ ಸಹಕಾರದಿಂದ ಎರಡು ಬಾರಿ ಬಿಬಿಎಂಪಿ ಸದಸ್ಯನಾಗಿ ಆಯ್ಕೆಯಾದೇ ನಂತರ ಬೆಂಗಳೂರು ನಗರ ಮಹಾಪೌರರಾಗಿ ಸೇವೆ ಸಲ್ಲಿಸುವ ಸೌಭಾಗ್ಯ ನನ್ನದಾಗಿತ್ತು. ಪಕ್ಷ ಎಲ್ಲವು ನನಗೆ ಕೊಟ್ಟಿದೆ.
ಮುಂಬರುವ ಪಾಲಿಕೆ ಚುನಾವಣೆ ಮತ್ತು ವಿಧಾನಸಭಾ ಚುನಾವಣೆ ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷಗಳು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಪಕ್ಷ ಸಂಘಟನೆಗೆ ಮೊದಲ ಆದ್ಯತೆ. ಕಾರ್ಯಕರ್ತರೆ ಪಕ್ಷದ ಜೀವಾಳ.
ರಾಜಕೀಯ ಮತ್ತು ಸಮಾಜಸೇವೆಯಲ್ಲಿ ಸದಾ ನನ್ನ ಜೊತೆಯಲ್ಲಿ ನಿಂತು ಸಹಕಾರ, ಬೆಂಬಲ ನೀಡಿದ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಜನತೆಗೆ ಹೃತ್ವೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ ಎಂದು ಹೇಳಿದರು.










