--Ads--

ಎಲ್.ಜಿ.ಯಿಂದ ಮನರಂಜನೆಯ ದೈತ್ಯ ತನ್ನ ಅತ್ಯಂತ ದೊಡ್ಡ 292 ಸೆಂ.ಮೀ.(115”) ಕ್ಯೂ.ಎನ್.ಇ.ಡಿ.ಇವೊ ಎಐ ಮಿನಿ ಎಲ್.ಇ.ಡಿ. ಟಿ.ವಿ. ಭಾರತದಲ್ಲಿ ಬಿಡುಗಡೆ

On: October 30, 2026 3:37 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…….

ಎಲ್.ಜಿ.ಯಿಂದ ಮನರಂಜನೆಯ ದೈತ್ಯ ತನ್ನ ಅತ್ಯಂತ ದೊಡ್ಡ 292 ಸೆಂ.ಮೀ.(115”) ಕ್ಯೂ.ಎನ್.ಇ.ಡಿ.ಇವೊ ಎಐ ಮಿನಿ ಎಲ್.ಇ.ಡಿ. ಟಿ.ವಿ. ಭಾರತದಲ್ಲಿ ಬಿಡುಗಡೆ

ಆಲ್ಫಾ 8ಎಐ ಪ್ರೊಸೆಸರ್ ಜೆನ್3 ತಂತ್ರಜ್ಞಾನದ ಬೆಂಬಲ ಹೊಂದಿರುವ ಎಲ್‌ಜಿಯ 2026ರ ಅತ್ಯಂತ ದೊಡ್ಡ ಕ್ಯೂ.ಎನ್.ಇ.ಡಿ. ಇವೊ ಟಿವಿಯು ಪ್ರಮಾಣೀಕೃತ ಶೇ.100 ರಷ್ಟು ಕಲರ್ ವಾಲ್ಯೂಮ್, ಪ್ರಿಸಿಷನ್ ಡಿಮ್ಮಿಂಗ್ ಆಲ್ಟ್ರಾ ಮತ್ತು 330ಹರ್ಟ್ಸ್ ವರೆಗಿನ ಮೋಷನ್ ಬೂಸ್ಟರ್‌ನೊಂದಿಗೆ ಚಿತ್ರಮಂದಿರ, ಕ್ರೀಡಾಂಗಣ ಹಾಗೂ ಗೇಮಿಂಗ್ ರಂಗದ ಅನುಭವವನ್ನು ಭಾರತೀಯ ಮನೆಗಳಿಗೆ ತರಲಿದೆ.

• ಎಲ್‌.ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಸಂಸ್ಥೆಯು ತನ್ನ 2026ರ ಕ್ಯೂ.ಎನ್.ಇ.ಡಿ. ಇವೊ ಶ್ರೇಣಿಯಲ್ಲಿ ಅತ್ಯಂತ ದೊಡ್ಡ ಮಾದರಿಯಾದ 292 ಸೆಂ.ಮೀ. ಕ್ಯೂ.ಎನ್.ಇ.ಡಿ. ಇವೊ ಎಐ ಮಿನಿ ಎಲ್.ಇ.ಡಿ. ಟಿವಿಯನ್ನು ಬಿಡುಗಡೆ ಮಾಡಿದೆ.

• ಚಿತ್ರಮಂದಿರದ ಅನುಭವ ಮನೆಗೆ ತಂದಿದೆ: ಪ್ರಿಸಿಷನ್ ಡಿಮ್ಮಿಂಗ್ ಆಲ್ಟ್ರಾ, ಇಂಟರ್‌ಟೆಕ್ -ಪ್ರಮಾಣೀಕೃತ ಶೇ.100 ಕಲರ್ ವಾಲ್ಯೂಮ್ ಹೊಂದಿರುವ ಡೈನಾಮಿಕ್ ಕ್ಯೂ.ಎನ್.ಇ.ಡಿ. ಕಲರ್ ಪ್ರೋ ಮತ್ತು ಎಐ ಸೂಪರ್ ಅಪ್‌ಸ್ಕೇಲಿಂಗ್ ತಂತ್ರಜ್ಞಾನಗಳು ಈ ಅತಿ ದೊಡ್ಡ ಪರದೆಯ ಮೇಲೆ ಆಳವಾದ ಕಾಂಟ್ರಾಸ್ಟ್, ಸಮೃದ್ಧ ಬಣ್ಣ ಹಾಗೂ ಸ್ಪಷ್ಟವಾದ 4ಕೆ ವಿವರಗಳನ್ನು ನೀಡುತ್ತವೆ.

• ಕ್ರೀಡಾಂಗಣದ ವಾತಾವರಣದ ಮರುಸೃಷ್ಟಿ: ವರ್ಚುವಲ್ 11.1.2-ಚಾನೆಲ್ ಸರೌಂಡ್ ಸೌಂಡ್ ಹೊಂದಿರುವ ಎಐ ಸೌಂಡ್ ಪ್ರೋ ಮತ್ತು ವೆಬ್ ಒ.ಎಸ್.26ರಲ್ಲಿ ಸಿಗುವ ರಿಯಲ್-ಟೈಮ್ ಸ್ಪೋರ್ಟ್ಸ್ ಅಪ್‌ಡೇಟ್‌ ಗಳು ಮನೆಗೇ ಕ್ರೀಡಾಂಗಣದ ಉತ್ಸಾಹ ಹಾಗೂ ಜೀವಂತಿಕೆಯನ್ನು ತರುತ್ತವೆ.

• ಗೇಮಿಂಗ್ ಅನುಭವದ ಉನ್ನತೀಕರಣ: 165ಹರ್ಟ್ಸ್ ವರೆಗಿನ ವಿ.ಆರ್.ಆರ್., 330ಹರ್ಟ್ಸ್ ವರೆಗಿನ ಮೋಷನ್ ಬೂಸ್ಟರ್, ಎಎಂಡಿ ಫ್ರೀಸಿಂಕ್™️ ಪ್ರೀಮಿಯಂ ಮತ್ತು ಆಟೋ ಲೋ ಲೇಟೆನ್ಸಿ ಮೋಡ್ ವೇಗದ ಗೇಮ್‌ ಗಳನ್ನು ಅತ್ಯಂತ ಸುಲಲಿತವಾಗಿ ಹಾಗೂ ವೇಗವಾಗಿ ಚಲಿಸುವಂತೆ ಮಾಡುತ್ತವೆ.

• ದೊಡ್ಡ ಪರದೆಯ ಮನರಂಜನೆ, ಇನ್ನು ಇನ್ನಷ್ಟು ಸ್ಮಾರ್ಟ್: ವೆಬ್ ಒಎಸ್ 26 ಆವೃತ್ತಿಯು ವಾಯ್ಸ್ ಐಡಿ, ಎಐ ಕನ್ಸೀರ್ಜ್ ಮತ್ತು ಮಲ್ಟಿ-ಎಐ ಬೆಂಬಲ ಸೇರಿದಂತೆ ಕೃತಕ ಬುದ್ಧಿಮತ್ತೆ ಆಧಾರಿತ ವೈಯಕ್ತಿಕ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಇವೆಲ್ಲವೂ ಎಲ್‌.ಜಿ ಶೀಲ್ಡ್‌ ನಿಂದ ಸುರಕ್ಷಿತವಾಗಿವೆ.

ಭಾರತೀಯ ಮನೆಗಳಿಗೆ ಪ್ರವೇಶಿಸಿದ ಮನರಂಜನೆಯ ಬೃಹತ್ ದೈತ್ಯ

ಬೆಂಗಳೂರು, ಅಕ್ಟೋಬರ್ 30, 2026: ಎಲ್‌.ಜಿ. ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿಮಿಟೆಡ್ (ಎಲ್.ಜಿ.ಐ.ಎಲ್) ಸಂಸ್ಥೆಯು ತನ್ನ 2026ರ ಕ್ಯೂ.ಎನ್.ಇ.ಡಿ. ಇವೊ ಶ್ರೇಣಿಯಲ್ಲಿ ಅತ್ಯಂತ ದೊಡ್ಡ ಮಾದರಿಯಾದ 292 ಸೆಂ.ಮೀ (115”) ಕ್ಯೂ.ಎನ್.ಇ.ಡಿ. ಇವೊ ಎಐ ಮಿನಿ ಎಲ್.ಇ.ಡಿ. ಟಿವಿಯನ್ನು ಇಂದು ಬಿಡುಗಡೆ ಮಾಡಿದೆ. ಮನರಂಜನೆಯ ಬೃಹತ್ ದೈತ್ಯ ಎಂದೇ ಬಿಂಬಿತವಾಗಿರುವ ಈ ಟಿವಿಯನ್ನು, ಅತ್ಯಂತ ದೊಡ್ಡ ಹಾಗೂ ತಲ್ಲೀನಗೊಳಿಸುವ ವೀಕ್ಷಣೆಯ ಅನುಭವವನ್ನು ಬಯಸುವ ವೀಕ್ಷಕರಿಗಾಗಿ ನಿರ್ಮಿಸಲಾಗಿದೆ. ಇದು ಚಿತ್ರಮಂದಿರದ ವೈಭವ, ಕ್ರೀಡಾಂಗಣದ ರೋಮಾಂಚನ ಹಾಗೂ ಗೇಮಿಂಗ್‌ ನ ತೀವ್ರತೆಯನ್ನು ನಿಮ್ಮ ಲಿವಿಂಗ್ ರೂಮ್‌ಗೆ ತರಲಿದೆ.

ಎಲ್‌.ಜಿ.ಯ ಆಲ್ಫಾ8 ಪ್ರೊಸೆಸರ್ ಜೆನ್3 ತಂತ್ರಜ್ಞಾನದ ಬೆಂಬಲ ಹೊಂದಿರುವ ಈ 292 (115″) ಕ್ಯೂ.ಎನ್.ಇ.ಡಿ. ಇವೊ ಟಿವಿಯು, ಮಿನಿ ಎಲ್.ಇ.ಡಿ. ಚಿತ್ರದ ಗುಣಮಟ್ಟವನ್ನು ಎಐ ಆಧರಿತ ಚಿತ್ರ ಮತ್ತು ಧ್ವನಿ ತಂತ್ರಜ್ಞಾನಗಳೊಂದಿಗೆ ಸಂಯೋಜಿಸುತ್ತದೆ. ಇದರಿಂದಾಗಿ ಈ ಅತಿ ದೊಡ್ಡ ಪರದೆಯ ಪ್ರತಿ ಅಂಗುಲದಲ್ಲೂ ಬಣ್ಣ, ಕಾಂಟ್ರಾಸ್ಟ್ ಮತ್ತು ಸೂಕ್ಷ್ಮ ವಿವರಗಳು ಅತ್ಯುತ್ತಮವಾಗಿ ಮೂಡಿಬರುತ್ತವೆ.

ಎಲ್‌.ಜಿ. ಎಲೆಕ್ಟ್ರಾನಿಕ್ಸ್ ಇಂಡಿಯಾದ ಮೀಡಿಯಾ ಎಂಟರ್ಟೈನ್ಮೆಂಟ್ ಸಲ್ಯೂಷನ್ ವಿಭಾಗದ ನಿರ್ದೇಶಕ ಬ್ರಿಯಾನ್ ಜಂಗ್, 292 ಸೆಂ.ಮೀ. (115″) ಕ್ಯೂ.ಎನ್.ಇ.ಡಿ. ಇವೊ ಮಿನಿ ಎಲ್.ಇ.ಡಿ. ಟಿವಿಯು ಅತ್ಯಂತ ತಲ್ಲೀನಗೊಳಿಸುವ ಗೃಹ ಮನರಂಜನಾ ಅನುಭವಗಳನ್ನು ಸೃಷ್ಟಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅತಿ ದೊಡ್ಡ ಪರದೆಯ ತಂತ್ರಜ್ಞಾನವನ್ನು ಸುಧಾರಿತ ಚಿತ್ರದ ಗುಣಮಟ್ಟ, ಎಐ ಆಧರಿತ ಧ್ವನಿ ಮತ್ತು ಸುಧಾರಿತ ಗೇಮಿಂಗ್ ವಿಶೇಷತೆಗಳೊಂದಿಇಗೆ ಸಂಯೋಜಿಸುವ ಮೂಲಕ, ನಾವು ಗ್ರಾಹಕರಿಗೆ ತಮ್ಮ ನೆಚ್ಚಿನ ಕ್ರೀಡೆಗಳು, ಸಿನಿಮಾಗಳು ಮತ್ತು ಗೇಮ್‌ ಗಳನ್ನು ಮನೆಯಲ್ಲೇ ಆನಂದಿಸಲು ಹೊಸ ಮಾರ್ಗಗಳನ್ನು ನೀಡುತ್ತಿದ್ದೇವೆ. ಮನರಂಜನೆಯ ಬೃಹತ್ ದೈತ್ಯ ಎಂಬ ತನ್ನ ಹೆಸರಿಗೆ ತಕ್ಕಂತೆ, ಇದು ಚಿತ್ರಮಂದಿರದ ವೈಭವ, ಕ್ರೀಡಾಂಗಣದ ರೋಮಾಂಚನ ಮತ್ತು ಗೇಮಿಂಗ್‌ ನ ಉತ್ಸಾಹವನ್ನು ಒಂದೇ ಪರದೆಯ ಮೇಲೆ ಒಟ್ಟಿಗೆ ತರುತ್ತದೆ,” ಎಂದು ಹೇಳಿದರು.

ಒಂದು ಸ್ಕ್ರೀನ್. ನಾಲ್ಕು ದೊಡ್ಡ ಅನುಭವಗಳು .
ಚಿತ್ರಮಂದಿರದ ಅನುಭವ ಮನೆಗೆ ತಂದಿದೆ
ಇಷ್ಟೊಂದು ದೊಡ್ಡ ಪರದೆಯಿದ್ದಾಗ, ಚಿತ್ರದ ಗುಣಮಟ್ಟವೂ ಅಷ್ಟೇ ಉನ್ನತ ಮಟ್ಟದಲ್ಲಿರಬೇಕಾಗುತ್ತದೆ. 292 ಸೆಂ.ಮೀ.(115”) ಕ್ಯೂ.ಎನ್.ಇ.ಡಿ. ಇವೊ ಟಿವಿಯು ಸಾವಿರಾರು ಲೋಕಲ್ ಡಿಮ್ಮಿಂಗ್ ವಲಯಗಳನ್ನು ನಿಯಂತ್ರಿಸಲು ಪ್ರಿಸಿಷನ್ ಡಿಮ್ಮಿಂಗ್ ಆಲ್ಟ್ರಾ ತಂತ್ರಜ್ಞಾನವನ್ನು ಬಳಸುತ್ತದೆ. ಇದು ಪ್ರಕಾಶಮಾನವಾದ ದೃಶ್ಯಗಳನ್ನು ಅತ್ಯಂತ ಸ್ಪಷ್ಟವಾಗಿರಿಸುವುದರ ಜೊತೆಗೆ ಕತ್ತಲೆಯ ದೃಶ್ಯಗಳಲ್ಲೂ ಸೂಕ್ಷ್ಮ ವಿವರಗಳನ್ನು ಎತ್ತಿಹಿಡಿಯುತ್ತದೆ. ಇದರ ಫಲಿತಾಂಶವಾಗಿ, ಗಾಢವಾದ ಕಪ್ಪು ಬಣ್ಣ, ಸ್ಪಷ್ಟವಾದ ಬೆಳಕಿನ ದೃಶ್ಯಗಳು ಮತ್ತು ಬಲವಾದ ಕಾಂಟ್ರಾಸ್ಟ್ ಮೂಡಿಬರುತ್ತದೆ; ಕತ್ತಲೆಯಿಂದ ಕೂಡಿದ ದೃಶ್ಯಗಳಲ್ಲೂ ಆಳವಾದ ವಿವರಗಳು ಕಳೆದುಹೋಗದೆ ಹಾಗೆಯೇ ಉಳಿಯುತ್ತವೆ.

ಡೈನಾಮಿಕ್ ಕ್ಯೂ.ಎನ್.ಇ.ಡಿ. ಕಲರ್ ಪ್ರೋ ಬಣ್ಣಗಳ ಮ್ಯಾಪಿಂಗ್ ಅನ್ನು ಅತ್ಯುತ್ತಮಗೊಳಿಸುತ್ತದೆ, ಇದರಿಂದಾಗಿ ಪ್ರಕಾಶಮಾನವಾದ ಎಚ್.ಡಿ.ಆರ್. ದೃಶ್ಯಗಳಲ್ಲೂ ಬಣ್ಣಗಳು ಸಮೃದ್ಧವಾಗಿ ಮತ್ತು ನಿಖರವಾಗಿ ಉಳಿಯುತ್ತವೆ. ಇದು ಶೇ.100ರಷ್ಟು ‘ಕಲರ್ ವಾಲ್ಯೂಮ್’ ಗಾಗಿ ಇಂಟರ್‌ಟೆಕ್ ನಿಂದ ಪ್ರಮಾಣೀಕೃತಗೊಂಡಿದ್ದು, ಸಂಪೂರ್ಣ 292 ಸೆಂ.ಮೀ. (115”) ಪರದೆಯಾದ್ಯಂತ ನೈಜ ಹಾಗೂ ನಿಖರವಾದ ಬಣ್ಣಗಳನ್ನು ಮರುಸೃಷ್ಟಿಸಲು ಸಹಾಯ ಮಾಡುತ್ತದೆ.
ಎಲ್‌.ಜಿ.ಯ 13 ವರ್ಷಗಳ ಒ.ಎಲ್.ಇ.ಡಿ. ನಾಯಕತ್ವವನ್ನು ಆಧಾರವಾಗಿಟ್ಟುಕೊಂಡು ಎಲ್‌.ಜಿ.ಯ ಒ.ಎಲ್.ಇ.ಡಿ. ಲೈಟ್-ಕಂಟ್ರೋಲ್ ಸಾಮರ್ಥ್ಯವನ್ನು ಕ್ಯೂ.ಎನ್.ಇ.ಡಿ. ತಂತ್ರಜ್ಞಾನಕ್ಕೆ ತರುವ ಆಲ್ಫಾ 8 ಎಐ ಪ್ರೊಸೆಸರ್ ಜೆನ್ 3 ಎಐ ಸೂಪರ್ ಅಪ್‌ಸ್ಕೇಲಿಂಗ್’ ತಂತ್ರಜ್ಞಾನಕ್ಕೂ ಶಕ್ತಿ ತುಂಬುತ್ತದೆ. ಡೀಪ್ ಲರ್ನಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು, ಇದು ಪರದೆಯ ಮೇಲಿನ ವಸ್ತುಗಳನ್ನು ವಿಶ್ಲೇಷಿಸಿ ಅವುಗಳ ವಿನ್ಯಾಸ, ಅಂಚುಗಳು ಮತ್ತು ಸೂಕ್ಷ್ಮ ವಿವರಗಳನ್ನು ಸುಧಾರಿಸುತ್ತದೆ, ಇದರಿಂದಾಗಿ ಈ ದೊಡ್ಡ ಪರದೆಯ ಮೇಲೆಯೂ 4ಕೆ ದೃಶ್ಯಗಳು ಅತ್ಯಂತ ನೈಸರ್ಗಿಕವಾಗಿ ಹಾಗೂ ಸ್ಪಷ್ಟವಾಗಿ ಕಾಣಿಸುತ್ತವೆ. ಎಐ ಪಿಕ್ಚರ್ ಪ್ರೋ ತಂತ್ರಜ್ಞಾನವು ಮುಖಗಳು, ದೇಹಗಳು ಮತ್ತು ಇತರ ಪ್ರಮುಖ ಅಂಶಗಳನ್ನು ಹೆಚ್ಚು ಸ್ಪಷ್ಟಗೊಳಿಸಿ ದೃಶ್ಯದ ಆಳದ ಅನುಭವವನ್ನು ಹೆಚ್ಚಿಸಿದರೆ, ಡೈನಮಿಕ್ ಟೋನ್ ಮ್ಯಾಪಿಂಗ್ ಪ್ರೋ ಪ್ರತಿ ಫ್ರೇಮ್ ಅನ್ನು ವಿಶ್ಲೇಷಿಸಿ ರೆಸಲ್ಯೂಶನ್, ಉಜ್ವಲತೆ ಮತ್ತು ಸ್ಪಷ್ಟತೆಯನ್ನು ಅತ್ಯುತ್ತಮಗೊಳಿಸುತ್ತದೆ.

ಕ್ರೀಡಾಂಗಣದ ವಾತಾವರಣದ ಮರುಸೃಷ್ಟಿ
292 ಸೆಂ.ಮೀ (115″) ಕ್ಯೂ.ಎನ್.ಇ.ಡಿ. ಇವೊ ಟಿವಿಯನ್ನು ನೇರ ಪ್ರಸಾರದ ಕ್ರೀಡೆಗಳು ದೊಡ್ಡ ಮಟ್ಟದ ಅನುಭವ ನೀಡುವಂತೆ ನಿರ್ಮಿಸಲಾಗಿದೆ. ಇದರ ವಿಶಾಲವಾದ ಬಣ್ಣಗಳ ಶ್ರೇಣಿಯು ಉಜ್ವಲ ಕ್ರೀಡಾ ದೃಶ್ಯಗಳಿಗೆ ಹೆಚ್ಚಿನ ಜೀವಂತಿಕೆಯನ್ನು ನೀಡುತ್ತದೆ. ಅದೇ ಸಮಯದಲ್ಲಿ, ಎಐ ಸೌಂಡ್ಡ್ ಪ್ರೋ ತಂತ್ರಜ್ಞಾನವು ಟಿವಿಯ ಇನ್-ಬಿಲ್ಟ್ ಸ್ಪೀಕರ್‌ಗಳ ಮೂಲಕ ವರ್ಚುವಲ್ 11.1.2-ಚಾನೆಲ್ ಸರೌಂಡ್ ಸೌಂಡ್ ಅನ್ನು ಸೃಷ್ಟಿಸಿ, ಅತ್ಯಂತ ಸ್ಪಷ್ಟವಾದ ಧ್ವನಿ ವಿಭಾಗನೆ ಮತ್ತು ಮಗ್ನಗೊಳಿಸುವ ಶಬ್ದದ ವಾತಾವರಣವನ್ನು ಒದಗಿಸುತ್ತದೆ. ಎಐ ಸೂಪರ್ ಅಪ್‌ಸ್ಕೇಲಿಂಗ್ ಮತ್ತು ಡೈನಾಮಿಕ್ ಟೋನ್ ಮ್ಯಾಪಿಂಗ್ ಪ್ರೋ ತಂತ್ರಜ್ಞಾನಗಳೊಂದಿಗೆ ಸೇರಿ, ಇದು ಕ್ರೀಡೆಗಳು ಮತ್ತು ದೊಡ್ಡ ಆಕ್ಷನ್ ದೃಶ್ಯಗಳಿಗೆ ನಿಜವಾದ ಕ್ರೀಡಾಂಗಣದ ರೀತಿಯ ಅನುಭವವನ್ನು ನೀಡುತ್ತದೆ.

ವೆಬ್ ಒ.ಎಸ್ 26 ಪ್ಲಾಟ್‌ಫಾರ್ಮ್‌ ನೊಂದಿಗೆ, ಕ್ರೀಡಾಭಿಮಾನಿಗಳು ಪರದೆಯಿಂದ ದೂರ ಸರಿಯದೆಯೇ ಪಂದ್ಯದ ಕ್ಷಣಕ್ಷಣದ ಮಾಹಿತಿಯನ್ನು ಪಡೆಯಬಹುದು. ಸ್ಪೋರ್ಟ್ಸ್ ಪೋರ್ಟಲ್ ನೇರ ಪ್ರಸಾರದ ಕಂಟೆಂಟ್, ಸ್ಕೋರ್, ಪಂದ್ಯಗಳ ವೇಳಾಪಟ್ಟಿ ಮತ್ತು ಲೀಗ್ ಪಟ್ಟಿಗಳನ್ನು ಒಂದೇ ಸ್ಥಳದಲ್ಲಿ ತರುತ್ತದೆ, ಹಾಗೂ ಸ್ಪೋರ್ಟ್ಸ್ ಅಲರ್ಟ್ ಆಯ್ಕೆ ಮಾಡಿದ ತಂಡಗಳು ಮತ್ತು ಲೀಗ್‌ ಗಳ ಸೂಚನೆಗಳನ್ನು ಕಳುಹಿಸುತ್ತದೆ. ಪಂದ್ಯದ ಪ್ರಗತಿ ಮತ್ತು ಪಂದ್ಯದ ಫಲಿತಾಂಶದ ಮುನ್ಸೂಚನೆಗಳಂತಹ ಪ್ರಮುಖ ಅಂಕಿ ಅಂಶಗಳು ಪರದೆಯ ಮೇಲಿನ ಎಐ ಕಾನ್ಸೀರ್ಜ್ ಕಾರ್ಡ್‌ನಲ್ಲಿ ಕಾಣಿಸಿಕೊಳ್ಳುತ್ತವೆ, ಇದು ವೀಕ್ಷಕರಿಗೆ ಒಂದೇ ಸಮಯದಲ್ಲಿ ಹಲವಾರು ಪಂದ್ಯಗಳನ್ನು ಅನುಸರಿಸಲು ಸಹಾಯ ಮಾಡುತ್ತದೆ.

ಗೇಮಿಂಗ್ ಅನುಭವದ ಉನ್ನತೀಕರಣ
ಗೇಮರ್‌ಗಳಿಗಾಗಿ, 292 ಸೆಂ.ಮೀ (115″) ಕ್ಯೂ.ಎನ್.ಇ.ಡಿ ಇವೊ ಟಿವಿಯು ತನ್ನ ಅತಿ ದೊಡ್ಡ ಪರದೆಯನ್ನು ತಕ್ಷಣವೇ ಸ್ಪಂದಿಸುವ ಗೇಮಿಂಗ್ ಡಿಸ್ಪ್ಲೇಯಾಗಿ ಪರಿವರ್ತಿಸುತ್ತದೆ. ಇದು 165ಹರ್ಟ್ಸ್ ವರೆಗಿನ ವೇರಿಯೇಬಲ್ ರಿಫ್ರೆಶ್ ರೇಟ್ (ವಿ.ಆರ್.ಆರ್.), ಎ.ಎಂ.ಡಿ. ಫ್ರೀಸಿಂಕ್™️ ಪ್ರೀಮಿಯಂ ಮತ್ತು ಆಟೋ ಲೋ ಲೇಟೆನ್ಸಿ ಮೋಡ್ (ಎ.ಎಲ್.ಎಲ್.ಎಂ) ತಂತ್ರಜ್ಞಾನಗಳನ್ನು ಬೆಂಬಲಿಸುತ್ತದೆ. ಇದರಿಂದಾಗಿ ಗೇಮ್‌ನಲ್ಲಿನ ವೇಗದ ಆಕ್ಷನ್ ದೃಶ್ಯಗಳು ಅತ್ಯಂತ ಸ್ಪಷ್ಟವಾಗಿ, ಅತ್ಯುತ್ತಮವಾಗಿ ಸ್ಪಂದಿಸುವಂತೆ ಮತ್ತು ಯಾವುದೇ ವಿಳಂಬವಿಲ್ಲದೆ ಸುಲಲಿತವಾಗಿ ಚಲಿಸುತ್ತವೆ.

ಹೊಸ ಮೋಷನ್ ಬೂಸ್ಟರ್ ತಂತ್ರಜ್ಞಾನವು ರಿಫ್ರೆಶ್ ರೇಟ್ ಅನ್ನು 330ಹರ್ಟ್ಸ್ ಗೆ ಹೆಚ್ಚಿಸುತ್ತದೆ, ಇದು ಮೋಷನ್ ಬ್ಲರ್ ಅನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ವೇಗದ ಶೂಟರ್ ಮತ್ತು ರೇಸಿಂಗ್ ಗೇಮ್‌ ಗಳಲ್ಲಿ ಕಣ್ಣಿಮೆಯಿಕ್ಕುವಷ್ಟರಲ್ಲಿ ನಿರ್ಧಾರ ಕೈಗೊಳ್ಳುವುದು ಪ್ರಮುಖವಾಗಿರುವುದರಿಂದ, ಇದು ದೃಶ್ಯಗಳನ್ನು ಅತ್ಯಂತ ಸುಲಲಿತವಾಗಿರಿಸುತ್ತದೆ. ಎಲ್‌.ಜಿ. ಗೇಮಿಂಗ್ ಪೋರ್ಟಲ್ ಸಾವಿರಾರು ಕ್ಲೌಡ್ ಗೇಮಿಂಗ್ ಸೇವೆಗಳು ಮತ್ತು ನೇಟಿವ್ ವೆಬ್ ಗೇಮ್‌ಗಳನ್ನು ಒಂದೇ ಸೂರಿನಡಿ ಲಭ್ಯವಾಗಿಸುವ ಮೂಲಕ ಪೂರ್ಣ ಪ್ರಮಾಣದ ತಾಣವಾಗಿ ಕಾರ್ಯನಿರ್ವಹಿಸುತ್ತದೆ.

ಬೃಹತ್ ಪರದೆಯ ಮನರಂಜನೆ, ಇನ್ನು ಇನ್ನಷ್ಟು ಸ್ಮಾರ್ಟ್
ಎಲ್‌ಜಿಯ 2026ರ ಕ್ಯೂ.ಎನ್.ಇ.ಡಿ.ಇವೊ ಶ್ರೇಣಿಯಲ್ಲಿ ಅತ್ಯಂತ ದೊಡ್ಡ ಮಾದರಿಯಾಗಿರುವ ಈ 292 ಸೆಂ.ಮೀ, (115″) ಟಿವಿಯು, ತನ್ನ ಬೃಹತ್ ಪರದೆಯೊಂದಿಗೆ ವೆಬ್ ಒ.ಎಸ್. 26 ನಲ್ಲಿ ಎಐ ಆಧರಿತ ವೈಯಕ್ತಿಕ ವೈಶಿಷ್ಟ್ಯಗಳನ್ನು ಸಂಯೋಜಿಸುತ್ತದೆ. ವಾಯ್ಸ್ ಐಡಿ ತಂತ್ರಜ್ಞಾನದ ಮೂಲಕ, ಈ ಟಿವಿಯು ಪ್ರತಿ ಬಳಕೆದಾರರ ಧ್ವನಿಯನ್ನು ಗುರುತಿಸುತ್ತದೆ ಮತ್ತು ಅವರ ವೈಯಕ್ತಿಕ ಮೈ ಪೇಜ್ ಹೋಮ್ ಸ್ಕ್ರೀನ್ ಅನ್ನು ಸ್ವಯಂಚಾಲಿತವಾಗಿ ಲೋಡ್ ಮಾಡುತ್ತದೆ. ಎಐ ಕನ್ಸೀರ್ಜ್ ವೀಕ್ಷಿಸಲಾಗುತ್ತಿರುವ ವಿಷಯಕ್ಕೆ ಅನುಗುಣವಾಗಿ ಸೂಕ್ತ ಸಲಹೆಗಳನ್ನು ಹಾಗೂ ಉಪಯುಕ್ತ ಕಾರ್ಯಗಳಿಗೆ ಸುಲಭ ಪ್ರವೇಶವನ್ನು ನೀಡುತ್ತದೆ. ಗೂಗಲ್ ಜೆಮಿನಿ ಮತ್ತು ಮೈಕ್ರೋಸಾಫ್ಟ್ ಕೊಪೈಲಟ್ ಬೆಂಬಲಿತ ಮಲ್ಟಿ ಎಐ ತಂತ್ರಜ್ಞಾನವು, ಬಳಕೆದಾರರು ವೀಕ್ಷಿಸುತ್ತಿರುವಾಗಲೇ ಪ್ರಶ್ನೆಗಳನ್ನು ಕೇಳಲು, ಮಾಹಿತಿಯನ್ನು ಪರಿಶೀಲಿಸಲು ಮತ್ತು ಸಂಬಂಧಿತ ವಿಷಯಗಳನ್ನು ಹುಡುಕಲು ಅವಕಾಶ ಮಾಡಿಕೊಡುತ್ತದೆ.

ಇವೆಲ್ಲವೂ ಎಲ್‌.ಜಿ ಶೀಲ್ಡ್‌ ನಿಂದ ಸುರಕ್ಷಿತವಾಗಿವೆ. ಸಿಇಎಸ್ 2026 ಇನ್ನೋವೇಶನ್ ಅವಾರ್ಡ್ ಪಡೆದಿರುವ ಈ ತಂತ್ರಜ್ಞಾನವು ಬಳಕೆದಾರರ ಡೇಟಾ ಮತ್ತು ವೈಯಕ್ತಿಕ ಅನುಭವಗಳನ್ನು ಸುರಕ್ಷಿತವಾಗಿಡಲು ಅತ್ಯಾಧುನಿಕ ಎನ್‌ಕ್ರಿಪ್ಶನ್ ಅನ್ನು ಬಳಸುತ್ತದೆ.

ಪ್ರಮುಖಾಂಶಗಳು
ಅನುಭವ ಪ್ರಮುಖ ತಂತ್ರಜ್ಞಾನಗಳು ಏನನ್ನು ನೀಡುತ್ತದೆ
ಮನೆಯಲ್ಲಿ ಚಿತ್ರಮಂದಿರ ಪ್ರಿಸಿಷನ್ ಡಿಮ್ಮಿಂಗ್ ಅಲ್ಟ್ರಾ, ಡೈನಮಿಕ್ ಕ್ಯೂ.ಎನ್.ಇ.ಡಿ. ಕಲರ್ ಪ್ರೋ (ಇಂಟರ್ಟೆಕ್-ಪ್ರಮಾಣೀಕೃತ ಶೇ.100 ಕಲರ್ ವಾಲ್ಯೂಂ), ಎಐ ಸೂಪರ್ ಅಪ್ಸ್ಕೇಲಿಂಗ್, ಡೈನಮಿಕ್ ಟೋನ್ ಮ್ಯಾಪಿಂಗ್ ಪ್ರೋ ಆಳವಾದ ಕಪ್ಪು, ನಿಖರ ಹೈಲೈಟ್ಸ್, ಸಮೃದ್ಧ ಬಣ್ಣ ಮತ್ತು ನೈಸರ್ಗಿಕ 4ಕೆ ವಿವರ 292 ಸೆಂ.ಮೀ. (115”) ಸ್ಕ್ರೀನ್ ನಲ್ಲಿ ಸ್ಟೇಡಿಯಂ ವಾತಾವರಣ ಎಐ ಸೌಂಡ್ ಪ್ರೋ (ವರ್ಚುಯಲ್ 11.1.2-ಚಾನೆಲ್), ಸ್ಪೋರ್ಟ್ಸ್ ಪೋರ್ಟಲ್, ಸ್ಪೋರ್ಟ್ಸ್ ಅಲರ್ಟ್ ಲೈವ್ ಸ್ಪೋರ್ಟ್ ಗೆ ತಲ್ಲೀನಗೊಳಿಸುವ ಶಬ್ದ ಮತ್ತು ರಿಯಲ್-ಟೈಮ್ ಮ್ಯಾಚ್ ಅಪ್ಡೇಟ್ ಗಳು ಗೇಮಿಂಗ್ ತಲ್ಲೀನತೆ 165 ಹರ್ಟ್ಸ್ ವರೆಗೆ ವಿ.ಆರ್.ಆರ್., 330 ಹರ್ಟ್ಸ್ ವರೆಗೆ ಮೋಷನ್ ಬೂಸ್ಟರ್, ಎಎಂಡಿ ಪ್ರೀಸಿಂಕ್™️ ಪ್ರೀಮಿಯಂ, ಎ.ಎಲ್.ಎಲ್.ಎಂ., ಎಲ್.ಜಿ. ಗೇಮಿಂಗ್ ಪೋರ್ಟಲ್ ಸುಲಲಿತ, ವಿಳಂಬವಿಲ್ಲದ ಗೇಮ್‌ಪ್ಲೇ ಮತ್ತು ಸಾವಿರಾರು ಕ್ಲೌಡ್ ಹಾಗೂ ವೆಬ್ ಗೇಮ್‌ಗಳಿಗೆ ಲಭ್ಯತೆ.
ಬೃಹತ್ ಸ್ಕ್ರೀನ್ ಸ್ಮಾರ್ಟ್ ಮನರಂಜನೆ ಆಲ್ಫಾ 8 ಎಐ ಪ್ರೊಸೆಸರ್ ಜೆನ್3 ವೆಬ್ ಒ.ಎಸ್.26, ವಾಯ್ಸ್ ಐಡಿ, ಎಐ ಕನ್ಸೀರ್ಜ್, ಮಲ್ಟಿ-ಎಐ, ಎಲ್.ಜಿ.ಶೀಲ್ಡ್ ಸುರಕ್ಷಿತ ಬಳಕೆದಾರರ ಡೇಟಾದೊಂದಿಗೆ, ಎಲ್‌.ಜಿ.ಯ 2026ರ ಅತಿ ದೊಡ್ಡ ಕ್ಯೂ.ಎನ್.ಇ.ಡಿ. ಇವೊ ಪರದೆಯ ಮೇಲೆ ವೈಯಕ್ತೀಕರಿಸಿದ ವೀಕ್ಷಣೆಯ ಅನುಭವ.

ಬೆಲೆ ಮತ್ತು ಲಭ್ಯತೆ
ಮಾದರಿ ಸ್ಕ್ರೀನ್ ಗಾತ್ರ ಬೆಲೆ- ಭಾರತ (ರೂ.ಗಳಲ್ಲಿ) ಮತ್ತು ಲಭ್ಯತೆ
115QNED90BL 292 cm (115″) DP ₹ 14,999,90
MRP ₹ 18,99,990

1 ಡಿಸ್ಪ್ಲೇ ಕಲರ್ ಗ್ಯಾಮಟ್ ವಾಲ್ಯೂಮ್ (ಸಿಜಿವಿ), ಇಂಟರ್‌ಟೆಕ್ ಸಂಸ್ಥೆಯಿಂದ ಸ್ವತಂತ್ರವಾಗಿ ದೃಢೀಕರಿಸಲ್ಪಟ್ಟಂತೆ ಡಿಸಿಐ-ಪಿ3 ಕಲರ್ ಸ್ಪೇಸ್‌ನ ಸಿಜಿವಿಗೆ ಸಮನಾಗಿರುತ್ತದೆ ಅಥವಾ ಅದನ್ನು ಮೀರಿದೆ.

ಹೊರನೋಟ: ದೊಡ್ಡ ಸ್ಕ್ರೀನ್ ಗೃಹ ಮನರಂಜನೆಯ ಉನ್ನತೀಕರಣ
92 ಸೆಂ.ಮೀ.(115″) ಕ್ಯೂ.ಎನ್.ಇ.ಡಿ. ಇವೊ ಎಐ ಮಿನಿ ಎಲ್.ಇ.ಡಿ. ಟಿವಿಯೊಂದಿಗೆ, ಎಲ್‌.ಜಿ. ಎಲೆಕ್ಟ್ರಾನಿಕ್ಸ್ ಇಂಡಿಯಾ ದೊಡ್ಡ ಪರದೆಯ ವೀಕ್ಷಣೆ, ಅತ್ಯಾಧುನಿಕ ಚಿತ್ರ ಸಂಸ್ಕರಣೆ ಮತ್ತು ಸಂಪರ್ಕಿತ ಮನರಂಜನೆಯ ಮೇಲೆ ಗಮನಹರಿಸುವ ಮೂಲಕ ತನ್ನ ಪ್ರೀಮಿಯಂ ಟೆಲಿವಿಷನ್ ಪೋರ್ಟ್‌ಫೋಲಿಯೋ ವಿಸ್ತರಿಸುವುದನ್ನು ಮುಂದುವರಿಸಿದೆ. ತನ್ನ ಅತ್ಯಂತ ದೊಡ್ಡ ಕ್ಯೂ.ಎನ್.ಇ.ಡಿ. ಇವೊ ಪರದೆಯ ಮೇಲೆ ಮಿನಿ ಎಲ್.ಇ.ಡಿ ತಂತ್ರಜ್ಞಾನ, ಎಐ ಆಧರಿತ ಸುಧಾರಣೆಗಳು, ಗೇಮಿಂಗ್ ಸಾಮರ್ಥ್ಯಗಳು ಮತ್ತು ವೈಯಕ್ತೀಕರಿಸಿದ ಸ್ಮಾರ್ಟ್ ಟಿವಿ ವೈಶಿಷ್ಟ್ಯಗಳನ್ನು ಒಟ್ಟುಗೂಡಿಸುವ ಮೂಲಕ, ಎಲ್‌.ಜಿ ಸಂಸ್ಥೆಯು ಚಿತ್ರಮಂದಿರ, ಕ್ರೀಡಾಂಗಣ ಮತ್ತು ಗೇಮಿಂಗ್ ರಂಗದ ಅನುಭವವನ್ನು ಮನೆಯಲ್ಲೇ ಬಯಸುವ ಗ್ರಾಹಕರ ಬದಲಾಗುತ್ತಿರುವ ಮನರಂಜನಾ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ.

***

WhatsApp

Join Now

Telegram

Join Now

Instagram

Join Now