--Ads--

ನವೆಂಬರ್ 1ರಿಂದ 23ರವರೆಗೆ ಕರ್ನಾಟಕ ಕ್ರಿಕೆಟ್ ಸಮರ-ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್-ಸೀಸನ್-3

On: October 31, 2026 2:32 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…….

ನವೆಂಬರ್ 1ರಿಂದ 23ರವರೆಗೆ ಕರ್ನಾಟಕ ಕ್ರಿಕೆಟ್ ಸಮರ-ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್-ಸೀಸನ್-3

ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್-ಸೀಸನ್-3 ಕರ್ನಾಟಕ ಕ್ರಿಕೆಟ್ ಸಮರ ನವೆಂಬರ್ 1ರಿಂದ 23ರವರಗೆ ಜರುಗಲಿದೆ ಇದರ ಕುರಿತು ಅಧ್ಯಕ್ಷ ಸಿದ್ದು ಐ.ದೇಸಾಯಿ, ನಿರ್ದೇಶಕರು ಡಾ.ರಮೇಶ್ ಬಿ.ಎನ್. ಸತೀಶ್, ಪ್ರಕಾಶ್ ರವರು ಮಾಧ್ಯಮಗೋಷ್ಟಿ.

ಇದೇ ಸಂದರ್ಭದಲ್ಲಿ ಅಧ್ಯಕ್ಷ ಸಿದ್ದು ಐ.ದೇಸಾಯಿರವರು ಮಾತನಾಡಿ ಐ.ಪಿ.ಎಲ್.ಮಾದರಿಯಲ್ಲಿ ಕೆ.ಎಸ್.ಪಿ.ಎಲ್. ಸಾಫ್ಟ್ ಬಾಲ್ ಕ್ರಿಕೆಟ್ ನವೆಂಬರ್ 1ರಿಂದ 23ರವರೆಗೆ ಸೊಲದೇವನಹಳ್ಳಿ ಆಚಾರ್ಯ ಸ್ಪೇಡಿಯಂನಲ್ಲಿ ನಡೆಯಲಿದೆ. ರಾಜ್ಯದ 31 ಜಿಲ್ಲೆಯ 32ತಂಡಗಳು ಭಾಗವಹಿಸಲಿದೆ.

ಪ್ರಥಮ ಬಹುಮಾನ 30 ಲಕ್ಷ ,ದ್ವಿತೀಯ ಬಹುಮಾನ 20ಲಕ್ಷ, ಮೊದಲ ಸಮಾಧಾನಕರ ಬಹುಮಾನ 10ಲಕ್ಷ, ಎರಡನೇಯ ಸಮಾಧಾನಕರ 10ಲಕ್ಷ, ಒಟ್ಟು ಬಹುಮಾನ ಮೊತ್ತ 70ಲಕ್ಷ ಒಳಗೊಂಡಿದೆ.

ಕ್ರಿಕೆಟ್ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಗ್ರಾಮೀಣ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಆರಂಭಿಸಲಾಯಿತು. ಎರಡು ಸೀಸನ್ ಅತ್ತುತ್ಯಮವಾಗಿ ಯಶ್ವಸಿಯಾಗಿದೆ. ಮೂರನೇಯ ಸೀಸನ್ ಭರ್ಜರಿ ತಯಾರಿಯಾಗಿದೆ ಕ್ರಿಕೆಟ್ ಪ್ರೇಮಿಗಳು ಆಗಮಿಸಿ ಪ್ರೋತ್ಸಾಹ ನೀಡಬೇಕು. ಚಿತ್ರನಟ ಡಾಲಿ ಧನಂಜಯ್ ಮತ್ತು ಕಲಾವಿದರುಗಳು, ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರು ಆಗಮಿಸಲಿದ್ದಾರೆ. ನವೆಂಬರ್ 1ರಿಂದ 23ರವರಗೆ ಕರ್ನಾಟಕ ಕ್ರಿಕೆಟ್ ಸಮರ ಏರ್ಪಡಲಿದೆ ಎಂದು ಹೇಳಿದರು.

WhatsApp

Join Now

Telegram

Join Now

Instagram

Join Now