ವಿಜಯ ದರ್ಪಣ ನ್ಯೂಸ್…….
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿಯಮಗಳ ಉಲ್ಲಂಘನೆ ಹಾಗೂ ಅನುದಾನ ದುರ್ಬಳಕೆಯಾಗಿರುವ ಶಂಕೆ

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿಯಮಗಳ ಉಲ್ಲಂಘನೆ ಹಾಗೂ ಅನುದಾನ ದುರ್ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಜಿಲ್ಲಾಧ್ಯಕ್ಷ ಕೃಷ್ಣಪ್ಪ ಅವರ ಅಧಿಕಾರಾವಧಿಯ ಸಂಪೂರ್ಣ ಲೆಕ್ಕಪತ್ರ ಹಾಗೂ ಸಾಧನೆಯನ್ನು ಬಹಿರಂಗಪಡಿಸಬೇಕೆಂದು ಪರಿಷತ್ನ ಹಿರಿಯ ಸದಸ್ಯ ಕೋಮ್ಮಸಂದ್ರ ಕೆಂಚೇಗೌಡ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಹಾಗೂ ಅವರ ತಾಂತ್ರಿಕ ಕಾರ್ಯಕಾರಿ ಸಮಿತಿಯು ಕಸಾಪ ಕೇಂದ್ರ ಕಚೇರಿಯ ಆದೇಶಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದರು.
ಸೃಜನಪಕ್ಷಪಾತದ ಮೂಲಕ ತಮಗಿಷ್ಟ ಬಂದವರಿಗೆ ಮಾತ್ರ ಹುದ್ದೆಗಳನ್ನು ಹಂಚಿದ್ದಾರೆ ಹಾಗೂ ಕಚೇರಿ ನಿರ್ವಹಣೆ, ಖರ್ಚು-ವೆಚ್ಚಗಳು, ಸಭೆಗಳ ಆಡಿಟ್ ಪುಸ್ತಕ ಮತ್ತು ಸಮಿತಿಯ ಪದಾಧಿಕಾರಿಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸದೆ ಗೌಪ್ಯವಾಗಿ ಇಡಲಾಗಿದೆ.
ಕಾರ್ಯಕ್ರಮಗಳ ನಿರ್ವಹಣೆ ಪರಿಷತ್ತಿನ ನಿಯಮಾವಳಿಗಳನ್ನು ಗಾಳಿಗೆ ತೂರಿ ದತ್ತಿ ನಿಕೇತನ ಕಾರ್ಯಕ್ರಮಗಳು ಹಾಗೂ ನಡೆಸಲಾಗಿದೆ ಎಂದು ದೂರಿದರು.
ಕಮ್ಮಟಗಳನ್ನು ಕೃಷ್ಣಪ್ಪ ಅವರು ಅಧಿಕಾರಕ್ಕೆ ಬಂದ ನಂತರ ಕಚೇರಿ ಸಿಬ್ಬಂದಿ ವಿವರ ಸರ್ಕಾರದಿಂದ ಬಂದ ಅನುದಾನ ಹಾಗೂ ವರ್ಷವಾರು ಸಲ್ಲಿಸಿದ ಆಡಿಟ್ ವರದಿಗಳ ಮಾಹಿತಿ ಲಭ್ಯವಿಲ್ಲವೆಂದು ಮಾಹಿತಿ ನೀಡಿದ್ದಾರೆ.
ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಬಂದ ಅನುದಾನ, ಸಂಘ ಸಂಸ್ಥೆ ಹಾಗೂ ಗ್ರಾಮಾಂತರ ಜಿಲ್ಲೆಯ ವಿವಿಧ ಇಲಾಖೆಗಳಿಂದ ಸಂಗ್ರಹಿಸಲಾದ ದೇಣಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಂದ ಬಂದ ಅನುದಾನದ ಸ್ಪಷ್ಟತೆ ಬೇಕಿದೆ ಎಂದರು.
ವಿಜಯಪುರದಲ್ಲಿ ನಿರ್ಮಿಸಲಾದ ಕಸಾಪ ಕಟ್ಟಡ ನಿರ್ಮಾಣ ಒಟ್ಟು ವೆಚ್ಚ ಕಟ್ಟಡದ ಒಟ್ಟು ಬಜೆಟ್, ವೆಚ್ಚದ ವಿವರ ಗುತ್ತಿಗೆದಾರನ ಪರವಾನಗಿ ಹಾಗೂ ಕಾರ್ಯಾದೇಶದ ಪಾರದರ್ಶಕತೆ ಕೊರತೆಯಿದೆ ಎಂದರು.
ಸಾಹಿತ್ಯ ಪರಿಷತ್ ಸದಸ್ಯ ದೇವನಹಳ್ಳಿ ದೇವರಾಜ್ ಮಾತನಾಡಿ, ಕೃಷ್ಣಪ್ಪನವರು ಜಿಲ್ಲಾಧ್ಯಕ್ಷರಾಗಿ ಬಂದ ನಂತರ 4 ಗೋಡೆಗಳ ಮಧ್ಯೆ ಇರುವ ಕನ್ನಡ ಕವಿಗಳನ್ನು ಹೊರತರುವ ಕೆಲಸ ಮಾಡಿಲ್ಲ. ಕವಿಗೋಷ್ಠಿಗಳನ್ನು ನಡೆಸುವಲ್ಲಿ ವಿಫಲರಾಗಿದ್ದಾರೆ. ಸಂಘಕ್ಕೆ ಪದಾಧಿಕಾರಿಗಳನ್ನು ಜಾತ್ಯಾತೀತವಾಗಿ ಆಯ್ಕೆ ಮಾಡಬೇಕು ಆದರೆ ಅವರು ಆ ಕೆಲಸ ಮಾಡುತ್ತಿಲ್ಲ ಅವರಿಷ್ಠಬಂದವರಿಗೆ ಹುದ್ದೆಗಳನ್ನು ನೀಡಿದ್ದಾರೆ. ಕವಿಗೋಷ್ಠಿಗಳಲ್ಲಿ ಹೊಸಬರಿಗೆ ಅವಕಾಶಗಳು ನೀಡದೆ ಅವರು ವಂಚಿತರಾಗಿದ್ದಾರೆ ಸುದ್ದಿಗೋಷ್ಠಿಯಲ್ಲಿ ಪಿಳ್ಳೇಗೌಡ, ದೇವನಹಳ್ಳಿ ದೇವರಾಜು ಸೇರಿದಂತೆ ಕಸಾಪ ಸದಸ್ಯರು ಇದ್ದರು. ಎಂದರು. ವಕೀಲರಾದ ವಿಜಯ್, ಪಿಳ್ಳೇಗೌಡ,ಸಂಘದ ಸದಸ್ಯರು ಉಪಸ್ಥಿತರಿದ್ದರು.
@@@@@@@@@@@@@@@
ಸೂತ್ರಧಾರ
ಕುಸುಮ ಷಟ್ಪದಿ

ಕಾನನದ ಕುಸುಮದಲಿ
ಜೇನಸುಧೆ ಸುರಿದವನೆ
ಬಾನದೊರೆ ನೀನಿಜದ ಮಾಯಗಾರ
ಕಾಣಿಸದೆ ಗಿಡಮರದಿ
ನೀನಿರುವೆ ಸಿರಿಮೊಗದಿ
ಪಾನಕದ ಸವಿಗೊಳದ ಮೋಜುಗಾರ
ಕೋಗಿಲೆಯ ಕಂಠದಲಿ
ಸಾಗರದ ತೆರೆಗಳಲಿ
ದೇಗುಲದ ದೀಪಗಳ ಜೀವದಾತ
ಮೇಘದೊಳು ಸಂಚರಿಸಿ
ರಾಗದಲಿ ಲಯಗೊಳಿಸಿ
ರೋಗಹರ ಸುಗುಣಸುರ ಲೋಕನಾಥ
ಮಣ್ಣಿನೊಳು ಗಂಧವನು
ಹೆಣ್ಣಿನೊಳಗಂದವನು
ಕಣ್ಣಿನಲಿ ಬಿಂದುಹನಿ ತುಂಬಿದಾತ
ಸನ್ನಡತೆ ಕಲಿಸುತಲಿ
ಮುನ್ನಡೆಗೆ ದಾರಿಯನು
ಬಣ್ಣಗಳ ಬಾಳಿನೊಳು ತೋರಿದಾತ
ಹೊಸಚಿಗುರು ಹೊಂಗನಸು
ಬಸವಳಿದ ಬದುಕಿನೊಳು
ನಸುನಗೆಯ ಲೇಪಿಸುವ ಸೂತ್ರಧಾರ
ಉಷೆಯಲ್ಲು ನಿಶೆಯಲ್ಲು
ಹೊಸೆಯುತಲಿ ಬೆಳಕನ್ನು
ಪಸರಿಸುತ ನೀನಡೆಸೊ ಕಾರ್ಯಭಾರ
ರಾಧಿಕಾ ವಿಶ್ವನಾಥ್, ಮಡಿಕೇರಿ










