ವಿಜಯ ದರ್ಪಣ ನ್ಯೂಸ್……
ಬೆಂಗಳೂರಿನಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ, ಕೆ.ಆರ್. ಪುರಂನಲ್ಲಿ ಹೊಸ ಮಳಿಗೆಯನ್ನು ಆರಂಭಿಸುತ್ತಿರುವ ಭೀಮ
ಬೆಂಗಳೂರು, ನವೆಂಬರ್ 12, 2026: ‘ಭೀಮ’ (BHIMA) ಸಂಸ್ಥೆಯು ನವೆಂಬರ್ 6, 2026 ರಂದು ಬೆಂಗಳೂರಿನ ಪ್ರಮುಖ ವಸತಿ ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ ಓಲ್ಡ್ ಮದ್ರಾಸ್ ರಸ್ತೆಯ, ಕೆ.ಆರ್. ಪುರಂ ಎಕ್ಸ್ ಟೆನ್ಷನ್(ನಂ. 737) ರಲ್ಲಿ ತನ್ನ ಹೊಸ ಮಳಿಗೆಯನ್ನು ಭವ್ಯವಾಗಿ ಉದ್ಘಾಟಿಸುವ ಮೂಲಕ ಬೆಂಗಳೂರಿನಲ್ಲಿ ತನ್ನ ವ್ಯಾಪ್ತಿಯನ್ನು ಇನ್ನಷ್ಟೂ ವಿಸ್ತರಿಸುತ್ತಿದ್ದು . ಗ್ರಾಹಕರಿಗೆ ಭೀಮದ ಅತ್ಯುತ್ತಮ ಆಭರಣ ಸಂಗ್ರಹಗಳು ಇಲ್ಲಿ ಸುಲಭವಾಗಿ ಲಭ್ಯವಾಗಲಿವೆ.
ಒಂದು ಶತಮಾನಕ್ಕಿಂತ ಅಧಿಕ ಶ್ರೀಮಂತ ಪರಂಪರೆಯನ್ನು ಹೊಂದಿರುವ ‘ಭೀಮ’, ತಲ ತಲಾಂತರಗಳಿಂದ ಗ್ರಾಹಕರಿಗೆ ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ಸೊಬಗನ್ನು ಪರಿಚಯಿಸುತ್ತಾ ಬಂದಿದೆ. ಈ ಹೊಸ ಮಳಿಗೆಯು, ಕೆ.ಆರ್. ಪುರಂ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರಿಗೆ; ಮದುವೆ, ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ಹಾಗೂ ದೈನಂದಿನ ಬಳಕೆಗೆ ಸೂಕ್ತವಾದ ವೈವಿಧ್ಯಮಯ ಆಭರಣಗಳನ್ನು ವೀಕ್ಷಿಸಿ, ಖರೀದಿಸುವ ಅವಕಾಶವನ್ನು ಒದಗಿಸುತ್ತದೆ.
ಈ ಉದ್ಘಾಟನೆಯ ಸಂಭ್ರಮಾಚರಣೆಗಾಗಿ , ನವೆಂಬರ್ 6 ರಿಂದ ನವೆಂಬರ್ 29, 2026 ರವರೆಗೆ ‘ಭೀಮ’ ವಿಶೇಷ ಉದ್ಘಾಟನಾ ಕೊಡುಗೆಗಳನ್ನು ಘೋಷಿಸಿದ್ದು . ಗ್ರಾಹಕರು ತಮ್ಮ ವಿಶೇಷ ಕ್ಷಣಗಳನ್ನು ‘ಭೀಮ’ದೊಂದಿಗೆ ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸಲು ಅವಕಾಶ ನೀಡುತ್ತದೆ.
ಉದ್ಘಾಟನಾ ಕೊಡುಗೆಗಳ ಭಾಗವಾಗಿ, ಗ್ರಾಹಕರು ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ಮೇಕಿಂಗ್ ಶುಲ್ಕದ ಮೇಲೆ ಫ್ಲಾಟ್ 40% + 10% ರಿಯಾಯಿತಿಯ ಜೊತೆಗೆ, ವಜ್ರಾಭರಣಗಳನ್ನು ಖರೀದಿಸುವ ಗ್ರಾಹಕರು, ಪ್ರತಿ ₹1 ಲಕ್ಷದ ವಜ್ರದ ಮೌಲ್ಯಕ್ಕೆ ₹10,000 ಕ್ಯಾಶ್ಬ್ಯಾಕ್ ಪಡೆಯಬಹುದು.
ಹಳೆಯ ಚಿನ್ನದ ವಿನಿಮಯದೊಂದಿಗೆ ಪ್ರತಿ ಗ್ರಾಂಗೆ ಹೆಚ್ಚುವರಿಯಾಗಿ ₹150 ಪಡೆಯಬಹುದು.. ಅಲ್ಲದೆ, ಚಿನ್ನವನ್ನು ಖರೀದಿಸಲು ಯೋಚಿಸುತ್ತಿರುವವರು ‘ಭೀಮ ‘ದ ‘ಫ್ಲೆಕ್ಸಿ ಗೋಲ್ಡ್ ರೇಟ್’ (ಸೌಲಭ್ಯದೊಂದಿಗೆ 10% ಮುಂಗಡ ಪಾವತಿಸಿ ಬುಕ್ ಮಾಡಿ, ಮತ್ತು ಬುಕ್ ಮಾಡಿದ ದರದಲ್ಲಿ ಅಥವಾ ಚಾಲ್ತಿಯಲ್ಲಿರುವ ದರದಲ್ಲಿ ಯಾವುದು ಕಡಿಮೆಯೋ ಆ ದರದಲ್ಲಿ ಖರೀದಿಸಬಹುದು.
ಗ್ರಾಹಕರಿಗೆ ಇನ್ನೂ ಹೆಚ್ಚಿನ ಸಂಭ್ರಮಕ್ಕಾಗಿ, ಬಂಪರ್ ಬಹುಮಾನವಾಗಿ ‘ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್’ ಕಾರನ್ನು ಗೆಲ್ಲುವ ಸುವರ್ಣಾವಕಾಶವೂ ಇದೆ. ಈ ಬಹುಮಾನವು ಆಭರಣ ಪ್ರಿಯರಿಗೆ ಕೆ.ಆರ್. ಪುರಂ ಮಳಿಗೆಯ ಉದ್ಘಾಟನೆಯನ್ನು ಇನ್ನಷ್ಟೂ ವಿಶೇಷವಾಗಿರಸಲಿದೆ. ನಿರಂತರ ವಿಸ್ತರಣೆಯ ಮೂಲಕ ‘ಭೀಮ’, ಶುದ್ಧತೆ, ಅತ್ಯುತ್ತಮ ಕರಕುಶಲತೆ ಮತ್ತು ಗ್ರಾಹಕರ ನಂಬಿಕೆಯ ಪರಂಪರೆಯನ್ನು ಇನ್ನೂ ಹೆಚ್ಚಿನ ಕುಟುಂಬಗಳಿಗೆ ತಲುಪಿಸಲು ಬದ್ಧವಾಗಿದೆ. ಬೆಂಗಳೂರಿನಾದ್ಯಂತ ಇರುವ ಗ್ರಾಹಕರಿಗೆ ಆಭರಣ ಖರೀದಿಯ ಸಂತೋಷದಾಯಕ ಅನುಭವಗಳನ್ನು ಒದಗಿಸುವ ನಿಟ್ಟಿನಲ್ಲಿ, ಕೆ.ಆರ್. ಪುರಂನಲ್ಲಿ ಸ್ಥಾಪನೆಯಾದ ಈ ಹೊಸ ಮಳಿಗೆಯು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.











