ವಿಜಯ ದರ್ಪಣ ನ್ಯೂಸ್…….
ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷ ಸಿ.ನಂಜಪ್ಪ, ಉಪಾಧ್ಯಕ್ಷ ರಾಜಣ್ಣರವರ ವಿರುದ್ದ ಅವಿಶ್ವಾಸ ನೋಟಿಸ್

ಶೇಷಾದ್ರಿಪುರಂ: ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ, ಉಪಾಧ್ಯಕ್ಷ ಆರ್.ವಿ.ರಾಜಣ್ಣರವರ ಅಧಿಕಾರ ದುರ್ಬಳಕೆ ಮತ್ತು ಸ್ವಾರ್ಥ ಹಿತಾಸಕ್ತಿ ಖಂಡಿಸಿ ಸಂಘದ ಪದಾಧಿಕಾರಿಗಳು ಅವಿಶ್ವಾಸ ನೋಟಿಸ್ ಆನ್ನು ಇಬ್ಬರಿಗೆ ನೀಡಲಾಗಿದೆ ಎಂದರು.
ಕರ್ನಾಟಕ ರಾಜ್ಯ ಮಡಿವಾಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಪ್ರಕಾಶ್, ಪದಾಧಿಕಾರಿಗಳಾದ ಆರ್.ಮೂರ್ತಿ, ದೇವೇಂದ್ರ, ವಿ.ಸೋಮಶೇಖರ್, ವಿ.ಎಮ್.ಪದ್ಮಾವತಿ, ಮಧು ಕಾನೂನು ಸಲಹೆಗಾರರಾದ ಸುಬ್ರಮಣಿ ಗಿರಿಧರ್ ರವರು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಬಿ.ಆರ್.ಪ್ರಕಾಶ್ ರವರು ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸವಿರುವ ಮಡಿವಾಳ ಸಮಾಜ , ಶ್ರೀರಾಮನ ಆಡಳಿತದಿಂದ ಬಸವಣ್ಣನವರ ಕಾಲದಲ್ಲಿಯೆ ನಮ್ಮ ಸಮಾಜದ ಇದ್ದ ಸ್ಥಿತಿ ಇಂದಿಗೂ ಹಾಗೇ ಇದೆ. ಇದೆಲ್ಲ ಕಾರಣ ಸಂಘಟನೆಯ ಕೊರತೆಯಿಂದ ಎಂದು ಹೇಳಿದರು.
ರಾಜ್ಯದಲ್ಲಿ ಮಡಿವಾಳ ಸಮಾಜ 30ಲಕ್ಕಕೂ ಹೆಚ್ಚು ಜನಸಂಖ್ಯೆ ಇದೆ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷ ಸಿ.ನಂಜಪ್ಪರವರು ಸಂಘಟನೆ ಮಾಡಬೇಕಿತ್ತು. ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಮಡಿವಾಳರ ಅಭಿವೃದ್ಧಿಗೆ ಶ್ರಮಿಸಬೇಕಾಗಿತ್ತು. ಅದರೆ ಸಿ.ನಂಜಪ್ಪ, ಆರ್.ವಿ.ರಾಜಣ್ಣರವರು ತಮ್ಮ ಸ್ವಾರ್ಥ ಹಿತಕ್ಕಾಗಿ ಸಂಘವನ್ನು ಅಧೋಗತಿಗೆ ಇಳಿಸಿದರು.
ಮಡಿವಾಳ ಸಮಾಜ 21ರಾಜ್ಯದಲ್ಲಿ ಎಸ್.ಸಿ.ಮೀಸಲು ಅಡಿಯಲ್ಲಿ ಬರುತ್ತಾರೆ, ಅದರೆ ನಮ್ಮ ರಾಜ್ಯದಲ್ಲಿ ಮಡಿವಾಳ ಸಮಾಜ ಎಸ್.ಸಿ.ಪಂಗಡಕ್ಕೆ ಸೇರಿಸಲು ಅಧ್ಯಕ್ಷರು ನಿರಾಸಕ್ತಿ ಹೊಂದಿದ್ದಾರೆ.
ರಾಜ್ಯದಲ್ಲಿ ಮಡಿವಾಳರ ಸಂಘಟನೆ ಮಾಡಬೇಕಾಗಿದ್ದ ಇವರು ತಮ್ಮ ಸ್ವಾರ್ಥಕ್ಕೆ, ರಾಜಕೀಯ ಏಳಿಗೆಗಾಗಿ ಬಳಸಿಕೊಂಡಿದ್ದಾರೆ. ಸಂಘದ ನಡವಳಿ ಪುಸ್ತಕವನ್ನು ಆಡಳಿತ ಮಂಡಳಿ ಸಭೆ ಕರೆಯದೇ ತಮಗೆ ಇಷ್ಟಬಂದಂತೆ ತಿದ್ದುಪಡಿ ಮಾಡಿ ಅಧಿಕಾರ ದುರುಪಯೋಗ ಪಡೆಸಿಕೊಂಡಿದ್ದಾರೆ. ಸಂಘದ ಕಛೇರಿಯನ್ನ ಆರು ದಿನಗಳ ಕಾಲ ಬಾಗಿಲು ಹಾಕಿ ತಮ್ಮ ದರ್ಪ ಮೆರೆದಿದ್ದಾರೆ.
ನನ್ನ ಮೇಲೆ ಸುಳ್ಳು ಅರೋಪ ನಡವಳಿ ಪುಸ್ತಕ ಕದ್ದುಕೊಂಡು ಹೋಗಿದ್ದಾರೆ ಎಂದು ಸುಳ್ಳು ಅರೋಪ ಮಾಡುತ್ತಿದ್ದಾರೆ ಇಂದು ಸಹ ನನ್ನ ಬಳಿಯೆ ನಡವಳಿ ಪುಸ್ತಕವಿದೆ. ಅವಿಶ್ವಾಸ ಮಂಡಿಸಲು 55 ಸದಸ್ಯರುಗಳ ಸಹಿ ಮಾಡಿ ನೋಟಿಸ್ ಆನ್ನು ನೇರವಾಗಿ ಮತ್ತು ಅಂಚೆ ಮೂಲಕ ತಲುಪಿಲಾಯಿತು ಇದಕ್ಕೆ ಯಾವುದೇ ಕ್ರಮ ಕೈಗೊಳ್ಳದ ಅಧ್ಯಕ್ಷ ಸಿ.ನಂಜಪ್ಪ, ಉಪಾಧ್ಯಕ್ಷ ಆರ್.ವಿ.ರಾಜಣ್ಣರವರಿಗೆ ಅವಿಶ್ವಾಸ ನಿರ್ಣಯ ಮಂಡಿಸಿ ಕ್ರಮ ಕೈಗೊಂಡು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಸಲು ತೀರ್ಮಾನಿಸಲಾಯಿತು .
ಕರ್ನಾಟಕ ರಾಜ್ಯ ಮಡವಾಳರ ಸಂಘ ಮಡಿವಾಳ ಸಮಾಜದ ರಕ್ಷಣೆಗಾಗಿ ಈ ದಿಟ್ಟ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.









