--Ads--

ದಿಕ್ಕು ತಪ್ಪುತ್ತಿರುವ ಯುವಜನತೆಗೆ ನಾಡು ನುಡಿ ಅಭಿಮಾನದ ಜಾಗೃತಿ ಮೂಡಿಸಬೇಕಿದೆ : ಚಿಂತಕ ಡಾ.ಎಸ್. ರಾಮಲಿಂಗೇಶ್ವರ್ ( ಸಿಸಿರಾ)

On: November 17, 2026 3:29 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ದಿಕ್ಕು ತಪ್ಪುತ್ತಿರುವ ಯುವಜನತೆಗೆ ನಾಡು ನುಡಿ ಅಭಿಮಾನದ ಜಾಗೃತಿ ಮೂಡಿಸಬೇಕಿದೆ : ಚಿಂತಕ ಡಾ.ಎಸ್. ರಾಮಲಿಂಗೇಶ್ವರ್  ( ಸಿಸಿರಾ)

ಬೆಂಗಳೂರು : ಇಂದಿನ ಯುವಜನತೆಗೆ ಕನ್ನಡ ನಾಡು ನುಡಿ ಸಂಸ್ಕೃತಿಯ ಅಭಿಮಾನ ಮೂಡಿಸುವ ಕೆಲಸ ಆಗಬೇಕು, ಯಾಕೆಂದರೆ ಜನ್ಮ ಕೊಟ್ಟ ತಾಯಿ, ನಾವು ನಡೆದಾಡುವ, ಅನ್ನ ಕೊಡುವ ಭೂಮಿ ಎರಡೂ ನಾವ್ಯಾರೂ ಕಾಣದಿರುವ ಸ್ವರ್ಗಕ್ಕಿಂತ ಮಿಗಿಲು ಎಂದು ಕವಿ, ಚಿಂತಕ ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಸ್.ರಾಮಲಿಂಗೇಶ್ವರ್ (ಸಿಸಿರಾ) ಅಭಿಪ್ರಾಯಪಟ್ಟರು.
ಅವರು ಬೆಂಗಳೂರಿನ ಆನಂದರಾವ್ ವೃತ್ತದಲ್ಲಿ ಇರುವ ಎಸ್.ಜೆ.ಆರ್ . ಪದವಿ ಮಹಾವಿದ್ಯಾಲಯವು ಏರ್ಪಡಿಸಿದ್ದ 71 ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಇಂದಿನ ಯುವಜನತೆಗೆ ಆಧುನಿಕ ದುಶ್ಚಟಗಳಿಗೆ ಬಲಿಯಾಗದೆ ಗಾಂಧಿ, ಅಂಬೇಡ್ಕರ್, ಬಸವಣ್ಣ, ಬುದ್ಧ ಈ ಎಲ್ಲಾ ಮಹಾತ್ಮರು. ಈ ಭೂಮಿಯ ಮೇಲೆ ಬದುಕಿದ್ದಾಗ ತಮ್ಮ ಇಡೀ ಜೀವನವನ್ನು ನಾಡು , ನುಡಿ, ದೇಶದ ಅಭಿವೃದ್ಧಿಗೆ, ಸಮಾಜದ ಶ್ರೇಯಸ್ಸಿಗಾಗಿ ದುಡಿದು ಮಡಿದವರು, ಅವರ ಸೇವಾ ಮನೋಭಾವ ನಮ್ಮೆಲ್ಲರಿಗೂ ಇವತ್ತಿನ ಯುವಕರಿಗೆ ಸ್ಫೂರ್ತಿ ಎಂದರು.
ಕನ್ನಡ ನಾಡಿನ ಉದಯಕ್ಕೆ ಕಾರಣರಾದ ಕುವೆಂಪು, ಬೇಂದ್ರೆ, ಬಿಎಂಶ್ರೀ, ಹುಯಿಲಗೋಳ ನಾರಾಯಣರಾಯರು, ಸಿದ್ಧಪ್ಪ ಕಂಬಳಿ, ಅನಕೃ ಇನ್ನೂ ಅನೇಕ ನಾಡಿನ ಹೋರಾಟಗಾರರ ಪರಿಶ್ರಮದಿಂದ ಇಂದು ರಾಜ್ಯ ಜಗತ್ತಿನಲ್ಲಿ ಹೆಸರು ಮಾಡಿರುತ್ತದೆ. ಅಂತಹ ಶ್ರಮಜೀವಿಗಳ ಬದುಕು, ಆದರ್ಶ ಸೇವೆಯನ್ನು ನೆನಪಿಸುವ ಹಬ್ಬವೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ಆಚರಣೆ ಎಂದರು.
ತಂದೆ, ತಾಯಿ,ಗುರು‌‌ಹಿರಿಯರ ಮಾರ್ಗದರ್ಶನದಲ್ಲಿ ಈ ನಾಡಿಗಾಗಿ ‌ಸೇವೆ ಸಲ್ಲಿಸಬೇಕು, ಕನ್ನಡ ನಾಡಿನಲ್ಲಿ ಇರುವವರೆಲ್ಲ ಕನ್ನಡ ಭಾಷೆ ಓದಲಿ,ಬರೆಯಲಿ, ಕಲಿತು ಮಾತನಾಡಬೇಕು, ಎಲ್ಲಾ ಉದ್ದಿಮೆಗಳು ಕನ್ನಡಿಗರಿಗೆ ಉದ್ಯೋಗ ಕೊಡಬೇಕು, ಎಲ್ಲರೂ ಕನ್ನಡದಲ್ಲೇ ಹೆಸರು ಬರೆದು ಸಹಿ ಮಾಡಿ ವ್ಯವಹರಿಸಬೇಕು ಎಂದು‌ ತಮ್ಮ ನಾಡು ನುಡಿ ಗೀತೆಗಳ ಹಾಡುವ ಮೂಲಕ ಕನ್ನಡ ಅಭಿಮಾನದ ಮೂಡಿಸುವ ಮಾತುಗಳನ್ನು ಆಡಿದರು.

ಖ್ಯಾತ ಹಿಂದೂಸ್ತಾನಿ ಗಾಯಕರಾದ ಶ್ರೀಮತಿ ಸವಿತಾ ಅಮರೇಶ ನುಗಡೋಣಿ ಅವರು ಸುಶ್ರಾವ್ಯವಾಗಿ ಭಾವಗೀತೆ , ನಾಡು ನುಡಿ ಗೀತೆಗಳನ್ನು ಹಾಡಿ ಮನರಂಜಿಸಿದರು.‌
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶೀಲವಂತ ಸಂಜೀವ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಕನ್ನಡತನ ಮತ್ತು ಕನ್ನಡಿಗರ ಮನಸ್ಸು ಯಾವತ್ತೂ ಪರರ ಏಳಿಗೆಗೆ ಮಿಡಿಯುತ್ತದೆ ಹಾಗಾಗಿ ಕನ್ನಡಿಗರು ಸದಾ ಉದಾರವಾದಿಗಳು ಎಂದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು,
ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಡಾ.ಪಿ.ಎಂ.ಸುಮನ್ ಸೇರಿದಂತೆ ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಿದರು.

WhatsApp

Join Now

Telegram

Join Now

Instagram

Join Now