ವಿಜಯ ದರ್ಪಣ ನ್ಯೂಸ್….
ಕೆ.ಆರ್. ರಾಚಯ್ಯ ನವರು ರಚಿಸಿರುವ “ಸಮಾನತೆಯ ಹರಿಕಾರ ಶ್ರೀ ರಾಮಾನುಜಾಚಾರ್ಯ” ಕೃತಿ ಲೋಕಾರ್ಪಣೆ

ತಾಂಡವಪುರ ನವಂಬರ್ 20 ಮೈಸೂರು ವಿಭಾಗದ ರಾಜ್ಯ ಆದಿ ಜಾಂಬವ ಸಂಘದ ವತಿಯಿಂದ ರೋಟರಿ ಭವನದಲ್ಲಿ ಆಯೋಜಿಸಿದ್ದ ಶ್ರೀ ಕೆ.ಆರ್. ರಾಚಯ್ಯ ಅವರು ರಚಿಸಿರುವ *“ಸಮಾನತೆಯ ಹರಿಕಾರ ಶ್ರೀ ರಾಮಾನುಜಾಚಾರ್ಯ”* ಕೃತಿಯ ಲೋಕಾರ್ಪಣಾ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯನವರು ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಕೃತಿಯನ್ನು ಬಿಡುಗಡೆ ಮಾಡಿದರು
ಸಚಿವರು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಶ್ರೀ ಕೆ.ಆರ್. ರಾಚಯ್ಯ ಅವರು ಆಳವಾದ ಅಧ್ಯಯನ ಮತ್ತು ಸಂಶೋಧನೆಯೊಂದಿಗೆ ಈ ಕೃತಿಯನ್ನು ರಚಿಸಿದ್ದು, ರಾಮಾನುಜಾಚಾರ್ಯರು ಸಮಾಜ ಸುಧಾರಣೆಗೆ ನೀಡಿದ ಕೊಡುಗೆಗಳು, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಕುರಿತ ಅವರ ಚಿಂತನೆಗಳನ್ನು ಈ ಕೃತಿಯ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗಿದೆ ಎಂದು ಸಚಿವರು ಹೇಳಿದರು
ಧರ್ಮದಲ್ಲಿರುವ ಅನಿಷ್ಟ ಪದ್ಧತಿ ಹಾಗೂ ಸಾಮಾಜಿಕ ಅಸಮಾನತೆಗಳನ್ನು ತೊಡೆದುಹಾಕಿ, ಸಮಾನತೆ, ಸಹಬಾಳ್ವೆ ಮತ್ತು ಮಾನವೀಯತೆಯ ಆಧಾರದ ಮೇಲೆ ಉತ್ತಮ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸೋಣ. ಇಂತಹ ಮಹನೀಯರ ವಿಚಾರಧಾರೆಗಳು ಸಮಾಜದಲ್ಲಿ ಜಾಗೃತಿ ಮೂಡಿಸಿ, ಸಮಾನತೆಯ ಆಶಯವನ್ನು ಬಲಪಡಿಸಲಿ. ಎಂದು ಹೇಳಿದ ಸಚಿವರು
ಈ ಸಂದರ್ಭದಲ್ಲಿ ಕೃತಿಯ ಲೇಖಕರಾದ ಶ್ರೀ ಕೆ.ಆರ್. ರಾಚಯ್ಯ ಅವರನ್ನು ಸಚಿವರು ಅಭಿನಂದಿಸಿ ಗೌರವಿಸಿದರು
ಕಾರ್ಯಕ್ರಮದಲ್ಲಿ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ, ರಾಜ್ಯ ಆದಿ ಜಾಂಬವ ಸಂಘದ (ಮೈಸೂರು ವಿಭಾಗ) ಅಧ್ಯಕ್ಷ ಯಡತೊರೆ ಎಂ. ನಿಂಗರಾಜು, ಉಪಾಧ್ಯಕ್ಷ ಎಂ. ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಡಿ. ಕುಮಾರ್, ಮೈಸೂರು ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥರಾದ ಪ್ರೊ. ಶಲ್ವಪಿಳ್ಳೆ ಅಯ್ಯಂಗಾರ್ ಸೇರಿದಂತೆ ಹಲವು ಹಿರಿಯರು ಹಾಗೂ ಗಣ್ಯರು ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು










