ವಿಜಯ ದರ್ಪಣ ನ್ಯೂಸ್……
ಟೀಮ್ ಆರ್.ಕೆ. ಫೌಂಡೇಶನ್ ಸಂಸ್ಥಾಪಕ ಕಾರ್ತಿಕ್ ಜೀವ ಅವರ ಹುಟ್ಟುಹಬ್ಬ ಆಚರಣೆ

ತಾವರೆಕೆರೆ: ಹೊಸಕೋಟೆ ನಗರದ ಸಮಾಜಸೇವಕರು ಹಾಗೂ ಟೀಮ್ ಆರ್.ಕೆ. ಫೌಂಡೇಶನ್ ಸಂಸ್ಥಾಪಕರಾದ ಕಾರ್ತಿಕ್ ಜೀವ ಅವರ ಹುಟ್ಟುಹಬ್ಬವನ್ನು ಸ್ನೇಹಿತರು ಹಾಗೂ ತಾಲೂಕಿನ ಮುಖಂಡರ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಶಿವಾನಂದ್ ಮಾತನಾಡಿ, ಯುವ ಮುಖಂಡ ಕಾರ್ತಿಕ್ ಜೀವ ಅವರು ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ತಾಲೂಕಿನಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ಶಾಲಾ-ಕಾಲೇಜುಗಳು ಹಾಗೂ ಪದವಿ ಕಾಲೇಜುಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ನೇತ್ರ ತಪಾಸಣಾ ಶಿಬಿರಗಳು ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ದೇವರ ಆಶೀರ್ವಾದದಿಂದ ಅವರು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹುಟ್ಟುಹಬ್ಬದ ಶುಭಾಶಯ ಕೋರಿದರು.
ನಂತರ ಟೀಮ್ ಆರ್.ಕೆ. ಫೌಂಡೇಶನ್ ಸಂಸ್ಥಾಪಕ ಕಾರ್ತಿಕ್ ಜೀವ ಮಾತನಾಡಿ, ಗುರುಹಿರಿಯರ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ. ಇದೇ ರೀತಿಯ ನಿಮ್ಮೆಲ್ಲರ ಬೆಂಬಲ ಮತ್ತು ವಿಶ್ವಾಸ ಮುಂದುವರಿದರೆ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಸ್ನೇಹಿತರು, ಗುರುಹಿರಿಯರು ಹಾಗೂ ಹಿತೈಷಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯರಾದ ನಾಗರಾಜ್. ಎನ್., ಇಮ್ತಿಯಾಜ್ ಪಾಶ, ಲಕ್ಷ್ಮಿ, ವಾತ್ಸಲ್ಯ ನಿರಾಶ್ರಿತರ ಆಶ್ರಮದ ಶೋಭಾ ಹಾಗೂ ಟೀಮ್ ಆರ್.ಕೆ. ಫೌಂಡೇಶನ್ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.











