ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ವಿವಿಧ ತಾಲೂಕುಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ

ತಾಂಡವಪುರ ನವಂಬರ್ 23: ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಕುಶಲಕರ್ಮಿಗಳ ವಿಭಾಗದ ಜಿಲ್ಲಾಧ್ಯಕ್ಷರಾಗಿ ಬನ್ನೂರು ಎನ್. ನಾಗರಾಜಾಚಾರ್ ಹಾಗೂ ವಿವಿಧ ತಾಲೂಕುಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಬೀರಿಹುಂಡಿ ಬಸವಣ್ಣ ರವರು ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಬಾವುಟ ನೀಡುವ ಮೂಲಕ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದ್ದರು
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕುಶಲಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷರಾದ R.ಪ್ರಸನ್ನ ಕುಮಾರ್ ಹಾಗೂ ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಬೀರಿಹುಂಡಿ ಬಸವಣ್ಣ ರವರುಗಳ ಸಮ್ಮುಖದಲ್ಲಿ ನೂತನ ಜಿಲ್ಲಾಧ್ಯಕ್ಷರಾಗಿ ಪದಗ್ರಹಣ ಮಾಡಿದ ಬನ್ನೂರು ಎನ್. ನಾಗರಾಜಾಚಾರ್ ರ ವರಿಗೆ ಕಾಂಗ್ರೆಸ್ ಪಕ್ಷದ ಬಾವುಟವನ್ನು ಹಸ್ತಾಂತರಿಸುವ ಮೂಲಕ ಅಧಿಕಾರ ವಹಿಸಿಕೊಟ್ಟರು.
ಈ ಸಂದರ್ಭದಲ್ಲಿ ಮೈಸೂರು ಗ್ರಾಮಾಂತರ ಕುಶಲಕರ್ಮಿಗಳ ವಿಭಾಗದ ಜಿಲ್ಲಾ,ತಾಲೂಕು ಘಟಕಗಳ ಪದಾಧಿಕಾರಿಗಳು ತಾಲೂಕು ಅಧ್ಯಕ್ಷರುಗಳು ಹಾಗೂ
ಪದಾಧಿಕಾರಿಗಳಿಗೆ ನೇಮಕಾತಿ ಪತ್ರವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಜಿಲ್ಲಾ ಉಪಾಧ್ಯಕ್ಷರು ಗಳಾಗಿ ಚೆಲುವರಾಜು, ಸಿದ್ದರಾಜು, ಹೂಟಗಳ್ಳಿ ಪುಟ್ಟಸೋಮಾಚರ್,ಬೇವಿನಹಳ್ಳಿ ಮಹದೇವ್, ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ G.K. ಜಯರಾಮ್ ಹಾಗೂ H. D.ಕೋಟೆ ತಾಲೂಕು ಕುಶಲಕರ್ಮಿಗಳ ವಿಭಾಗದ ಅಧ್ಯಕ್ಷರಾಗಿ ಕೆಂಡಗಣ್ಣಸ್ವಾಮಿ ಸ್ವಾಮಿ, ಸರಗೂರು ತಾಲೂಕು ಘಟಕದ ಅಧ್ಯಕ್ಷರಾಗಿ ಮೋಹನ್ ಕುಮಾರ್, ನಂಜನಗೂಡು ತಾಲೂಕು ಘಟಕದ ಅಧ್ಯಕ್ಷರಾಗಿ ವಿನಯ್, ಟಿ. ನರಸೀಪುರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ H. N. ರಾಜು,ಕೆ ಆರ್ ನಗರ ತಾಲೂಕು ಘಟಕದ ಅಧ್ಯಕ್ಷರಾಗಿ. ಪುಟ್ಟಣ್ಣಚಾರ್, ಪಿರಿಯಾಪಟ್ಟಣ ತಾಲೂಕು ಘಟಕದ ಅಧ್ಯಕ್ಷರಾಗಿ ನೀಲಕಂಠ , ಮೈಸೂರು ತಾಲೂಕು ಘಟಕದ ಅಧ್ಯಕ್ಷರಾಗಿ ಮಂಜು ರವರುಗಳಿಗೆ ಈ ಸಂದರ್ಭದಲ್ಲಿ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮೈಸೂರು ಡಿಸಿಸಿ ಉಪಾಧ್ಯಕ್ಷರಾದ ಬಸವರಾಜ್, ,ನಗರ ಜಿಲ್ಲಾ ಕುಶಲಕರ್ಮಿಗಳ ಅಧ್ಯಕ್ಷರಾದ ಟಿಂಬರ್ ನಾಗರಾಜ್, ಮಹಿಳಾ ಜಿಲ್ಲಾಧ್ಯಕ್ಷರಾದ ಶ್ರೀ ಮತಿ ಆಶಾ ಕೆಂಪರಾಜು ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ದಾಸರಹಳ್ಳಿ ರಾಮಚಂದ್ರು, ರಾಮನಗರ ಜಿಲ್ಲಾಧ್ಯಕ್ಷರಾದ ತಗಡೂರಾಚಾರ, ಶಿವಮೊಗ್ಗ ಮಹಿಳಾ ಜಿಲ್ಲಾಧ್ಯಕ್ಷೆ ಶ್ರೀ ಮತಿ ಜಯಶೀಲ ಕಾಂಗ್ರೆಸ್ನ ಹಿರಿಯ ಮುಖಂಡರಾದ ಜಯರಾಮಾಚಾರ್, ರಿಷಿ ವಿಶ್ವಕರ್ಮ, ಮೊಗಣ್ಣಚಾರ್, ಮೂರ್ ಬಂದ್ ಸೋಮಚಾರ್, ಪುರುಷೋತ್ತಮ್, ಟಿ ನರಸೀಪುರ ಲೋಕೇಶ್,ಶ್ರೀಕಂಠ, ಮಹಿಳಾ ಮುಖಂಡರುಗಳಾದ ಗೀತಾ ವಿಶ್ವಕರ್ಮ ಸೇರಿದಂತೆ ಹಲವು ಕಾಯಕ ಕುಶಲಕರ್ಮಿಗಳ ಮುಖಂಡರು ಹಾಗು ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.











