--Ads--

ದೋಹಾದ ‘ಕರ್ನಾಟಕ ರಾಜ್ಯೋತ್ಸವ ಕಪ್ 2026 (ಸೀಸನ್ 2)’ ಚಾಂಪಿಯನ್ ಪಟ್ಟ ಅಲಂಕರಿಸಿದ ಮರ್ಬು ತಂಡ

On: November 26, 2026 3:06 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…….

ದೋಹಾದ ‘ಕರ್ನಾಟಕ ರಾಜ್ಯೋತ್ಸವ ಕಪ್ 2026 (ಸೀಸನ್ 2)’ ಚಾಂಪಿಯನ್ ಪಟ್ಟ ಅಲಂಕರಿಸಿದ ಮರ್ಬು ತಂಡ

ದೋಹಾ, ಕತಾರ್: ಭಾರತೀಯ ರಾಯಭಾರಿ ಕಚೇರಿಯ ಅಧೀನದ ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಸಹಯೋಗಿ ಸಂಸ್ಥೆಯಾದ ಕರ್ನಾಟಕ ಸಂಘ ಕತಾರ್ (KSQ) ಹಾಗೂ ಕರ್ನಾಟಕ ರಾಯಲ್ಸ್ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಕರ್ನಾಟಕ ರಾಜ್ಯೋತ್ಸವ ಕಪ್ (KRC) 2026 – ಸೀಸನ್ 2’ ಕ್ರಿಕೆಟ್ ಪಂದ್ಯಾವಳಿಯ ರೋಚಕ ಫೈನಲ್ ಪಂದ್ಯದಲ್ಲಿ ಹನಾನ್ ಸಿಸಿ (Hanan CC) ತಂಡವನ್ನು ಮಣಿಸಿದ ಮರ್ಬು (Marbu) ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ನವೆಂಬರ್ 17ರಿಂದ 21ರವರೆಗೆ ಬರ್ವಾ ವಿಲೇಜ್‌ನ ಕ್ರೀಕ್ ಸ್ಪೋರ್ಟ್ಸ್ (KREEQ Sports) ಮೈದಾನದಲ್ಲಿ ನಡೆದ ಐದು ದಿನಗಳ ಈ ಕ್ರಿಕೆಟ್ ಹಬ್ಬದಲ್ಲಿ ಒಟ್ಟು ಎಂಟು ತಂಡಗಳು ಪಾಲ್ಗೊಂಡು ಕ್ರೀಡಾಸ್ಫೂರ್ತಿ ಮೆರೆದವು.

ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅರ್ಜುನ ಪ್ರಶಸ್ತಿ ವಿಜೇತೆ, ಅಂತಾರಾಷ್ಟ್ರೀಯ ಜಾವೆಲಿನ್ ಥ್ರೋ ಪಟು ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಕುಮಾರಿ ಅನ್ನು ರಾಣಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಭಾರತದಿಂದ ವಿಶೇಷವಾಗಿ ಆಗಮಿಸಿದ್ದ ಖ್ಯಾತ ನಿರೂಪಕಿ ಕುಮಾರಿ ಶಮೀರಾ ಬೆಳುವಾಯಿ ಅವರು ಕಾರ್ಯಕ್ರಮವನ್ನು ಅತ್ಯಂತ ಆಕರ್ಷಕವಾಗಿ ನಿರೂಪಿಸಿ ಸಂಭ್ರಮಕ್ಕೆ ಮೆರುಗು ನೀಡಿದರು.

‘ಎ’ ಗುಂಪು (ಅಲಯನ್ಸ್ ಕತಾರ್, ಎಸಿಸಿ, ಹನಾನ್ ಸಿಸಿ, ಯುನೈಟೆಡ್ ಚಾಲೆಂಜರ್ಸ್) ಮತ್ತು ‘ಬಿ’ ಗುಂಪಿನಲ್ಲಿ (ಮರ್ಬು, ಬಿಟಿ ಗ್ಯಾಂಗ್, ಮಹಾರಾಷ್ಟ್ರ ಸ್ಟ್ರೈಕರ್ಸ್, ಲಗಾನ್ ಸಿಸಿ) ನಡೆದ ಜಿದ್ದಾಜಿದ್ದಿನ ಲೀಗ್ ಪಂದ್ಯಗಳ ಬಳಿಕ ಅಗ್ರ ನಾಲ್ಕು ತಂಡಗಳು ಶನಿವಾರದ ನಾಕೌಟ್ ಹಂತಕ್ಕೆ ಪ್ರವೇಶಿಸಿದವು. ಮೊದಲ ಸೆಮಿಫೈನಲ್‌ನಲ್ಲಿ ಬಿಟಿ ಗ್ಯಾಂಗ್ ವಿರುದ್ಧ ಹನಾನ್ ಸಿಸಿ ಜಯ ಸಾಧಿಸಿದರೆ, ಎರಡನೇ ಸೆಮಿಫೈನಲ್‌ನಲ್ಲಿ ಅಲಯನ್ಸ್ ಕತಾರ್ ತಂಡವನ್ನು ಮಣಿಸಿದ ಮರ್ಬು ತಂಡ ಫೈನಲ್‌ಗೆ ಲಗ್ಗೆಯಿಟ್ಟಿತು. ಅಂತಿಮ ಹಣಾಹಣಿಯಲ್ಲಿ ಮರ್ಬು ತಂಡವು ಸರ್ವಾಂಗೀಣ ಪ್ರದರ್ಶನ ನೀಡಿ ಪ್ರತಿಷ್ಠಿತ ಸೀಸನ್ 2 ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಪ್ರಮುಖ ಲೀಗ್ ಪಂದ್ಯಗಳ ಜೊತೆಗೆ ಬೆಸ್ಟ್ ಆಫ್ ಕರ್ನಾಟಕ vs ರೆಸ್ಟ್ ಆಫ್ ಇಂಡಿಯಾ, ಕೆಎ-ಲೇಡೀಸ್ vs ಒಎಸ್-ಲೇಡೀಸ್, ಭಾರತೀಯ ರಾಯಭಾರಿ ಕಚೇರಿ vs ಐಸಿಬಿಎಫ್/ಐಸಿಸಿ ಹಾಗೂ ಕೆಆರ್‌ಸಿ ಸಂಘಟನಾ ಸಮಿತಿ vs ಕರ್ನಾಟಕ ಸಹೋದರ ಸಂಘಟನೆಗಳ ಸದಸ್ಯರ ನಡುವೆ ನಾಲ್ಕು ವಿಶೇಷ ಪ್ರದರ್ಶನ ಪಂದ್ಯಗಳು ನಡೆದವು. ಮೂರನೇ ದಿನದ ಮಹಿಳಾ ಪ್ರದರ್ಶನ ಪಂದ್ಯಕ್ಕೆ ಕತಾರ್ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಕುಮಾರಿ ಆಯೇಷಾ ಅವರು ವಿಶೇಷ ಅತಿಥಿಯಾಗಿ ಆಗಮಿಸಿ ಮಹಿಳಾ ಆಟಗಾರ್ತಿಯರನ್ನು ಹುರಿದುಂಬಿಸಿದರು.

ಸಮಾರೋಪ ಸಮಾರಂಭದಲ್ಲಿ ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು:
Bullet ಫೈನಲ್ ಪಂದ್ಯಶ್ರೇಷ್ಠ (Final Man of the Match): ಜಾವದ್ (ಮರ್ಬು)
Bullet ಉತ್ತಮ ಬ್ಯಾಟ್ಸ್‌ಮನ್ (Best Batsman): ಸುಲ್ಫಾನ್ (ಮರ್ಬು)
Bullet ಉತ್ತಮ ಬೌಲರ್ (Best Bowler): ಬಿಪಿನ್ ಕುಮಾರ್ (ಮರ್ಬು)
Bullet ಉತ್ತಮ ಕ್ಷೇತ್ರರಕ್ಷಕ (Best Fielder): ಜಾವದ್ (ಮರ್ಬು)
Bullet ಉತ್ತಮ ವಿಕೆಟ್ ಕೀಪರ್ (Best Wicketkeeper): ನಾಸರ್ ಮಂಜೇಶ್ವರ (ಅಲಯನ್ಸ್ ಕತಾರ್)

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ವಿಜೇತ ಮರ್ಬು ತಂಡ, ರನ್ನರ್-ಅಪ್ ಹನಾನ್ ಸಿಸಿ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳನ್ನು ಅಭಿನಂದಿಸಿದರು. ಕೆಎಸ್‌ಕ್ಯೂ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಹಾಗೂ ಕೆಎಸ್‌ಕ್ಯೂ ಸಲಹೆಗಾರ ಮತ್ತು ಕೆಆರ್‌ಸಿ ಪಂದ್ಯಾವಳಿಯ ನಿರ್ದೇಶಕ ಡಾ. ಸಂಜಯ್ ಕುದರಿ ಅವರ ಮಾರ್ಗದರ್ಶನದಲ್ಲಿ, ಕರ್ನಾಟಕ ಸಂಘ ಕತಾರ್ ಆಡಳಿತ ಮಂಡಳಿ ಮತ್ತು ಕರ್ನಾಟಕ ರಾಯಲ್ಸ್ ತಂಡದ ಸದಸ್ಯರ ಅವಿರತ ಶ್ರಮ ಹಾಗೂ ಒಗ್ಗಟ್ಟಿನ ಕಾರ್ಯದಿಂದ ಸೀಸನ್ 2 ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಅವರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಕೆಎಸ್‌ಕ್ಯೂ ಸಲಹಾ ಸಮಿತಿ ಸದಸ್ಯರು, ಅಪೆಕ್ಸ್ ಬಾಡಿ ಪ್ರತಿನಿಧಿಗಳು ಮತ್ತು ಸಹೋದರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪಂದ್ಯಾವಳಿಯ ಯಶಸ್ಸಿಗೆ ಹಗಲಿರುಳು ಶ್ರಮಿಸಿದ ಎಲ್ಲಾ ಸ್ವಯಂಸೇವಕರು, ತೀರ್ಪುಗಾರರು, ಭಾಗವಹಿಸಿದ ತಂಡಗಳು ಹಾಗೂ ಕ್ರೀಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುವುದರೊಂದಿಗೆ ಪಂದ್ಯಾವಳಿಗೆ ತೆರೆ ಎಳೆಯಲಾಯಿತು.

WhatsApp

Join Now

Telegram

Join Now

Instagram

Join Now