--Ads--

ವಿಯೆಟ್ನಾಂನಲ್ಲಿ ವಿಜೃಂಭಿಸಿದ ‘ಇಂಡೋ-ವಿಯೆಟ್ನಾಂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ’: ಡಾ. ಮೋನಿಷಾ ನವೀನ್, ತನಿಷಾ ಮತ್ತು ಚಿರಂಜೀವಿ ನೃತ್ಯ ಪ್ರದರ್ಶನಕ್ಕೆ ಅಪಾರ ಮೆಚ್ಚುಗೆ

On: November 9, 2026 12:39 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ವಿಯೆಟ್ನಾಂನಲ್ಲಿ ವಿಜೃಂಭಿಸಿದ ‘ಇಂಡೋ -ವಿಯೆಟ್ನಾಂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ’: ಡಾ.ಮೋನಿಷಾ ನವೀನ್, ತನಿಷಾ ಮತ್ತು ಚಿರಂಜೀವಿ ನೃತ್ಯ ಪ್ರದರ್ಶನಕ್ಕೆ ಅಪಾರ ಮೆಚ್ಚುಗೆ

 

ಹನೋಯ್ (ವಿಯೆಟ್ನಾಂ):
ವಿಯೆಟ್ನಾಂನ ಹನೋಯ್ ನಗರದ ಜಪಾನೀಸ್ ಇಂಟರ್ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ‘ಇಂಡಿಯನ್ ಕ್ಲಾಸಿಕಲ್ ಇಂಡೋ-ವಿಯೆಟ್ನಾಂ ಕಲ್ಚರಲ್ ಎಕ್ಸ್‌ಚೇಂಜ್ ಪ್ರೋಗ್ರಾಂ’ ಅನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಬೆಂಗಳುರಿನ ಡಾ. ಮೋನಿಷಾ ನವೀನ್, ತನಿಷಾ ಹಾಗೂ ಚಿರಂಜೀವಿ ಅವರು ನೀಡಿದ ನೃತ್ಯ ಪ್ರದರ್ಶನವು ಅತ್ಯಂತ ಅದ್ಭುತವಾಗಿ ಮೂಡಿಬಂದು, ವಿದ್ಯಾರ್ಥಿಗಳನ್ನು ಮತ್ತು ಸಭಿಕರನ್ನು ಮನಸೂರೆಗೊಳಿಸಿತು.

ಭಾರತೀಯ ಪಾರಂಪರಿಕ ನೃತ್ಯ ಕಲೆಯನ್ನು ವಿದೇಶಿ ಮಣ್ಣಿನಲ್ಲಿ ಅತ್ಯಂತ ರೋಚಕವಾಗಿ ಪ್ರದರ್ಶಿಸಿದ ಡಾ. ಮೋನಿಷಾ ನವೀನ್, ತನಿಷಾ ಮತ್ತು ಚಿರಂಜೀವಿ ಅವರನ್ನು ಜಪಾನೀಸ್ ಇಂಟರ್ನ್ಯಾಷನಲ್ ಸ್ಕೂಲ್ ಆಡಳಿತ ಮಂಡಳಿ, ಶ್ರೀ ಸಾಯಿ ನಟರಾಜ ಆರ್ಟ್ಸ್ ಅಕಾಡೆಮಿಯ ನಿರ್ದೇಶಕರಾದ ಗುರು ಡಾ. ಪಿ. ಶರತ್ ಚಂದ್ರ ಹಾಗೂ ಆರ್ಟಿಸ್ಟ್ ಫ್ಯಾಕ್ಟರಿ ನಿರ್ದೇಶಕ ಕೆ. ಧರಣಿಧರ್ ಅವರು ಶ್ಲಾಘಿಸಿದರು. ತದನಂತರ ಈ ಮೂವರು ಕಲಾವಿದರ ನೃತ್ಯ ಸೇವೆಯನ್ನು ಗುರುತಿಸಿ ಅವರಿಗೆ ವೇದಿಕೆಯಲ್ಲಿ ಭವ್ಯ ಸನ್ಮಾನ ನೆರವೇರಿಸಲಾಯಿತು.

WhatsApp

Join Now

Telegram

Join Now

Instagram

Join Now