--Ads--

ಚೀಮಂಗಲ ಗ್ರಾಮ ಪಂಚಾಯಿತಿಯಲ್ಲಿ “ಪ್ರಜಾ ಸೇವಾ ಆಂದೋಲನ ಸಭೆ”

On: November 28, 2026 2:14 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಚೀಮಂಗಲ ಗ್ರಾಮ ಪಂಚಾಯಿತಿಯಲ್ಲಿ “ಪ್ರಜಾ ಸೇವಾ ಆಂದೋಲನ ಸಭೆ”

ಶಿಡ್ಲಘಟ್ಟ : ಜಿಲ್ಲಾದ್ಯಂತ 63 ಲಕ್ಷ ದಾಖಲಾತಿಗಳನ್ನು ಇಂದ್ರಿಕರಿಸಿ, ಮೂಲ ದಾಖಲೆಗಳ ಪರಿಶೀಲನೆ ಜೊತೆಗೆ ಡಿಜಿಟಲ್ ರೀತಿ ಪ್ರತಿಯನ್ನು ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಆಯೋಜಿಸಿದ್ದ “ಪ್ರಜಾ ಸೇವಾ ಆಂದೋಲನ ಸಭೆ” ಯಲ್ಲಿ ‘ಬಾಗಿಲಿಗೆ ಬಂದು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಮ್ಮ ಹಿರಿಯರು ಪಡೆದ ಇ-ಸ್ವತ್ತು ದಾಖಲೆಗಳನ್ನು ಮರು ಪರಿಶೀಲನೆ ಮಾಡುವ ಜೊತೆಗೆ ನೂತನ ಡಿಜಿಟಲ್ ರೀತಿ ದಾಖಲೆಗಳನ್ನು ನೀಡುವ ಉದ್ದೇಶವಾಗಿದ್ದು, 63 ಲಕ್ಷ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ, ರಾಜ್ಯದ 2 ಕೇಂದ್ರಗಳಾದ ಬೆಂಗಳೂರು ಮತ್ತು ಧಾರವಾಡದಲ್ಲಿ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಪರಿಶೀಲನೆ ಮಾಡಲಾಗಿದೆ ನಮ್ಮ ಜಿಲ್ಲೆಯ ಪ್ರತಿ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಪರಿಶೀಲನೆ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ ಮತ್ತು ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆಯ ಉದ್ದೇಶಕ್ಕಾಗಿ ಮುಖ್ಯಮಂತ್ರಿ ಅವರು ಚಾಲನೆ ನೀಡಿದ್ದು, ಅದರ ಅನುಗುಣವಾಗಿ ಜಿಲ್ಲೆಗೆ ಮೊದಲ ಯೋಜನೆಯಲ್ಲಿ 125 ಕೋಟಿ ಮತ್ತು ಎರಡನೇ ಯೋಜನೆಯಲ್ಲಿ 137 ಕೋಟಿ ಅನುದಾನವನ್ನು ಬಿಡುಗಡೆ ಮಾಡುವ ಉದ್ದೇಶವಿದ್ದು, ಗ್ರಾಮೀಣ ಮಟ್ಟದ ರಸ್ತೆಗಳ ಪುನರ್ ಅಭಿವೃದ್ಧಿ ಕಾಮಗಾರಿ ಹಾಗೂ ರಸ್ತೆ ಗುಂಡಿ-ಹಳ್ಳ ವಿರುವಂತಹ ರಸ್ತೆಗಳನ್ನು ಅಭಿವೃದ್ಧಿ ಮಾಡುವ ಉದ್ದೇಶವಾಗಿದೆ ಎಂದರು.

ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ,
ಸಾರ್ವಜನಿಕರು ದೈನಂದಿನವಾಗಿ ಕಛೇರಿಗೆ ಅಲೆದಾಡುವುದನ್ನ ಬಿಟ್ಟು ತಮ್ಮ ಊರಿನಲ್ಲಿ ಸಮಸ್ಯೆಯನ್ನು ಬಗೆಹರಿಸುವುದೇ ಪ್ರಜಾ ಸೇವಾ ಆಂದೋಲನ ಮೂಲ ಉದ್ದೇಶವಾಗಿದೆ ಎಂದರು.
ತಾಲ್ಲೂಕಿನಲ್ಲಿ ಇದು ಎಂಟನೇ ಜನಸ್ಪಂದನ ಕಾರ್ಯಕ್ರಮವಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಇಲಾಖೆ ವತಿಯಿಂದ ಬರುವಂತಹ ಯೋಜನೆಗಳ ಬಗ್ಗೆ ಮಾಹಿತಿ ಪಡೆದು, ತಮ್ಮ ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸಿ ಪರಿಹರಿಸಿಕೊಳ್ಳಬೇಕಾಗಿ ನಾಗರಿಕರಲ್ಲಿ ಮನವಿ ಮಾಡಿದರು.

ಜಿಲ್ಲಾ ಪಂಚಾಯತ್ ಸಿಇಒ ಡಾ.ನವೀನ್ ಭಟ್ ಮಾತನಾಡಿ , ದಾಖಲೆಗಳಿಲ್ಲದೇ ಪಿತ್ರಾರ್ಜಿತ ಆಸ್ತಿಯಲ್ಲಿ ಮನೆ ಕಟ್ಟಿರುವ ಫಲಾನುಭವಿಗಳು ತಾವು ಕಟ್ಟಿಕೊಂಡಿರುವ ಹೌಸ್ ಲಿಸ್ಟ್ ನಂಬರ್ ಮತ್ತು 2025 ಮುಂಚಿತವಾಗಿ ಕಟ್ಟಿರುವ ವಿದ್ಯುತ್ ಬಿಲ್ ನೀಡಿದರೆ ಇ-ಸ್ವತ್ತು ಹಕ್ಕು ಪತ್ರ ಪಡೆಯಬಹುದಾಗಿದೆ ಎಂದು ಹೇಳಿದರು.

ಭೂ-ಗ್ಯಾರಂಟಿ ದಾಖಲೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಲ್ಲಿ 3600 ಆಪ್ಲೀಕೆಶನ್ ಗಳು ಬಂದಿದ್ದು, ಮುಂದಿನ 20 ದಿನಗಳಲ್ಲಿ ಇತ್ಯರ್ಥ ಮಾಡಲು ಯೋಜನೆ ರೂಪಿಸಿಕೊಳ್ಳಲಾಗಿದೆ
ಇದರಲ್ಲಿ ಕೆಲ ದಾಖಲೆಗಳಿಗೆ ಸಂಬಂಧಿಸಿದಂತೆ ಗ್ರಾಮ ಠಾಣಾ ಆಸ್ತಿಯಲ್ಲಿ ಮನೆಗಳನ್ನು ಕಟ್ಟಿಕೊಂಡು ಯಾವುದೇ ದಾಖಲೆಗಳು ಇಲ್ಲದೇ ಪಿತ್ರಾರ್ಜಿತ ಆಸ್ತಿಯಲ್ಲಿ ಮನೆಗಳನ್ನು ಕಟ್ಟಿಕೊಂಡಿರುವವರು ಫಲಾನುಭವಿಗಳಿಗೆ ಇ-ಸ್ವತ್ತು ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇವೆ ಎಂದರು.

ಇದೇ ವೇಳೆ ಕಾರ್ಯಕ್ರಮಕ್ಕು ಮುನ್ನ ಚೀಮಂಗಲ ಗ್ರಾಮದ ಮನೆ ಮನೆ ಭೇಟಿ ನೀಡಿ, ಭೂ-ಗ್ಯಾರಂಟಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದರು,
ವಿವಿಧ ಇಲಾಖೆಗಳ ವತಿಯಿಂದ ಆಯೋಜಿಸಿದ್ದ ಸ್ಟಾಲ್ ಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.

ವಿವಿಧ ಗ್ರಾಮ ಪಂಚಾಯಿತಿಗಳಿಗೆ ಸೇರಿದ ಗ್ರಾಮಸ್ಥರು ಸಭೆಯಲ್ಲಿ ನೆರೆದಿದ್ದರು, ಸಾರ್ವಜನಿಕರಿಂದ ಅಹವಾಲು ಪತ್ರಗಳನ್ನು ಸ್ವೀಕರಿಸಲಾಯಿತು,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಹವಾಲು ಪತ್ರಗಳನ್ನು ಸ್ವೀಕರಿಸಲಾಯಿತು.

ಪ್ರಜಾ ಸೇವಾ ಆಂದೋಲನದಲ್ಲಿ ಭೂ-ಗ್ಯಾರಂಟಿ ಯೋಜನೆಯ ಪೋಸ್ಟರ್ ಬಿಡುಗಡೆ, ತೇಗ ಸಿರಿ ಫೋಸ್ಟರ್, ಹಕ್ಕು ಪತ್ರ, ಪಿಂಚಣಿ ಆದೇಶ ಪ್ರಮಾಣ ಪತ್ರ, ವಿಬಿ-ಜಿ-ರಾಮ್-ಜಿ ಯೋಜನೆಯ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗಗನ ಸಿಂಧು,ತಾ.ಪಂ.ಇಒ ಆರ್.ಹೇಮಾವತಿ , ಬಿಇಒ.ಪಿ.ಸ್ವಾಮಿ ,ಸರ್ಕಲ್ ಇನ್ಸ್ ಪೆಕ್ಟರ್ ಆನಂದಕುಮಾರ್ ,ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ , ಜಿಲ್ಲಾ ಪಂಚಾಯತಿ ಮಾಜಿ ಅದ್ಯಕ್ಷ
ವಿ.ಸುಭ್ರಮಣಿ ,ಮೇಲೂರು ಮಂಜುನಾಥ್ ,ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲ್ಲೂಕು ಯೋಜನಾಧಿಕಾರಿ ಅನಿಲ್ ಕುಮಾರ್,
ವಸತಿ ನೋಡಲ್ ಅಧಿಕಾರಿ ನಾಗೇಶ್,
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಜಂಗಮಕೋಟೆ ಹೋಬಳಿಯ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು & ಗ್ರಾಮ ಪಂಚಾಯಿತಿ ಸಿಬ್ಬಂದಿ, ಜಿಲ್ಲಾ ಪಂಚಾಯಿತಿ & ತಾಲ್ಲೂಕು ಪಂಚಾಯಿತಿ, ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಮತ್ತು ಸಿಬ್ಬಂದಿ ಹಾಗು ಸಾರ್ವಜನಿಕರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಗಂಗಾಭವಾನಿ ಎಫ್.ಪಿ.ಒ. ರೈತ ಷೇರುದಾರರಿಗೆ ಸೂಕ್ಷ್ಮ ಪೋಷಕಾಂಶ ಬಳಕೆ ಕುರಿತು ತರಬೇತಿ ಹಾಗೂ ಕೃಷಿ ಪರಿಕರ ವಿತರಣೆ

ಕನಕದಾಸರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಶಾಸಕ ಬಿ.ಎನ್.ರವಿಕುಮಾ‌ರ್

ಸೂಕ್ತ ದಾಖಲೆಗಳಿಲ್ಲದೆ ಉಳಿದಿರುವ ಮನೆ ಕಟ್ಟಡಗಳಿಗೆ ಅಧಿಕೃತ ದಾಖಲೆ ಒದಗಿಸಲು ಸರ್ಕಾರ ಜಾರಿ : ತಾ.ಪಂ. ಇಒ ಆರ್.ಹೇಮಾವತಿ

ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಂಡಾಗ ಮಾತ್ರ ಸಮಾನತೆ ಸಾಧ್ಯ : ತಹಶೀಲ್ದಾರ್ ಗಗನಸಿಂಧು

ಹಸುಗೂಸಿಗೆ “ಬುಕ್ ಆಪ್ ರೆಕಾರ್ಡ್ ಪ್ರಶಸ್ತಿ” ಹುಟ್ಟಿದ 8ನೇ ದಿನಕ್ಕೇ ಆಧಾರ್, 12ನೇ ದಿನಕ್ಕೆ ರೇಷನ್ ಕಾರ್ಡ್

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಾಮಫಲಕ ಕೆಡಿಪಿ ಸಭೆಯಲ್ಲಿ ತೆರವು ಖಂಡನೀಯವಾದುದು ಹಾಗು ಆಶಾ ಕಾರ್ಯಕರ್ತರ ಬೇಡಿಕೆ ಈಡೇರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ : ಶಾಸಕ ಬಿ.ಎನ್.ರವಿಕುಮಾ‌ರ್