--Ads--

ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ: ಡಿ ಕೆ ಮಹೇಂದ್ರ ಕುಮಾರ್ 

On: July 29, 2024 11:00 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್. …

ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ: ಡಿ ಕೆ ಮಹೇಂದ್ರ ಕುಮಾರ್ 

ದೇವನಹಳ್ಳಿ,ಜು.29 :ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿ ಜೀವಿಸುವ ಹಕ್ಕನ್ನು ಪಡೆದಿರುತ್ತಾನೆ ಅವನ ಹಕ್ಕಗಳನ್ನು ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಡಿ.ಕೆ. ಮಹೇಂದ್ರಕುಮಾರ್ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ತಾಲೂಕು ಪಂಚಾಯ್ತಿ ಬಳಿ ಇರುವ ಸಂಘದ ಕಛೇರಿಯಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಗುರುತಿನ ಚೀಟಿ ಹಾಗೂ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ ತಾರತಮ್ಯವಿಲ್ಲದೆ ಅನೇಕ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಕಾರ್ಯಗತ ಮಾಡುವ ಉದ್ದೇಶ ಹೊಂದಿರುವ ನಮ್ಮ ಸಂಘದಿಂದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಬಂದಿದೆ ಎಂದರು.

ಸಮಾಜದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರು ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ವಿಶ್ವದಲ್ಲಿ ಮಾನವ ಬದುಕಲು ತಮ್ಮ ಹಕ್ಕನ್ನು ಚಲಾಯಿಸಲು
ಯಾವುದೇ ಕೀಳರಿಮೆ, ಭಯ ತೊರೆದು ಜೀವಿಸುವ ಹಕ್ಕಿನ ಬಗ್ಗೆ ಸರ್ಕಾರಗಳು ನೀಡುವ ರಕ್ಷಣೆಯಿಂದ ಬದುಕಬಹುದೆಂದು ತಿಳಿಸುವ ಉದ್ದೇಶ ಹಾಗೂ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಲು ನಮ್ಮ ಮಾನವ ಹಕ್ಕುಗಳ ಪ್ರಚಾರ ಸಮಿತಿ ಸಹ ಭಾಗಿತ್ವವನ್ನು ಹೊಂದಿರುತ್ತದೆ ಎಂದರು.

WhatsApp

Join Now

Telegram

Join Now

Instagram

Join Now