ಮೀನಿನ ಆಹಾರ ಅಪೌಷ್ಟಿಕತೆ ಹೋಗಲಾಡಿಸುವ ಅತ್ಯುತ್ತಮ ಪೋಷಕಾಂಶವಾಗಿದೆ
ಮೀನಿನ ಅಹಾರದಿಂದ ದೊರೆಯುವ ಪೌಷ್ಟಿಕಾಂಶಗಳ ಕುರಿತು ಅರಿವು ಮೂಡಿಸುವ ಪ್ಲೇವರ್ಸ್ ಆಫ್ ವಾಟರ್ ಕಾರ್ಯಕ್ರಮ
ದೇವನಹಳ್ಳಿ: ಮೀನು ಸೇವನೆಯನ್ನು ಉತ್ತೇಜಿಸಲು ಮತ್ತು ಅಪೌಷ್ಟಿಕತೆಯನ್ನು ತಡೆಯಲು ಸರ್ಕಾರ ಮತ್ತು ವಿವಿಧ ಸಂಸ್ಥೆಗಳು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮೀನು ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಕಣ್ಣಿನ ದೃಷ್ಟಿ ವೃದ್ಧಿಸಲು ಮತ್ತು ಮೂಳೆಗಳು ಬಲಗೊಳ್ಳಲು ಇದು ಸಹಕಾರಿ. ವಿಶೇಷವಾಗಿ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ಹೋಗಲಾಡಿಸಲು ಮೀನಿನ ಆಹಾರ ಅತ್ಯುತ್ತಮ ಪೋಷಕಾಂಶವಾಗಿದೆ ಎಂದು ಜಲಾನಯನ ಇಲಾಖೆ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಸಾವಕನಹಳ್ಳಿ ಕೆರೆಯ ಅಂಗಳದಲ್ಲಿ ಮೀನುಗಾರಿಕೆ ಇಲಾಖೆಯಡಿಯಲ್ಲಿ ತಿಲಾಪಿಯ ಮೀನು ರೈತ ಉತ್ಪಾದಕರ ಸಂಸ್ಥೆಯ ವತಿಯಿಂದ ಮೀನುಗಾರಿಕೆ ಉದ್ಯಮ ಮತ್ತು ಮೀನಿನ ಅಹಾರದಿಂದ ದೊರೆಯುವ ಪೌಷ್ಟಿಕಾಂಶಗಳ ಕುರಿತು ಅರಿವು ಮೂಡಿಸುವ “ಪ್ಲೇವರ್ಸ್ ಆಫ್ ವಾಟರ್ ಕಾರ್ಯಕ್ರಮ”ದಲ್ಲಿ ಮಾತನಾಡಿದರು. ಕೋಟ್ಯಾಂತರ ಲಕ್ಷ ವೆಚ್ಚದಲ್ಲಿ ಮೀನುಗಾರಿಕೆ ಉದ್ಯಮ ನಡೆಯುತ್ತಿದ್ದು ಹಾಗಾಗಿ ಹೈನುಗಾರಿಕೆ ಜೊತೆ ಜೊತೆಯಲ್ಲಿ ಮೀನುಗಾರಿಕೆ ಒಂದು ಭಾಗವಾಗಿ ಮಾಡಿಕೊಳ್ಳಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮೀನಿಗಾರಿಕೆ ಮೀನಿಗಾರಿಕೆ ಪ್ರೋತ್ಸಾಹಿಸುವ ಸಲುವಾಗಿ ಸೊಸೈಟಿಗಳು ಇವೆ. ಜಲಾಶಯಗಳನ್ನು ಸಂರಕ್ಷಿಸಿ, ಮೀನುಗಾರಿಕೆ ಮಳಿಗೆಗಳನ್ನು ಸ್ಥಪಿಸಿ ಆದಾಯವನ್ನು ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಜಲಾನಯನ ಇಲಾಖೆಯ ನಿದೇಶಕ ಮೊಹಮದ್ ಪರ್ವೆಜ್ ಬಂತನಾಲ್ ಮಾತನಾಡಿ ಮೀನು ಸಾಕಾಣೆ ಮಾಡುವವರಿಗೆ ಇಲಾಖೆಯಿಂದ ಅನೇಕ ಸೌಲಭ್ಯ ಹಾಗೂ ತರಬೇತಿ ಕಾಯಕ್ರಮಗಳಿದ್ದು ಮೀನು ಸಾಕಾಣೆ ಮಾಡುವವರು ಇದರ ಸುದುಪಯೋಗ ಪಡೆದು ತಮ್ಮ ಜಮೀನುಗಳಲ್ಲಿ ಹೊಂಡಗಳಲ್ಲಿ ಮೀನುಗಳನ್ನು ಸಾಕಾಣೆ ಮಾಡಿ ಉತ್ತಮ ಲಾಭ ಗಳಿಸಬಹುದು ಹಾಗೂ ನೀವೇ ಸ್ವತಹ ಮಾರುಕಟ್ಟೆಯನ್ನು ಸಹ ನಿರ್ಮಾಣ ಮಾಡಬಹುದಾಗಿದೆ ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣವಾದ ಮೇಲೆ ಜನಸಂಖ್ಯೆ ಹೆಚ್ಚಾಗಿದ್ದು ದೇಶ ವಿದೇಶಗಳಿಂದ ಜನ ಆಗಮಿಸುತ್ತಾರೆ ಅಂತಹ ಜನದಟ್ಟಣೆ ಇರುವ ಕಡೆ ರೈತರೇ ಅಂಗಡಿಗಳನ್ನು ತೆರೆದು ಮಾರಾಟ ಮಳಿಗೆಗಳನ್ನು ಪ್ರಾರಂಭಿಸಿದರೆ ಉತ್ತಮ ಲಾಭಗಳಿಸಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಆಯೋಜಕರಾದ ತಿಲಾಪಿಯ ಮೀನು ರೈತ ಉತ್ಪಾದಕರ ಸಂಸ್ಥೆಯ ಸಿ.ಇ.ಓ ಮೀನಾಕ್ಷಿ.ಜಿ.ಎಂ. ಮೀನಿನ ಖಾದ್ಯಗಳನ್ನು ಸವಿಯಲು ಅವಕಾಶ ಮಾಡಿದ್ದರು.
ಇದೆ ವೇಳೆ ರೀಜನಲ್ ಸೆಂಟರ್‌ನ ವಿಜ್ಞಾನಿ ಡಾ.ನರಸಿಂಹಮೂರ್ತಿ, ಮೀನುಗಾರಿಕೆ ಇಲಾಖೆ ಉಪನಿರ್ದೆಶಕ ಶಿವಶಂಕರ್.ಎ.ಸಿ. ಸಹಾಯಕ ನಿರ್ದೆಶಕ ನಾಗೇಂದ್ರ ಬಾಬು.ಆರ್.ಎಸ್. ತಿಲಾಪಿಯ ಮೀನು ರೈತ ಉತ್ಪಾದಕರ ಸಂಸ್ಥೆಯ ಸಿ.ಇ.ಓ ಮೀನಾಕ್ಷಿ.ಜಿ.ಎಂ. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರಾಜಲಕ್ಷ್ಮಿ .ಎಂ ಮತ್ತಿತರರು ಇದ್ದರು.