ವಿಜಯ ದರ್ಪಣ ನ್ಯೂಸ್…..
ಕಲೆಗಳು ಬೆಳೆದರೆ ದೇಶದ ಸಂಸ್ಕೃತಿ ಬೆಳೆಯುತ್ತದೆ : ಶ್ರೀಮತಿ ನಮ್ರತ

ಬೆಂಗಳೂರು : ಪದ್ಮಿನಿ ಪ್ರಿಯ ನೃತ್ಯ ಕಲಾ ಅಕಾಡೆಮಿಯು ತನ್ನ 15ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಗರದ ನಯನ ಸಭಾಂಗಣದಲ್ಲಿ ವಿದುಷಿ ಉಷಾ ಬಸಪ್ಪನವರ ನಿರ್ದೇಶನದಲ್ಲಿ ಹಮ್ಮಿಕೊಂಡಿದ್ದ “ನೃತ್ಯ ವೈಭವ” ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀಮತಿ ಎನ್ ನಮ್ರತಾ ರವರು ನಮ್ಮ ಕಲೆಗಳು ಬೆಳೆದರೆ ದೇಶದ ಸಂಸ್ಕೃತಿ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಯಾವುದೇ ಕಲೆಯನ್ನು ಮಕ್ಕಳು ಕಲಿತರೆ ಆ ಮಕ್ಕಳ ದೈಹಿಕ ಆರೋಗ್ಯ ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಆರೋಗ್ಯ ವೃದ್ಧಿಸುತ್ತದೆ. ಇದರಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದರು.











