ವಿಜಯ ದರ್ಪಣ ನ್ಯೂಸ್……
ಇತಿಹಾಸದಿಂದ ಜನಾಂಗದ ಸಾಂಸ್ಕೃತಿಕ ಅರಿವು ಸಾಧ್ಯ : ಡಾ.ಸ್ಮಿತಾ ಡಿ.ರೆಡ್ಡಿ
ಬೆಂಗಳೂರು : ಒಂದು ಜನಾಂಗದ ಸಾಹಿತ್ಯ, ಸಂಸ್ಕೃತಿ, ಭಾಷೆ ಸಾಮಾಜಿಕ ವ್ಯವಸ್ಥೆಗಳನ್ನು ಅರಿಯಲು ಕನ್ನಡ ನಾಡನ್ನು ಆಳಿದ ರಾಜ ಮಹಾರಾಜರ ಕಾಲದ ಇತಿಹಾಸದ ಅಧ್ಯಯನ ಬಹಳ ಮಹತ್ವವನ್ನು ತಿಳಿಸುತ್ತದೆ ಎಂದು ಶಾಸನ ತಜ್ಞರು, ಪುರಾತತ್ವ ಇಲಾಖೆ ವಸ್ತು ಸಂಗ್ರಹಾಲಯ ನಿರ್ದೇಶಕಿ ಡಾ.ಸ್ಮಿತಾ ಡಿ.ರೆಡ್ಡಿ ಅಭಿಪ್ರಾಯಪಟ್ಟರು.
ಅವರು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಗೌಡತಿಯರ ಸೇನೆಯ ವತಿಯಿಂದ ಆಯೋಜಿಸಲಾಗಿದ್ದ ನಮ್ಮ ಕುಲ ಶಿಲ್ಪಿಗಳು ಮಾಸಿಕ 3ನೇ ಉಪನ್ಯಾಸ ಮಾಲಿಕೆಯಲ್ಲಿ “ಗಂಗರಸರುಮತ್ತು ಗಣಶಾಸ್ತ್ರ ಪ್ರಾವೀಣ್ಯತೆ” ವಿಷಯ ಕುರಿತು ಉಪನ್ಯಾಸ ನೀಡಿದರು.
ಒಂದು ರಾಜ್ಯ,ರಾಷ್ಟ್ರದ ಹಿರಿಮೆ ಗರಿಮೆ ತಿಳಿಯಲು ರಾಜಮಹಾರಾಜರ ಕಾಲದ ಆಡಳಿತವು ಆಕಾಲದ ಸಾಂಸ್ಕೃತಿಕ ಮಹತ್ವವನ್ನು ಸಾರುವ ಕೆಲಸ ಆಗುತ್ತದೆ. ಯಾವುದೇ ಜನಾಂಗವು ಇವತ್ತಿಗೂ ಸಂಸ್ಕಾರ, ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗಂಗರಸರುಗಳು ಪ್ರಮುಖವಾಗಿ ಕೋಲಾರ, ರಾಮನಗರ, ತುಮಕೂರು ಹೀಗೆ ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಅನುವಾದಕರು, ಜಾನಪದ ವಿದ್ವಾಂಸಕ ಡಾ.ಕೆ.ಆರ್.ಸಂಧ್ಯಾ ರೆಡ್ಡಿ ವಹಿಸಿ ಒಕ್ಕಲಿಗರು ಇಂದು ತಮ್ಮ ಆಚಾರ, ವಿಚಾರದ ಹಿನ್ನೆಲೆಯಲ್ಲಿ ಗಂಗಡಿಕಾರ, ಮೊರಸು, ಕುಂಚಿಟಿಗ, ಪೆಟ್ಟಿಗೆ, ಬುಜ್ಜಣಿಗೆ ಹೀಗೆ ಹರಿದ ಹಂಚಿ ಹೋಗುತ್ತಿದ್ದಾರೆ. ಇತಿಹಾಸವನ್ನು ಸರಿಯಾದ ರೀತಿಯಲ್ಲಿ ಅರ್ಥೈಸದೇ ಹೋದರೆ ನಮ್ಮ ಸಂಸ್ಕೃತಿ ಮರೆಯಾಗಿ ಹೋದೀತೆಂದು ಎಚ್ಚರಿಸಿದರು.












