--Ads--

ಜನಸೇವೆಯೆ ದೇವರ ಸೇವೆ : ಎನ್.ಆರ್.ರಮೇಶ್

On: January 15, 2025 5:25 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಜನಸೇವೆಯೆ ದೇವರ ಸೇವೆ : ಎನ್.ಆರ್.ರಮೇಶ್

ಯಡಿಯೂರು: ಎನ್.ಆರ್.ರಮೇಶ್ ರವರ ಅಭಿಮಾನಿ ಬಳಗದ ವತಿಯಿಂದ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷರು, ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ರವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಅಚರಿಸಿದರು.

ಎನ್.ಆರ್.ರಮೇಶ್ ರವರು ಅಭಿಮಾನಿಗಳು, ಸ್ನೇಹಿತರು ತಂದ ಕೇಕ್ ಆನ್ನು ಕತ್ತರಿಸಿ ಎಲ್ಲರಿಗೂ ಸಿಹಿ ವಿತರಿಸಿದರು.

ಸಾರ್ವಜನಿಕರು ಮತ್ತು ಅಭಿಮಾನಿಗಳು ಹಾಗೂ ಸ್ನೇಹಿತರು ಎನ್.ಆರ್.ರಮೇಶ್ ರವರನ್ನು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಎನ್.ಆರ್.ರಮೇಶ್ ರವರು ಮಾತನಾಡಿ ಜನಶಕ್ತಿ ಮುಂದೆ ಯಾರು ಶಕ್ತಿಯು ಇಲ್ಲ, ಜನರ ಸೇವೆಯನ್ನ ದೇವರ ಸೇವೆ ಎಂದು ಮಾಡುತ್ತಿದ್ದೇನೆ.ಯಡಿಯೂರು ವಾರ್ಡ್ ಇಂದು ಏಷಿಯ ಅತ್ಯಂತ ಸುಂದರ ವಾರ್ಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಯಡಿಯೂರು ವಾರ್ಡ್ ನಲ್ಲಿ ಯಜಿಯೂರು ಕೆರೆ ನವಿನವೀನ ಪ್ರವಾಸಿತಾಣವಾಗಿ ಮಾಡಲಾಗಿದೆ, ಉದ್ಯಾನವನ ಸುಂದರ, ಸೌಂದರ್ಯಕರಣ ಮಾಡಲಾಗಿದೆ. ಧನ್ವಂತರಿ ಉದ್ಯಾನವನ ಆಯುರ್ವೇದ ಸಸಿಗಳನ್ನು ನೆಟ್ಟು ಜನರ ಆರೋಗ್ಯಕ್ಕೆ ಪೂರಕವಾಗಿದೆ ಉದ್ಯಾನವನ.

ಕನ್ನಡ ಮೇರುನಟ ಡಾ.ರಾಜ್ ಕುಮಾರ್ ಮತ್ತು ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರತಿಮೆ ಸೌತ್ ಎಂಡ್ ನಲ್ಲಿ ಸ್ಥಾಪಿಸಲಾಗಿದೆ ಮೂರು ಮಹನೀಯರುಗಳು ಒಂದೇ ಜಾಗದಲ್ಲಿ ಇರುವುದು ರಾಜ್ಯದಲ್ಲಿಯೆ ಪ್ರಥಮ.

ಕನ್ನಡ ಸಾಹಿತ್ಯ ಲೋಕದ 8 ಜ್ಞಾನ ಪೀಠ ಪುರಸ್ಕೃತ ಹಲವಾರು ಮಹನೀಯರುಗಳು ಪ್ರತಿಮೆಗಳನ್ನು ಉದ್ಯಾನವನಗಳಲ್ಲಿ ಹಲವಾರು ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಕಾರಣ ಮುಂದಿನ ಪೀಳಿಗೆ ಯುವ ಸಮುದಾಯ ಮಹನೀಯರುಗಳ ಸಾಧನೆ ನೋಡಿ ಅವರ ಆದರ್ಶ ಮಾರ್ಗದರ್ಶನದಲ್ಲಿ ಸಾಗಲಿ ಎಂದು.
ಬಯೋಗ್ಯಾಸ್ ಘಟಕದಿಂದ ಯಡಿಯೂರು ವಾರ್ಡ್ ನಲ್ಲಿರುವ ಪಾರ್ಕ್ ಬಿಬಿಎಂಪಿ ಕಛೇರಿಗಳಿಗೆ ವಿದ್ಯುತ್ ಉಚಿತವಾಗಿ ಸಿಗುತ್ತಿದೆ ಇದರಿಂದ ಆರ್ಥಿಕವಾಗಿ ಉಳಿತಾಯವಾಗುತ್ತಿದೆ.

ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಉಚಿತ ಉದ್ಯೋಗ ಮೇಳ ಆಯೋಜಿಸಿ ಸಾವಿರಾರು ಯುವಕ, ಯುವತಿಯರಿಗೆ ಉದ್ಯೋಗ ಅವಕಾಶಕ್ಕೆ ನೀಡಲಾಗಿದೆ.

ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ಒಳಾಂಗಣ ಕ್ರೀಡಾಂಗಣ ಮತ್ತು ಹೊರಂಗಣ ಕ್ರೀಡಾಂಗಣ ನಿರ್ಮಾಣ ಹಾಗೂ ಗ್ರಂಥಾಲಯ ಸ್ಥಾಪನೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮತ್ತು ವೈಟ್ ಟಾಫಿಂಗ್ ಕಾಮಗಾರಿ ಪೂರ್ಣ ಮಾಡಿ ಸಾರ್ವಜನಿಕರ ತೆರಿಗೆ ಹಣ ಸಮರ್ಪಕವಾಗಿ ಉಳಿತಾಯ ಮಾಡಲಾಗಿದೆ.

ಕಳೆದ 15ವರ್ಷಗಳಿಂದ ಯಡಿಯೂರು ವಾರ್ಡ್ ನಲ್ಲಿ ಜನಸಂಪರ್ಕ ಅಭಿಯಾನ ಯಶ್ವಸಿಯಾಗಿ ನಡೆಯುತ್ತಿದೆ ಪ್ರತಿ ಭಾನುವಾರ ಮನೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಅಲಿಸಿ, ಪರಿಹರಿಸುವ ಕಾರ್ಯ ಮಾಡಲಾಗುತ್ತಿದೆ.

ಭ್ರಷ್ಟ ಬಿಬಿಎಂಪಿ ಮತ್ತು ಸರ್ಕಾರ ಅಧಿಕಾರಿಗಳ ವಿರುದ್ದ ಹೋರಾಟದಲ್ಲಿ ನೂರಾರು ಅಧಿಕಾರಿಗಳು ವಿರುದ್ದ ಸಮರ ಸಾರಲಾಗಿದೆ. ಭಷ್ಟರ ಮುಖ ಬಯಲು ಮಾಡುವ ತನಕ ನನ್ನ ಹೋರಾಟ ನಿಲ್ಲದು. ನನ್ನ ಹೋರಾಟ, ಅಭಿವೃದ್ದಿ ಕೆಲಸಗಳಿಗೆ ಮತ್ತು ಸಂಘಟನೆಗಳಿಗೆ ಬೆನ್ನುತಟ್ಟಿ ಪ್ರೋತ್ಸಹಿಸುತ್ತಿರುವ ಜನರಿಗೆ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣೆ, ಕ್ಯಾನ್ಸರ್ ತಪಾಸಣೆ, ಉಚಿತ ರಕ್ತದಾನ ಶಿಬಿರ ಆಯೋಜಿಸಾಗಿತ್ತು

WhatsApp

Join Now

Telegram

Join Now

Instagram

Join Now