ಸಗಟು ಮಳಿಗೆಗೆ ಬೇಟಿ ನೀಡಿದ ಆಹಾರ ಸಚಿವ ಮುನಿಯಪ್ಪ

ವಿಜಯ ದರ್ಪಣ ನ್ಯೂಸ್…..

ಸಗಟು ಮಳಿಗೆಗೆ ಬೇಟಿ ನೀಡಿದ ಆಹಾರ ಸಚಿವ ಮುನಿಯಪ್ಪ

ಮೈಸೂರು.ಜುಲೈ 19: ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಇಂದು ಮೈಸೂರಿನ ದಕ್ಷಿಣ ನಗರದ ಸಗಟು ಮಳಿಗೆ ಬಂಡಿಪಾಲ್ಯಕ್ಕೆ ಬೇಟಿ ನೀಡಿ ಆಹಾರ ಧಾನ್ಯಗಳ ಪರಿಶೀಲನೆ ನಡೆಸಿದರು .

ಅಕ್ಕಿ,ರಾಗಿಯ ಗುಣಮಟ್ಟದ ಕುರಿತು ಪರಿಶೀಲಿಸಿ ಉತ್ತಮವಾದ ಆಹಾರ ಧಾನ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು ಎಂದರು.

ಸಗಟು ಮಳಿಗೆಯನ್ನು ಪರಿಶೀಲಿಸಿ ಸಗಟು ಮಳಿಗೆಯು ಗುಣಮಟ್ಟದ್ದಾಗಿದ್ದು ಉತ್ತಮವಾಗಿದೆ ಎಂದು ಸಿಬ್ಬಂದಿಗೆ ಪ್ರಶಂಸಿಸಿ ರಾಜ್ಯದ ಎಲ್ಲಾ ಸಗಟು ಮಳಿಗೆಗಳು ಈ ರೀತಿಯಲ್ಲಿ ಗುಣಮಟ್ಟವನ್ನು ಕಾಪಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಗಟು ಮಳಿಗೆಯಲ್ಲಿ ಹಮಾಲಿ ಕೆಲಸಗಾರನ್ನು ಮಾತನಾಡಿಸಿ ಅವರ ಸಮಸ್ಯೆಗಳು ಏನೇ ಇದ್ದರು ಬಗೆಹರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್,ಜಂಟಿ ಉಪ ನಿರ್ದೇಶಕ ಮಂಟೇಸ್ವಾಮಿ,ಸಗಟು‌ಮಳಿಗೆಯ ಸಹಾಯ ನಿರ್ದೇಶಕ ಕಿರಣ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.