--Ads--

2025 ವಾರ್ಷಿಕ ಮಾರಾಟದ ಆಫರ್: ಬೇರೂರು, ದಿ ಪರ್ಪಲ್ ಟರ್ಟಲ್ಸ್ ಮತ್ತು ಓರ್ಜಾ ಘೋಷಣೆ

On: August 5, 2025 4:58 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

2025 ವಾರ್ಷಿಕ ಮಾರಾಟದ ಆಫರ್: ಬೇರೂರು, ದಿ ಪರ್ಪಲ್ ಟರ್ಟಲ್ಸ್ ಮತ್ತು ಓರ್ಜಾ ಘೋಷಣೆ

ಬೆಂಗಳೂರು; ಲೈಟಿಂಗ್, ಪೀಠೋಪಕರಣಗಳು, ಮನೆಯ ಅಲಂಕಾರಗಳು ಮತ್ತು ಉದ್ಯಾನ ಅಲಂಕಾರಗಳ ಆಯ್ಕೆ ವಿಚಾರದಲ್ಲಿ 2025ರ ವಾರ್ಷಿಕ ಮಾರಾಟ ತಾಣಕ್ಕೆ ಬೇರೂರು, ದಿ ಪರ್ಪಲ್ ಟರ್ಟಲ್ಸ್ ಮತ್ತು ಓರ್ಜಾ ಸ್ವಾಗತಿಸುತ್ತಿದೆ. ಅದು ಕೂಡ ಸೀಮಿತ ಅವಧಿಗೆ ಹಾಗೂ ಅದ್ಭುತ ಬೆಲೆಯಲ್ಲಿ..

ಎಲ್ಲಾ ಉತ್ಪನ್ನಗಳ ಮೇಲೆ ಶೇ.30 ರಿಯಾಯಿತಿ ಮತ್ತು ಆಯ್ದ ವಸ್ತುಗಳ ಮೇಲೆ ಶೇ.50 ವರೆಗೆ ರಿಯಾಯಿತಿ ಪಡೆಯಿರಿ.

ಚಿಲ್ಲರೆ ಮಾರಾಟ (ಅಂಗಡಿಯಲ್ಲಿ): ಆಗಸ್ಟ್ 7 ರಿಂದ 10 ರವರೆಗೆ ಬೆಂಗಳೂರಿನ ಇಂದಿರಾನಗರ ಮತ್ತು ಲ್ಯಾವೆಲ್ಲೆ ರಸ್ತೆಯಲ್ಲಿರುವ ಎಲ್ಲಾ ದಿ ಪರ್ಪಲ್ ಟರ್ಟಲ್ಸ್ ಮತ್ತು ಬೇರೂರು ಅಂಗಡಿಯಲ್ಲಿ ಈ ರಿಯಾಯಿತಿ ಆಫರ್‌ ಇರಲಿದೆ.

ಆನ್‌ಲೈನ್ ಮಾರಾಟ: ಆಗಸ್ಟ್ 11 ರಿಂದ 13 ರವರೆಗೆ www.thepurpleturtles.com | www.beruru.com | www.oorjaa.in ನಲ್ಲಿ

ನಿಮ್ಮ ಮನಕ್ಕೆ ಮುದ ನೀಡುವ ಪ್ರತಿಯೊಂದು ಸ್ಥಳಕ್ಕೂ ಸೌಂದರ್ಯ ಮತ್ತು ಒಂದು ಶುಭ ತರುವ ಕಾಲಾತೀತ ತುಣುಕುಗಳನ್ನು ಅನ್ವೇಷಿಸಲು ಈ ಅಂಗಡಿಗಳಿಗೆ ಭೇಟಿ ನೀಡಿ ಅಥವಾ ಆನ್‌ಲೈನ್‌ನಲ್ಲಿ ಕೂಡ ಶೋಧ ಮಾಡಿ.

&&&&&&&&&&&&&&&&&&&&&&

ಯೋಜನಾ ನಿರ್ದೇಶಕ ಮತ್ತು ಗುಮಾಸ್ತ ಕಂ ಲೆಕ್ಕಿಗ ಹುದ್ದೆಗೆ ಅರ್ಜಿ ಆಹ್ವಾನ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಬೆಂ.ಗ್ರಾ.ಜಿಲ್ಲೆ.ಆಗಸ್ಟ್ 03: ಜಿಲ್ಲಾ ಬಾಲಕಾರ್ಮಿಕ ಯೋಜನೆಯಲ್ಲಿ ಯೋಜನಾ ನಿರ್ದೇಶಕ ಮತ್ತು ಗುಮಾಸ್ತ ಕಂ ಲೆಕ್ಕಿಗ ಹುದ್ದೆಗೆ ಗೌರವಧನ ಆಧಾರದ ಮೇರೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಯೋಜನಾ ನಿರ್ದೇಶಕ 01 ಹುದ್ದೆಗೆ ಮಾಸಿಕ ಗೌರವಧನ 31,763 ಹಾಗೂ ಪ್ರಯಾಣ ಭತ್ಯೆ 3,000 ನೀಡಿ 1 ವರ್ಷ ಅವಧಿ ವರೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಯೋಜನಾ ನಿರ್ದೇಶಕ ಹುದ್ದೆಗೆ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ/ ಎಂ.ಎಸ್.ಡಬ್ಲೂ/ ಅಭಿವೃದ್ಧಿ ಅಧ್ಯಯನ/ ಲಾಭರಹಿತ ಸಂಸ್ಥೆಗಳ (ಎನ್ ಜಿಒ ) ನಿರ್ವಹಣಾ ಶಾಸ್ತ್ರ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ವಿವಿಧ ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಕುರಿತು 05 ವರ್ಷಗಳ ಸೇವಾ ಅನುಭವ ಹೊಂದಿರಬೇಕು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆಯನ್ನು ನೀಡಲಾಗುವುದು. ಕನ್ನಡ ಮತ್ತು ಇಂಗ್ಲೀಷ್ ಮಾತನಾಡುವ ಹಾಗೂ ಬರೆಯುವಲ್ಲಿ ಉತ್ತಮ ಕೌಶಲ್ಯ ಹೊಂದಿರಬೇಕು. ಕಂಪ್ಯೂಟರ್ ಜ್ಞಾನವನ್ನು ಹೊಂದಿರುವುದು ಅವಶ್ಯಕವಾಗಿರುತ್ತದೆ (MS Office, MS Excel & MS Powerpoint & Internet Operation.). ಕಂಪ್ಯೂಟರ್ ಜ್ಞಾನದ ಬಗ್ಗೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. 40 ವಯೋಮಾನ ಮೀರಿರಬಾರದು. ಕಛೇರಿಯ ಲೆಕ್ಕಪತ್ರಗಳ ವ್ಯವಹಾರವನ್ನು ಅರಿತಿರಬೇಕು. ಕಛೇರಿಯ ಲೆಕ್ಕಪತ್ರಗಳ ವ್ಯವಹಾರವನ್ನು ಅರಿತಿರಬೇಕು. ಯಾವುದೇ ಸರ್ಕಾರಿ ಕೆಲಸದಿಂದ ವಜಾಗೊಂಡಿರುವ ಹಾಗೂ ನಿವೃತ್ತಿ ಹೊಂದಿರುವ ಮತ್ತು ಸರ್ಕಾರಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳಾಗಿರಬಾರದು.

ಗುಮಾಸ್ತ ಕಂ ಲೆಕ್ಕಿಗ 01 ಹುದ್ದೆಗೆ ಮಾಸಿಕ ಗೌರವಧನ 21,909 ನೀಡಿ 1 ವರ್ಷ ಅವಧಿ ವರೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಗುಮಾಸ್ತ ಕಂ ಲೆಕ್ಕಿಗ ಹುದ್ದೆಗೆ ಬಿ.ಕಾಂ ಪದವಿ ಹೊಂದಿರಬೇಕು. ಲೆಕ್ಕಪತ್ರಗಳನ್ನು ನಿರ್ವಹಿಸುವಲ್ಲಿ/ ಅಕೌಂಟೆಂಟ್ ಹುದ್ದೆಯಲ್ಲಿ ಕನಿಷ್ಠ 05 ವರ್ಷಗಳ ಅನುಭವ ಹೊಂದಿರಬೇಕು. ಲೆಕ್ಕ ಪತ್ರದಲ್ಲಿ ಬ್ಯಾಂಕ್ ವ್ಯವಹಾರಗಳನ್ನು, ಸರ್ಕಾರದ ಲೆಕ್ಕಪತ್ರಗಳನ್ನು ತಯಾರಿಸುವ ಲೆಕ್ಕಪತ್ರಗಳಿಗೆ ಸಂಬಂಧಿಸಿದ ದಾಖಲಾತಿಗಳು, ರಿಜಿಸ್ಟರ್ಗಳ ಕುರಿತು ಮಾಹಿತಿಯನ್ನು ಹೊಂದಿರಬೇಕು. ಕನ್ನಡ ಮತ್ತು ಇಂಗ್ಲೀಷ್ ಮಾತನಾಡುವ ಹಾಗೂ ಬರೆಯುವಲ್ಲಿ ಉತ್ತಮ ಕೌಶಲ್ಯ ಹೊಂದಿರಬೇಕು. ಕಂಪ್ಯೂಟರ್ ಜ್ಞಾನವನ್ನು ಹೊಂದಿರುವುದು ಅವಶ್ಯಕವಾಗಿರುತ್ತದೆ. ಟ್ಯಾಲಿ ಸಾಪ್ಟವೇರ್ ಕಂಪ್ಯೂಟರ್ ಜ್ಞಾನದ ಬಗ್ಗೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. 40 ವಯೋಮಾನ ಮೀರಿರಬಾರದು. ಕಛೇರಿಯ ಪತ್ರ ವ್ಯವಹಾರಗಳು, ಲೆಕ್ಕಪತ್ರಗಳ ವ್ಯವಹಾರವನ್ನು ಗಣಕೀಕೃತದಲ್ಲಿ ನಮೂದಿಸಿ. ಕೇಂದ್ರ ಕಛೇರಿಗಳಿಗೆ ಗಣಕ ಯಂತ್ರ ಮೂಲಕ ಕಳುಹಿಸುವ ಕುರಿತು ಪರಿಣತಿ ಹೊಂದಿರಬೇಕು.

ಅರ್ಹ ಅಭ್ಯರ್ಥಿಗಳು ಆಗಸ್ಟ್ 20 ರೊಳಗಾಗಿ ಕಾರ್ಮಿಕ ಅಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ- ಜಿಲ್ಲಾ ಬಾಲಕಾರ್ಮಿಕ ಯೋಜನೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, 5 ನೇ ಮುಖ್ಯ ರಸ್ತೆ, 2 ನೇ ಹಂತ, ಸೋಮೇಶ್ವರ ಬಡಾವಣೆ, ದೊಡ್ಡಬಳ್ಳಾಪುರ-561203 ಇಲ್ಲಿ ನೇರವಾಗಿ ಅರ್ಜಿ ಸಲ್ಲಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-27622133, ಇಮೇಲ್ ವಿಳಾಸ lobngrural@gmail.com ಅಥವಾ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಕಾರ್ಮಿಕ ಅಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

WhatsApp

Join Now

Telegram

Join Now

Instagram

Join Now