ಸ್ವಿಟ್ಜರ್ಲೆಂಡ್ ದೇಶವು ರೇಷ್ಮೆ ಮತ್ತು ಹಸು ಸಾಕಾಣಿಕೆಯ ಬಗ್ಗೆ ಅಧ್ಯಯನ ಕೈಗೊಂಡು ನಮ್ಮಲ್ಲಿರುವ ವೈಶಿಷ್ಟ್ಯತೆಯನ್ನು  ಅಳವಡಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ: ಡಾ.ಚಂದ್ರಶೇಖರ್ 

ವಿಜಯ ದರ್ಪಣ ನ್ಯೂಸ್……

ಸ್ವಿಟ್ಜರ್ಲೆಂಡ್ ದೇಶವು ರೇಷ್ಮೆ ಮತ್ತು ಹಸು ಸಾಕಾಣಿಕೆಯ ಬಗ್ಗೆ ಅಧ್ಯಯನ ಕೈಗೊಂಡು ನಮ್ಮಲ್ಲಿರುವ ವೈಶಿಷ್ಟ್ಯತೆಯನ್ನು  ಅಳವಡಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ: ವಿಜ್ಞಾನಿ ಡಾ.ಚಂದ್ರಶೇಖರ್

ಶಿಡ್ಲಘಟ್ಟ : ಸ್ವಿಟ್ಜರ್ಲೆಂಡ್ ದೇಶವು ಹೈನುಗಾರಿಕೆಯಲ್ಲಿ ವಿಶ್ವದಲ್ಲಿಯೇ ಬಹಳ ಪ್ರಸಿದ್ಧವಾಗಿದೆ ಅವರು ಇಲ್ಲಿ ರೇಷ್ಮೆ ಮತ್ತು ಹಸು ಸಾಕಾಣಿಕೆಯ ಬಗ್ಗೆ ಅಧ್ಯಯನ ಕೈಗೊಂಡು ನಮ್ಮಲ್ಲಿರುವ ವೈಶಿಷ್ಟ್ಯತೆಯನ್ನು ಅವರ ದೇಶದಲ್ಲಿ ಅಳವಡಿಸಿಕೊಳ್ಳುವ ಉದ್ದೇಶದಿಂದ ಹೊಂದಿದ್ದಾರೆ ವಿಜ್ಞಾನಿ ಡಾ.ಚಂದ್ರಶೇಖರ್ ತಿಳಿಸಿದರು.

ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೇಷ್ಮೆ ಕೃಷಿಕ ಎಚ್.ಜಿ.ಗೋಪಾಲಗೌಡ ಅವರ ಹಿಪ್ಪುನೇರಳೆ ತೋಟ ಮತ್ತು ರೇಷ್ಮೆ ಹುಳು ಸಾಕಾಣಿಕಾ ಕೇಂದ್ರ, ನಾರಾಯಣಪ್ಪ ಅವರ ರೇಷ್ಮೆ ನೂಲು ಬಿಚ್ಚಾಣಿಕೆ ಕೇಂದ್ರ, ರೇಷ್ಮೆ ಗೂಡಿನ ಮಾರುಕಟ್ಟೆ, ಮಧು ಅವರ ಸ್ವಯಂಚಾಲಿತ ರೀಲಿಂಗ್ ಘಟಕಕ್ಕೆ ಭೇಟಿ ನೀಡಿ, ರೇಷ್ಮೆ ಬೆಳೆ ಬೆಳೆಯುವ ರೀತಿ, ವಿವಿಧ ಹಂತಗಳು, ಮಾರುಕಟ್ಟೆ ವ್ಯವಸ್ಥೆ, ನೂಲು ಬಿಚ್ಚಾಣಿಕೆ, ಅದಕ್ಕೂ ಹೈನುಗಾರಿಕೆಗೂ ಇರುವ ಸಂಬಂಧಗಳ ಕುರಿತು ಜಿ.ಕೆ.ವಿ.ಕೆ. ರೇಷ್ಮೆ ಕೃಷಿ ವಿಭಾಗದ ವಿಜ್ಞಾನಿ ಡಾ.ಚಂದ್ರಶೇಖರ್ ನೇತೃತ್ವದಲ್ಲಿ ಆಗಮಿಸಿದ್ದ ಸ್ವಿಟ್ಜರ್ಲೆಂಡ್ ದೇಶದ ತಂಡದಲ್ಲಿ ವಿಜ್ಞಾನಿಗಳು, ರೈತರು, ಉದ್ಯಮಿಗಳು ಹಾಗೂ ಇತರೆ ತಂತ್ರಜ್ಞರು
ಮಾಹಿತಿ ಪಡೆದರು.

ಹಿತ್ತಲಹಳ್ಳಿಯ ಪ್ರಗತಿಪರ ರೇಷ್ಮೆ ಕೃಷಿಕ ಎಚ್.ಜಿ.ಗೋಪಾಲಗೌಡ ಮಾತನಾಡಿ, “ಸ್ವಿಟ್ಜರ್ಲೆಂಡ್ ದೇಶದ ಪ್ರತಿನಿಧಿಗಳು ನಮ್ಮ ರೇಷ್ಮೆ ಬೆಳೆಯನ್ನು ಬಂದು ವೀಕ್ಷಣೆ ಮಾಡಿ ಬಹಳಷ್ಟು ವಿವರಗಳನ್ನು ಆಸಕ್ತಿಯಿಂದ ಕೇಳಿ ತಿಳಿದುಕೊಂಡರು. ಅವರು ನಮ್ಮ ಸಾವಯವ ಕೃಷಿ ಪದ್ಧತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರುಎಂದು ಹೇಳಿದರು.

ಸ್ವಿಟ್ಜರ್ಲೆಂಡ್ ದೇಶದಿಂದ 22 ಜನರ ತಂಡ ರೇಷ್ಮೆ ಮತ್ತು ಹೈನುಗಾರಿಕೆ ಅಧ್ಯಯನಕ್ಕೆಂದು ಶಿಡ್ಲಘಟ್ಟ ತಾಲ್ಲೂಕಿಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ರೇಷ್ಮೆ ಬೆಳೆಗಾರರಾದ ಬೋದಗೂರು ವೆಂಕಟಸ್ವಾಮಿರೆಡ್ಡಿ, ಹಿತ್ತಲಹಳ್ಳಿ ಕೆ.ಸುರೇಶ್, ಬೂದಾಳ ರಾಮಾಂಜಿನಪ್ಪ, ಮಳ್ಳೂರು ಗೋಪಾಲಪ್ಪ, ಮುತ್ತೂರು ನಾರಾಯಣಸ್ವಾಮಿ,ಕಾಚಹಳ್ಳಿ ಶೈಲಮ್ಮ, ಮಳ್ಳೂರು ಸುಮ, ಸುಜಾತ, ಪ್ರಕಾಶ್ ಮುಂತಾದವರು ಪಾಲ್ಗೊಂಡಿದ್ದರು.