--Ads--

ರಂಗಭೂಮಿ ಕಲೆಯನ್ನು ಬೆಳೆಸಿ ಉಳಿಸಿ ಪ್ರೋತ್ಸಾಹ ನೀಡಿ: ಗ್ರಾ. ಪಂ. ಸದಸ್ಯ ಎನ್ ಚಂದ್ರು

On: February 4, 2026 12:51 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ರಂಗಭೂಮಿ ಕಲೆಯನ್ನು ಬೆಳೆಸಿ ಉಳಿಸಿ ಪ್ರೋತ್ಸಾಹ ನೀಡಿ: ಗ್ರಾ. ಪಂ. ಸದಸ್ಯ ಎನ್ ಚಂದ್ರು

ತಾಂಡವಪುರ ಫೆಬ್ರವರಿ 4 ಇತ್ತೀಚಿನ ದಿನಗಳಲ್ಲಿ ರಂಗಭೂಮಿ ಕಲೆ ನಶಿಸಿಹೋಗುತ್ತಿದ್ದು ಈ ರಂಗಭೂಮಿಕತೆಯನ್ನು ಪೌರಾಣಿಕ ನಾಟಕಗಳ ಮೂಲಕ ರಂಗಭೂಮಿ ಕಲಾವಿದರನ್ನು ಕಲೆಯನ್ನು ಬೆಳೆಸಿ ಉಳಿಸಿ ಕಲೆಗೆ ಪ್ರೋತ್ಸಾಹ ನೀಡುವ ಮೂಲಕ ರಂಗಭೂಮಿಕಲೆಯನ್ನು ಮತ್ತೊಮ್ಮೆ ಬೆಳೆಸಲು ಕಲಾಭಿಮಾನಿಗಳು ಪ್ರೋತ್ಸಾಹ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಎನ್ ಚಂದ್ರು ಕಲಾಭಿಮಾನಿಗಳಲ್ಲಿ ಮನವಿ ಮಾಡಿದರು.

ಅವರು ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದಲ್ಲಿ ಗ್ರಾಮದೇವತೆ ಅಗ್ನಿ ನೇತ್ರಾಂಬ ಮಾರಮ್ಮನ ಜಾತ್ರೆ ಪ್ರಯುಕ್ತ ಅಡಕನಹಳ್ಳಿ ಹುಡಿ ತೆಂಕಲಮ್ಮ ಕಲಾಪೋಷಿತ ಪೌರಾಣಿಕ ನಾಟಕ ಮಂಡಳಿಯವರು ಶನಿಪ್ರಭಾವ ಅಥವಾ ರಾಜ ವಿಕ್ರಮ ಎಂಬ ಪೌರಾಣಿಕ ನಾಟಕವನ್ನು ಅಡಕನಹಳ್ಳಿ ಹುಂಡಿ ರಂಗಭೂಮಿ ಕಲಾವಿದರು ನಾಟಕವನ್ನು ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಎನ್ ಚಂದ್ರು ರವರು ಭಾಗವಹಿಸಿ ಹಡಕನಹಳ್ಳಿ ಉಂಡಿ ಗ್ರಾಮದ ಯಜಮಾನರು ಹಾಗೂ ರಂಗಭೂಮಿ ಕಲಾವಿದರು ನೀಡಿದ ಗೌರವವನ್ನು ಸ್ವೀಕರಿಸಿ ಮಾತನಾಡುತ್ತಾ ಇತ್ತೀಚಿಗೆ ರಂಗಭೂಮಿ ಕಲ ನಶಿಸಿ ಹೋಗುತ್ತಿದ್ದು ಇಂತಹ ಪರಿಸ್ಥಿತಿಯಲ್ಲಿ ನಮ್ಮ ಪಕ್ಕದ ಗ್ರಾಮದ ರಂಗಭೂಮಿ ಕಲಾವಿದರು ನಮ್ಮ ಗ್ರಾಮದಲ್ಲಿ ಇಂತಹ ಪೌರಾಣಿಕ ನಾಟಕವನ್ನು ಹಮ್ಮಿಕೊಳ್ಳುವ ಮೂಲಕ ರಂಗಭಮಿ ಕಲಾವಿದರನ್ನು ಪ್ರತಿ ಗ್ರಾಮದಲ್ಲೂ ಹುಟ್ಟು ಹಾಕುವ ಪ್ರಯತ್ನವಾಗಿದ್ದು ಇಂತಹ ನಮ್ಮ ಗ್ರಾಮದ ಯುವಕರು ಇಂತಹ ಪೌರಾಣಿಕ ನಾಟಕಗಳನ್ನು ಏರ್ಪಡಿಸುವ ಮೂಲಕ ರಂಗಭೂಮಿ ಕಲೆಯನ್ನು ಬೆಳೆಸಿ ಉಳಿಸಲು ಪ್ರೋತ್ಸಾಹ ನೀಡಿ ಇದಕ್ಕೆ ನಿಮ್ಮ ಸಂಪೂರ್ಣ ಬೆಂಬಲವಿದೆ ಎಂದು ಚಂದ್ರು ರವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ ಕೆ ನಾಗೇಶ ಗ್ರಾಮ ಪಂಚಾಯತ್ ಸದಸ್ಯ ಕೆ ರಾಜು ಎನ್ ಚಂದ್ರು ಪುನೀತ್ ದಲಿತ ಮುಖಂಡ ಕೆಂಪಣ್ಣ ಅಡಕನಹಳ್ಳಿ ಯಜಮಾನರಾದ ಹೆಣ್ಣೆಗೌಡ ಕರಿಗೌಡ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಸ್ವಾಮಿ ಪೌರಾಣಿಕ ನಾಟಕದ ಸಂಗೀತ ನಿರ್ದೇಶಕ ಅಡಕನಹಳ್ಳಿ ಹುಂಡಿ ಮಹಾದೇವ ನಾಟಕ ಪ್ರಯೋಜಕರಾದ ಮಹದೇವು ಹಾಗೂ ರಂಗಭೂಮಿ ಕಲಾವಿದರು ಕಲಾಪೋಷಕರು ಗ್ರಾಮಸ್ಥರು ಹಾಜರಿದ್ದರು

WhatsApp

Join Now

Telegram

Join Now

Instagram

Join Now