--Ads--

ಜೂನ್ 28 ರ ಭಾನುವಾರ ರಾಜ್ಯ ಮಟ್ಟದ ಜಾನಪದ ಸಮ್ಮೇಳನ

On: June 24, 2026 5:56 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಜೂನ್ 28 ರ ಭಾನುವಾರ ರಾಜ್ಯ ಮಟ್ಟದ
ಜಾನಪದ ಸಮ್ಮೇಳನ
———————————-

ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಇದೇ 28 ನೇ ತಾರೀಖು ಭಾನುವಾರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ರಾಜ್ಯ ಮಟ್ಟದ ಜಾನಪದ ಸಮ್ಮೇಳನ ಆಯೋಜಿಸಿದೆ. ಕವಿ,ಕಥೆಗಾರ, ಜಾನಪದ ಚಿಂತಕ, ನಿವೃತ್ತ ಮುಖ್ಯೋಪಾಧ್ಯಾಯರಾದ , ಹಿರಿಯ ಸಾಹಿತಿ ಶ್ರೀ ಸಾ.ಮ.ಶಿವಮಲ್ಲಯ್ಯನವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಸಾಂಸ್ಕೃತಿಕ ಚಿಂತಕರು, ಕನ್ನಡ ಪುಸ್ತಕ ಪ್ರಾಧಿಕಾರದ‌ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸಲಿದ್ದು, ಪ್ರಜಾವಾಣಿ ಕನ್ನಡ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀ ರವೀಂದ್ರ ಭಟ್ಟ ಅವರು ಶಿವಮಲ್ಲಯ್ಯ ಅವರ ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಸಾಹಿತಿ ಆಗುಂಬೆ ನಟರಾಜ್, ಕವಯಿತ್ರಿ ಆಶಾಶಿವುಗೌಡ, ಭಾಗವಹಿಸಲಿದ್ದು ಶ್ರೀಮತಿ ಗುಣಸಾಗರಿ ಸಿ.ನಾಗರಾಜ್ ಅವರು ನೀಡಿರುವ ಶ್ರೀ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಯನ್ನು ಮಹಾಂತೇಶ್ ನಿಟ್ಟೂರು, ಎಂ.ಜೆ.ಗಿರೀಗೌಡ,ಸಿ.ಪುಟ್ಟಸ್ವಾಮಿ, ಸಾತನೂರು ಮಾಯಣ್ಣ, ಸ.ಶಿವರಾಮು, ನಾಗರತ್ನ ಹಿರೇಮಠ್, ಯು.ಸಿ.ಚನ್ನೇಗೌಡ, ಭೀಮಣ್ಣ ಪೂಜಾರಿ ಸೇರಿದಂತೆ 10 ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಗುಣಸಾಗರಿ ನಾಗರಾಜ್ ಅವರ ಶ್ರೀ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಜಿ.ಸುಶೀಲಮ್ಮ ಅವರು ಹಿರಿಯ ಪತ್ರಕರ್ತ‌ ವಿಜಯ ದರ್ಪಣ ಪತ್ರಿಕೆ ಸಂಪಾದಕ ಮಂಡಿಬೆಲೆ ರಾಜಣ್ಣ, ವಿಜಯನಗರ ಕಸಾಪ ಅಧ್ಯಕ್ಷ ಉಮೇಶ್ ಚಂದ್ರ‌ ಸೇರಿದಂತೆ 10 ಮಂದಿ ‌ಸಾಧಕರಿಗೆ ಶ್ರೀ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿ ಪ್ರದಾನ ಮಾಡುವರು.

ವಿಶ್ರಾಂತ ಕುಲಪತಿ ಜಾನಪದ ಲೋಕದ ಅಧ್ಯಕ್ಷ ಡಾ.ಹಿ.ಚಿ.ಬೋರಲಿಂಗಯ್ಯ ಅಧ್ಯಕ್ಷತೆ ವಹಿಸುವರು, ಅತಿಥಿಗಳಾಗಿ ಸಾಹಿತಿಗಳಾದ ಎಂ.ವಿ.ಶಾವಪ್ರಸಾದ್, ಕೆ.ಎಂ.ರೇವಣ್ಣ ಭಾಗವಹಿಸಲಿದ್ದು, ವಿಚಾರ ಸಂಕಿರಣ, ಕವಿಗೋಷ್ಠಿ ಕಾರ್ಯಕ್ರಮ ಇದ್ದು ಚಿಂತಕ ಸಚಿನ್ ನಾರಾಯಣ್, ಡಾ.ಜಿ.ಎನ್.ವಿಶ್ವಾರಾಧ್ಯ ವಿಚಾರ ಮಂಡಿಸಲಿದ್ದಾರೆ. ಬೆಳಗ್ಗೆ ಧ್ವಜಾರೋಹಣವನ್ನು ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ವಿ.ರೇಣುಕಾ ಪ್ರಸನ್ನ ನೆರವೇರಿಸುವರು, ಪುಸ್ತಕ ಮಾರಾಟ ಮತ್ತು ಪ್ರದರ್ಶನ ಮಳಿಗೆಗೆ ನೆಲಮಂಗಲ ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಬಿ.ಆರ್.ಪ್ರದೀಪ್ ಕುಮಾರ್ ಚಾಲನೆ ನೀಡುವರು. ನೃತ್ಯ ಪ್ರದರ್ಶನ, ಸೋಬಾನೆಪದ, ಜಾನಪದ ಗೀತಗಾಯನ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸಿ.ಹೇಮಾವತಿ ಸಿಸಿರಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು ಸಾಹಿತ್ಯ, ಸಂಸ್ಕೃತಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ತಿಳಿಸಿದ್ದಾರೆ.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಕನ್ನಡ ಚಳುವಳಿಗಳ ಪಿತಾಮಹ ಅ.ನ.ಕೃ ಕನ್ವೆನ್ಷನ್ ಸೆಂಟರ್ ಮತ್ತು ಚಲನಚಿತ್ರರಂಗದ ಧೃವತಾರೆ ಡಾ.ಪುನೀತ್ ರಾಜ್ ಕುಮಾರ್ ಸಭಾಂಗಣ ಲೋಕರ್ಪಣೆ

ರಕ್ಷಾ ಫೌಂಡೇಷನ್ ನಿಂದ ಶಾಲೆಯ ಮಕ್ಕಳಿಗೆ 2 ಲಕ್ಷ ಉಚಿತ ನೋಟ್ ಪುಸ್ತಕ, ವಿದ್ಯಾರ್ಥಿ ವೇತನ, ಲ್ಯಾಪ್ ಟಾಪ್ ವಿತರಣೆ 

ಸುಧಾರಿತ ಹೃದಯದ ಆರೈಕೆಗೆ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಎರಡನೇ ಕ್ಯಾಥ್ ಲ್ಯಾಬ್ ಸೇರ್ಪಡೆ :ವಾರ್ಷಿಕ ಹೆಚ್ಚುವರಿ 3,000 ರೋಗಿಗಳಿಗೆ ಚಿಕಿತ್ಸೆ

ಶ್ರೀರಾಘವೇಂದ್ರ ಸ್ವಾಮಿಗಳ ಪವಮಾನಪುರ ರಾಯರ ಮಠದಲ್ಲಿ “ಗುರು ಪುಷ್ಯ ಯೋಗ”ದ ಪ್ರಯುಕ್ತ ರಾಯರಿಗೆ ವಿಶೇಷ ಫಲ ಪಂಚಾಮೃತ ಅಭಿಷೇಕ 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು  ಸನ್ಮಾನಿಸಿದ  ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ

ಅಮ್ಮನ ಮಡಿಲು ಟ್ರಸ್ಟ್ ನಿಂದ 2 ದಿನಗಳ ನಾಟಕೋತ್ಸವ