ವಿಜಯ ದರ್ಪಣ ನ್ಯೂಸ್….
ಕನ್ನಡ ಚಳುವಳಿಗಳ ಪಿತಾಮಹ ಅ.ನ.ಕೃ ಕನ್ವೆನ್ಷನ್ ಸೆಂಟರ್ ಮತ್ತು ಚಲನಚಿತ್ರ ರಂಗದ ಧೃವತಾರೆ ಡಾ.ಪುನೀತ್ ರಾಜ್ ಕುಮಾರ್ ಸಭಾಂಗಣ ಲೋಕರ್ಪಣೆ

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ ನಲ್ಲಿ ಅ.ನ.ಕೃಷ್ಣರಾಯರ ಕನ್ವೆನ್ಷನ್ ಸೆಂಟರ್ ಮತ್ತು ಡಾ.ಪುನೀತ್ ರಾಜ್ ಕುಮಾರ್ ಸಭಾಂಗಣವನ್ನು ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು, ಲೋಕಸಭಾ ಸದಸ್ಯ ಎಲ್.ಎಸ್.ತೇಜಸ್ವಿಸೂರ್ಯ, ನಿರ್ಮಾಪಕಿ ಶ್ರೀಮತಿ ಆಶ್ವಿನಿ ಪುನೀತ್ ರಾಜ್ ಕುಮಾರ್ ರವರು, ಅ.ನ.ಕೃಅವರ ಪುತ್ರ ಗೌತಮ್ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು, ಆಡಳಿತ ಪಕ್ಷದ ಮಾಜಿ ನಾಯಕರಾದ ಎನ್.ಆರ್.ರಮೇಶ್ ರವರು, ನಿಕಟಪೂರ್ವ ಬಿಬಿಎಂಪಿ ಸದಸ್ಯೆ ಶ್ರೀಮತಿ ಪೂರ್ಣಿಮ ರಮೇಶ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಇದೇ ಸಂದರ್ಭದಲ್ಲಿ ಆರ್.ಅಶೋಕ್ ರವರು ಮಾತನಾಡಿ ಅಂತರ ಜಲ ಹೆಚ್ಚಸಲು, ಪರಿಸರ ಉಳಿಸಲು ಯಡಿಯೂರು ಕೆರೆ ಅಭಿವೃದ್ಧಿ ಪಡಿಸಲಾಗಿದೆ. ಪಾಲಿಕೆ ಹಳೆಯ ಕಟ್ಟಡವಿತ್ತು. ಇಂದು ಭವ್ಯವಾದ ಸುಸಜ್ಜಿತವಾದ ಕಲ್ಯಾಣ ಮಂಟಪ ಮತ್ತು ಸಭಾಂಗಣ ನಿರ್ಮಾಣ ಮಾಡಲಾಗಿದೆ.ಇದು ಬಡವರಿಗೊಸ್ಕರ ಮಾಡಲಾಗಿದೆ. ಸಾಲ ಮಾಡಿ ಮದುವೆ ಮಾಡಿಕೊಳ್ಳಬಾರದು ಎಂಬುದು ಉದ್ದೇಶ.

ಪುನೀತ್ ರಾಜ್ ಕುಮಾರ್ ರಸ್ತೆ ಇಟ್ಟು ಶಾಶ್ವತ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಲಾಗಿದೆ.ವ್ಯಕ್ತಿಗಿಂತ ಅವರ ಮಾಡಿರುವ ಸಾಧನೆ ಮುಖ್ಯ. ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಪಾರ್ಕ್ ಮತ್ತು ಆಟದ ಮೈದಾನಗಳು ಹೆಚ್ಚು. ಸರ್ಕಾರ ಜಾಗ ಒತ್ತುವರಿಯಾಗಬಾರದು.
ಹಿಂದಿನ ಬೆಂಗಳೂರು, ಇಂದಿನ ಬೆಂಗಳೂರು ಬಾರಿ ಬದಲಾವಣೆ ಆಗಿದೆ. ರಸ್ತೆ ಮತ್ತು ಕಸ ಸಮಸ್ಯೆ ಹೆಚ್ಚು ಇದೆಕ್ಕಲ್ಲ ಕಾರಣ ನಾವುಗಳು. ಎಲ್ಲವು ಸರ್ಕಾರ ಮಾಡಲು ಸಾಧ್ಯವಿಲ್ಲ ಸರ್ಕಾರದ ಜೊತೆಯಲ್ಲಿ ಸಾರ್ವಜನಿಕರು ಕೈಜೋಡಿಸಿದಾಗ ಬೆಂಗಳೂರು ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ತೇಜಸ್ವಿಸೂರ್ಯರವರು ಮಾತನಾಡಿ ಬೀದರ್ ನಿಂದ ಚಾಮರಾಜನಗರ ಏಕೀಕರಣದಲ್ಲ ಆ.ನೃ ಕೃಷ್ಣರಾಯರು ಪ್ರಮುಖವಾದ ಪಾತ್ರವಿದೆ. ಪುನೀತ್ ರವರನ್ನು ಪ್ರತಿದಿನ, ಪ್ರತಿ ಮನೆಯಲ್ಲಿ ಸ್ಮರಣೆ ಮಾಡಿಕೊಳ್ಳುತ್ತಾರೆ. ಕಡಿಮೆ ವೆಚ್ಚದಲ್ಲಿ ಸುಸಜ್ಜಿತ ಇರುವ ಹವಾನಿಯಂತ್ರಣವಿರುವ ಕಲ್ಯಾಣ ಮಂಟಪವನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬಹುದು. ಸಭಾಂಗಣ ಶಾಲೆ ಕಾರ್ಯಕ್ರಮ, ಚಲನಚಿತ್ರ ಆಡಿಯೊ, ವಿಡಿಯೊ ಲಾಂಚ್ ಕಾರ್ಯಕ್ರಮ. ಕಳೆದ 6ವರ್ಷಗಳಿಂದ ಪಾಲಿಕೆಯ ಚುನಾವಣೆ ಮಾಡಿಲ್ಲ ಬೆಂಗಳೂರು ಹಾಳಗಲು ಇದು ಕಾರಣ ಅದಷ್ಟು ಬೇಗ ಸರ್ಕಾರ ಪಾಲಿಕೆ ಚುನಾವಣೆ ಮಾಡಿ. ಜನರಿಗೆ ನೇರವಾಗಿ ತಲುಪುವವರು ಪಾಲಿಕೆ ಸದಸ್ಯರುಗಳು ಎಂದು ಹೇಳಿದರು.
ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾತನಾಡಿ ಸಾರ್ವಜನಿಕರ ಉಪಯೋಗಕ್ಕೆ ಕಲ್ಯಾಣ ಮಂಟಪ ಮತ್ತು ಸಭಾಂಗಣ ನಿರ್ನಿಸಲಾಗಿದೆ. ಇದರಲ್ಲಿ ಅತ್ಯಂತ ಕಡಿಮೆ ಬಾಡಿಗೆ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಈ ಕಟ್ಟಡ ಸುಂದರ ಸುಸಜ್ಜಿತವಾಗಿ ಮೂಡಿಬರಲು ಕಾರಣಕರ್ತರಾದ ಎನ್.ಅರ್.ರಮೇಶ್ ರವರಿಗೆ ಮತ್ತು ಪಾಲಿಕೆಗೆ ಧನ್ಯವಾದಗಳು ಎಂದು ಹೇಳಿದರು.
ಎನ್.ಆರ್.ರಮೇಶ್ ರವರು ಮಾತನಾಡಿ ಕನ್ನಡ ಚಳುವಳಿಗಳ ಪಿತಾಮಹ , ಅ.ನ.ಕೃ ಸಮುದಾಯ ಭವನ ಮತ್ತು ಕನ್ನಡ ಚಿತ್ರರಂಗ, ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಮಹತ್ವ ಕೊಡುಗೆ ನೀಡಿದ ಪುನೀತ್ ರಾಜ್ ಕುಮಾರ್ ರವರ ಸಭಾಂಗಣ ನಿರ್ಮಿಸಲಾಗಿದೆ. ಮದುವೆ ಇನ್ನಿತರೆ ಕಾರ್ಯಕ್ರಮಗಳಿಗೆ 75ಸಾವಿರ ರೂಪಾಯಿ ಬಾಡಿಗೆ ಹವಾನಿಯಂತ್ರಣ ಕಲ್ಯಾಣ ಮಂಟಪ ಮತ್ತು ಆಡಿಟೋರಿಯಂ ಆನ್ನು 25ಸಾವಿರ ಅತ್ಯಂತ ಕಡಿಮೆ ವೆಚ್ಚದಲ್ಲಿ ನೀಡಲಾಗುತ್ತಿದೆ.
ಕಳೆದ 16ವರ್ಷಗಳಿಂದ ಯುಡಿಯೂರು ವಾರ್ಡ್ ಏಷಿಯದ ಅತ್ಯಂತ ಸುಂದರ ವಾರ್ಡ್ ಕೀರ್ತಿಗಳಿಸಿದೆ ಯಡಿಯೂರು ವಾರ್ಡ್ ನಲ್ಲಿ ಜನನದಿಂದ ಅಂತ್ಯಸಂಸ್ಕಾರದವರಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಕ್ಕಳ ಆಸ್ಪತ್ರೆ ಶಿಕ್ಷಣ ಬೇಕಾದ ಹೈಟೆಕ್ ವ್ಯವಸ್ಥೆ, ಆರೋಗ್ಯ ಸುಧಾರಣೆ ಕ್ರೀಡಾಂಗಣ, ಪಾರ್ಕ್ ಗಳು ಹಾಗೂ ವಿದ್ಯುತ್ ಉಳಿತಾಯಕ್ಕೆ ಹಸಿಕಸದಿಂದ ವಿದ್ಯುತ್ ಉತ್ಪಾದನೆ ಹಾಗೂ ವೈದಿಕ ಕಾರ್ಯ ಮಾಡಲು ವೈದಿಕ ಭವನ ಯಡಿಯೂರು ವಾರ್ಡ್ ಮಾದರಿ ವಾರ್ಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.
ಮಾಜಿ ಪಾಲಿಕೆ ಸದಸ್ಯರುಗಳಾದ ಎ.ಹೆಚ್.ಬಸವರಾಜ್, ಸರಳ ಮಹೇಶ್, ಗೋವಿಂದರಾಜುರವರು ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು.











