--Ads--

ನಂಜನಗೂಡು ಕುಸ್ತಿಗೆ ಹೆಸರುವಾಸಿ : ಶಾಸಕ ದರ್ಶನ್ ಧ್ರುವನಾರಾಯಣ

On: February 8, 2026 11:41 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ನಂಜನಗೂಡು ಕುಸ್ತಿಗೆ ಹೆಸರುವಾಸಿ : ಶಾಸಕ ದರ್ಶನ್ ಧ್ರುವನಾರಾಯಣ

ತಾಂಡವಪುರ ಫೆಬ್ರುವರಿ ಏಳು ದಕ್ಷಿಣ ಕಾಶಿ ನಂಜನಗೂಡು ಹಲವು ಕ್ರೀಡೆಗಳ ಜೊತೆಗೆ ಕುಸ್ತಿ ಪಂದ್ಯಾವಳಿಗಳಿಗೆ ಹೆಸರುವಾಸಿಯಾಗಿದೆ ಎಂದು ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವ ನಾರಾಯಣ್ ರವರು ಹೇಳಿದರು.

ಅವರು ಇಂದು ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಪುರುಷರು ಮತ್ತು ಮಹಿಳೆಯರ ಹೊನಲು -ಬೆಳಕಿನ ಎರಡು ದಿನಗಳ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ
ನಗರದಲ್ಲಿ ಕುಸ್ತಿ ಪಂದ್ಯಾವಳಿ ಆ ಯೋಜನೆ ಮಾಡುವಂತೆ ಕಳೆದ ಎರಡು ವರ್ಷಗಳಿಂದ ಹೇಳುತ್ತಿದ್ದರು.

ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈಪಂದ್ಯಾವಳಿ ಅನುಕೂಲವಾಗಿದೆ. ನಾನು ಕೂಡ ಕ್ರೀಡಾಭಿಮಾನಿಯಾಗಿ ಪ್ರೋತ್ಸಾಹ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಇಂತಹ ಕ್ರೀಡೆಗಳನ್ನು ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

ಉರಿಲಿಂಗ ಪೆದ್ದಿ ಮಠದ ಪೀಠಾಧ್ಯಕ್ಷ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಕುಸ್ತಿ ಪಂದ್ಯಾವಳಿ ಒಂದು ಜನಪದ ಶೈಲಿ ಕ್ರೀಡೆಯಾಗಿದೆ. ಇಂತಹ ಕ್ರೀಡೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಸಹಕಾರಿಯಾಗಿದೆ. ಪ್ರತಿ ವರ್ಷ ಇಂತಹ ಕ್ರೀಡೆಗಳು ನಡೆಯಬೇಕು. ದಿ. ದ್ರುವ ನಾರಾಯಣ್ ರವರಂತೆ ದರ್ಶನ್ ಕೂಡ ಇಂತಹ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರಿನ ಮಾಜಿ ಮಹಾಪೌರರಾದ ಪುರುಷೋತ್ತಮ್, ಕಳಲೆ ಕೇಶವಮೂರ್ತಿ, ರಾಂಬೊ ಕಿರಣ್, ಗ್ರಾಮ ಪಂಚಾಯತಿಗಳ ಒಕ್ಕೂಟದ ತಾಲೂಕು ಅಧ್ಯಕ್ಷ ತೊರೆಮಾವು ಟಿಡಿಗಿರೀಶ್, ಸುಂದರ್ ರಾಜ್, ರಾಜೇಶ್, ಪರಮೇಶ್, ಈಶ್ವರ್,ಕೃಷ್ಣಪ್ಪ,ಗಿರೀಶ್ ಹಾಜರಿದ್ದರು.

WhatsApp

Join Now

Telegram

Join Now

Instagram

Join Now