--Ads--

ಶ್ರೀರಾಘವೇಂದ್ರ ಸ್ವಾಮಿಗಳ ಪವಮಾನಪುರ ರಾಯರ ಮಠದಲ್ಲಿ “ಗುರು ಪುಷ್ಯ ಯೋಗ”ದ ಪ್ರಯುಕ್ತ ರಾಯರಿಗೆ ವಿಶೇಷ ಫಲ ಪಂಚಾಮೃತ ಅಭಿಷೇಕ 

On: June 18, 2026 3:50 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಶ್ರೀರಾಘವೇಂದ್ರ ಸ್ವಾಮಿಗಳ ಪವಮಾನಪುರ ರಾಯರ ಮಠದಲ್ಲಿ “ಗುರು ಪುಷ್ಯ ಯೋಗ”ದ ಪ್ರಯುಕ್ತ ರಾಯರಿಗೆ ವಿಶೇಷ ಫಲ ಪಂಚಾಮೃತ ಅಭಿಷೇಕ 

ಬೆಂಗಳೂರು : ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ವಿಚಾರಣಾಕರ್ತ ಶ್ರೀ ಗಿರಿರಾಜಾಚಾರ್ ಹಾಗೂ ನೂತನ ವ್ಯವಸ್ಥಾಪಕರ ಶ್ರೀ ನಂದಕಿಶೋರಾಚಾರ್ ಇವರ ನೇತೃತ್ವದಲ್ಲಿ ಗುರು ಪುಷ್ಯ ಯೋಗದ ಪ್ರಯುಕ್ತ ಲೋಕಕಲ್ಯಾಣಕ್ಕಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಫಲಪಂಚಾಮೃತ ಅಭಿಷೇಕವನ್ನು ಅರ್ಚಕ ಶ್ರೀನಿವಾಸ ಆಚಾರ್ಯರು ನೆರವೇರಿಸಿದರು.
ತದನಂತರ ಗುರುರಾಯರ ಬೃಂದಾವನಕ್ಕೆ ವಿಶೇಷ ಪುಷ್ಪಗಳಿಂದ ಅಲಂಕಾರವನ್ನು ಮಾಡಲಾಗಿ ನಂತರ ಮಹಾಮಂಗಳಾರತಿಯು ನೆರವೇರಿತು.
ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಗುರುರಾಯರ ಸನ್ನಿಧಿಗೆ ಆಗಮಿಸಿ ದೀಪಗಳನ್ನು ಬೆಳಗಿಸಿ ಪ್ರಾರ್ಥನೆಯನ್ನು ಸಲ್ಲಿಸಿ ಅನ್ನದಾನದ ಸೇವೆಯಲ್ಲಿ ಭಾಗವಹಿಸಿ, ಪರಿಮಳ ಪ್ರಸಾದ ಶೇಷವಸ್ತ್ರ ಮತ್ತು ತೀರ್ಥ ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾದರು.

ಇದೇ ಸಂದರ್ಭದಲ್ಲಿ ಚಿತ್ರ ನಟ ಶಿಷ್ಯ ಖ್ಯಾತಿಯ ದೀಪಕ್, ಗುರು ಪುಷ್ಯ ಯೋಗದ ಪ್ರಯುಕ್ತ ಗುರುರಾಯರ ಸನ್ನಿಧಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಆರತಿಯನ್ನು ನೆರವೇರಿಸಲು ಬೆಳ್ಳಿಯ ತಟ್ಟೆ ಮತ್ತು ದೀಪವನ್ನು ದಾನದ ರೂಪವಾಗಿ ಸಮರ್ಪಿಸಿದರು.
ನಂತರದಲ್ಲಿ ವ್ಯವಸ್ಥಾಪಕ  ಶ್ರೀ ನಂದಕಿಶೋರ ಆಚಾರ್ಯರಿಂದ ಗುರುಗಳ ಶೇಷ ವಸ್ತ್ರ ಪರಿಮಳ ಪ್ರಸಾದ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಗುರು ರಾಯರ ಅನುಗ್ರಹಕ್ಕೆ ಪಾತ್ರರಾದರು .

WhatsApp

Join Now

Telegram

Join Now

Instagram

Join Now