--Ads--

ಆನ್ಲೈನ್ ಆಸೆ ಆಮಿಷಗಳಿಗೆ ಬಲಿಯಾಗದಿರಿ: ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್

On: February 10, 2026 5:59 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸುರಕ್ಷಿತ ಅಂತರ್ಜಾಲ ದಿನ

ಆನ್ಲೈನ್ ಆಸೆ ಆಮಿಷಗಳಿಗೆ ಬಲಿಯಾಗದಿರಿ: ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್

ಬಿಜಿಎಸ್ ನಗರ ದೇವನಹಳ್ಳಿ ತಾಲೂಕು ಬೆಂಗಳೂರು ಗ್ರಾಮಾಂತರ ಫೆಬ್ರವರಿ 10:

ಪ್ರತಿ ದಿನ ನಾವು ಒಂದಲ್ಲ ಒಂದು ರೀತಿಯಲ್ಲಿ ಇಂಟರ್ನೆಟ್ ಅನ್ನು ಬಳಸುತ್ತೇವೆ ಅದರಿಂದ ಎಷ್ಟು ಉಪಯೋಗ ಇದೆಯೇ ಅಷ್ಟೇ ಅಪಾಯ ಇದ್ದು ಆನ್ಲೈನ್ ನಲ್ಲಿ ತೋರುವ ಆಸೆ ಆಮಿಷಗಳಿಗೆ ಬಲಿಯಾಗದಿರಿ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್ ಅವರು ತಿಳಿಸಿದರು.

ಇಂದು ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ವತಿಯಿಂದ ಆಯೋಜಿಸಿದ್ದ ಸುರಕ್ಷಿತ ಅಂತರ್ಜಾಲ ದಿನದ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು,

ಇಂಟರ್ನೆಟ್ ಬಳಕೆಯಲ್ಲಿ ಬಹಳಷ್ಟು ಎಚ್ಚರ ವಹಿಸಬೇಕು, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆನ್ಲೈನ್ ಸ್ಕ್ಯಾಮ್ ನಡೆಯುತ್ತಿವೆ, ಬ್ಲ್ಯಾಕ್ ಮೆಲ್, ಅನ್ ಲೈನ್ ಗೇಮ್ ಈ ರೀತಿಯ ಚಟಗಳಿಗೆ ಇಂದಿನ ಯುವ ಜನತೆ ಮೋಸ ಹೋಗುತ್ತಿದ್ಧಾರೆ. ರೀಲ್ಸ್ ನೋಡುವುದುದರಿಂದ ಸಮಯ ವ್ಯರ್ಥ್ಯ ಮಾಡುತ್ತಿದ್ಧಾರೆ. ಅಂರ್ಜಾಲವನ್ನು ವೃತ್ತಿ ಜೀವನಕ್ಕೆ ಮತ್ತು ವೈಯಕ್ತಿಕ ಜೀವನಕ್ಕೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟು ಮಾತ್ರ ಬಳಸಿಕೊಳ್ಳಿ ಎಂದು ಹೇಳಿದರು.

“ಸ್ಮಾರ್ಟ್ ತಂತ್ರಜ್ಞಾನ, ಸುರಕ್ಷಿತ ಆಯ್ಕೆಗಳು-ಎಐಯ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯ ಅನ್ವೇಷಣೆ ಇಂಟರ್ನೆಟ್ ಬಳಕೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಅಪಾಯಗಳು, ವಂಚನೆಗಳು ಹಾಗೂ ಕೃತಕ ಬುದ್ಧಿಮತೆ(AI) ಯ ಜವಾಬ್ದಾರಿಯುತ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ವಿಶೇಷವಾಗಿ ಮಕ್ಕಳು, ಮಹಿಳೆಯರು ಮತ್ತು ಯುವಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಯೋಜನಾಧಿಕಾರಿ ರಾಮಕೃಷ್ಣ, ಜಿಲ್ಲಾಧಿಕಾರಿ ಕಛೇರಿ ಸಹಾಯಕ ರಾಜೀವ್ ಸುಲೋಚನ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now