--Ads--

ಮೈಸೂರು ಜಿಲ್ಲೆ, ಮೈಸೂರು ನಗರಲ್ಲೆಡೆ ಶಿವರಾತ್ರಿ ಸಂಭ್ರಮದ ಸಿದ್ಧತೆ

On: February 14, 2026 6:14 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮೈಸೂರು ಜಿಲ್ಲೆ, ಮೈಸೂರು ನಗರಲ್ಲೆಡೆ ಶಿವರಾತ್ರಿ ಸಂಭ್ರಮದ ಸಿದ್ಧತೆ

ತಾಂಡವಪುರ ಫೆಬ್ರವರಿ 14 ಮೈಸೂರು ಜಿಲ್ಲೆ ಮತ್ತು ಸಾಂಸ್ಕೃತಿಕ ನಗರಿಯಲ್ಲಿ ತ್ರಿನೇತ್ರೇಶ್ವರ ದೇವಾಲಯ ಹೊರತಾಗಿಯೂ ನಗರದ ಅನೇಕ ಇತಿಹಾಸ ಪ್ರಸಿದ್ಧ ಶಿವನ ದೇವಾಲಯಗಳಲ್ಲಿ ಶಿವರಾತ್ರಿ ಸಂಭ್ರಮಕ್ಕ ಸಜ್ಜಾಗಿವೆ.
ರಾಮಾನುಜ ರಸ್ತೆಯಲ್ಲಿನ ಗುರುಕುಲದಲ್ಲಿರುವ ನೂರೊಂದು ಶಿವಲಿಂಗಗಳನ್ನು ಸ್ವಚ್ಛಗೊಳಿಸಿ, ಪೂಜೆಗೆ ಸಜ್ಜು ಮಾಡಲಾಯಿತು. ಇದರ ಮುಂಭಾಗದಲ್ಲಿರುವ ಕಾಮೇಶ್ವರ, ಕಾಮೇಶ್ವರಿ, ಕೆ.ಜಿ.ಕೊಪ್ಪಲು, ಪಡುವಾರಹಳ್ಳಿಯಲ್ಲಿರುವ ಚಂದ್ರಮೌಳೇಶ್ವರ, ಚಾಮುಂಡಿ ಬೆಟ್ಟದ ಮಹಾಬಲೇಶ್ವರಸ್ವಾಮಿ ದೇಗುಲದಲ್ಲೂ ಶಿವರಾತ್ರಿಯ ಆಚರಣೆ ಸಿದ್ದತೆ ನಡೆದವು.

ಜಯಲಕ್ಷ್ಮೀಪುರಂನ ಕಾಳಿದಾಸ ರಸ್ತೆಯ ಚಂದ್ರಕಲಾ ಆಸ್ಪತ್ರೆ ಸಮೀಪ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯವು ಶಿವರಾತ್ರಿ ಪ್ರಯುಕ್ತ ಅಡಿ ಎತ್ತರ ಶಿವಲಿಂಗ ಸ್ಥಾಪಿಸಿದೆ. ಅಲ್ಲದೆ ದಕ್ಷಿಣ ಕಾಶಿ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ತಾಂಡವಪುರ ಬಳಿ ಇರುವ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿಯ ದೇವಾಲಯಗಳಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ ಅಭಿಷೇಕ ಸೇರದಂತೆ ಮುಂತಾದ ದೇವತಾ ಕಾರ್ಯಗಳು ಜರುಗಲಿವೆ

ಚಾಮರಾಜಪುರಂನ ಗೀತಾ ರಸ್ತೆಯಲ್ಲಿನ ಪ್ರಸನ್ನ ವಿಶ್ವೇಶ್ವರ ಸ್ವಾಮಿ, ಖಿಲ್ಲೆ ಮೊಹಲ್ಲಾದ ಭೈರವೇಶ್ವರಸ್ವಾಮಿ, ಅಶೋಕ ರಸ್ತೆಯ ಮುಕ್ಕಣೇಶ್ವರ ಸ್ವಾಮಿ, ದಿವಾನ್ಸ್ ರಸ್ತೆಯ ಅಮೃತೇಶ್ವರ ದೇವಸ್ಥಾನ, ಬೋಗಾದಿಯ ನಾಗೇಶ್ವರ ಭೋಗೇಶ್ವರಸ್ವಾಮಿ, ಕುಂಬಾರಕೊಪ್ಪಲು, ಸಿದ್ದಪ್ಪ ಚೌಕ, ನಕೇರಿ, ಬನ್ನೂರು ರಸ್ತೆ, ಲಷ್ಕ‌ರ್ ಮೊಹಲ್ಲಾದ ಕೇರಿ ಹಾಗೂ ಇತರೆಡೆ ಇರುವ ಮಹದೇಶ್ವರ ದೇವಾಲಯ, ಸುತ್ತೂರು ಮಠ, ಗಣಪತಿ ಸಚ್ಚಿದಾನಂದ ಆಶ್ರಮದಲ್ಲೂ ಆಚರಣೆ ನಡೆಯುವುದು ನಗರದ ವಿಶೇಷ.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ನಾಡಹಬ್ಬ ಜಂಬುಸವಾರಿಯಲ್ಲಿ  ಅಂಬಾರಿ ಹೊರುವ ಆನೆ ಪ್ರಶಾಂತ್ ಆಯ್ಕೆಯಾಗಿದ್ದಾನೆ ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರಿನ ಜಿ. ಪಂ. ಸಭಾಂಗಣದಲ್ಲಿ ಕುಡಿಯುವ ನೀರು, ಘನತ್ಯಾಜ್ಯ ನಿರ್ವಹಣೆ ಹಾಗೂ ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಾಲೋಚನಾ ಸಭೆ ನಡೆಸಿದ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ

ಮೈಸೂರು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿರುವ ಕೊಪ್ಪಳದ ಶ್ರೀಗಳು ಸುತ್ತೂರು ಮಠಕ್ಕೆ ಭೇಟಿ

ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪುರಸ್ಕೃತ  ಪತ್ರಕರ್ತ ಟಿಕೆ ಬಸವರಾಜು ರವರಿಗೆ ರೈತ ಸಂಘದಿಂದ ಸನ್ಮಾನ

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದ ಮೈಸೂರು ಜಿಲ್ಲೆ ಉಸ್ತುವಾರಿ ಸಚಿವರು, ಶಾಸಕರುಗಳು

ಗ್ರಾಮೀಣ ಪತ್ರಕರ್ತ ತಾಂಡವಪುರ ಟಿಕೆ ಬಸವರಾಜು ಅವರಿಗೆ 2025 ನೇ ಸಾಲಿನ ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರಧಾನ