--Ads--

ಅಹಿಂಸಾತ್ಮಕ ಚಳುವಳಿಯಾಗಿ ಗ್ರಾಮ ಸತ್ಯಾಗ್ರಹವನ್ನು ಮುಂದುವರಿಸಬೇಕಿದೆ: ಜಯದೇವ್

On: February 14, 2026 6:31 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಅಹಿಂಸಾತ್ಮಕ ಚಳುವಳಿಯಾಗಿ ಗ್ರಾಮ ಸತ್ಯಾಗ್ರಹವನ್ನು ಮುಂದುವರಿಸಬೇಕಿದೆ: ಜಯದೇವ್

ತಾಂಡವಪುರ ಫೆಬ್ರುವರಿ 14: ಅಹಿಂಸಾತ್ಮಕ ಚಳುವಳಿಯಾಗಿ ಗ್ರಾಮ ಸತ್ಯಾಗ್ರಹವನ್ನು ಮುಂದುವರಿಸಬೇಕಿದೆ ಗಾಂಧಿವಾದಿ ಜಯದೇವ್ ಅಭಿಪ್ರಾಯ ವ್ಯಕ್ತಪಡಿಸಿದರು ಪಟ್ಟರು.ಬದನವಾಳು ಸತ್ಯಾಗ್ರಹದ ಸತ್ಯಾಗ್ರಹಿಗಳ ಸಮಾಲೋಚನಾ ಸಭೆ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಜರುಗಿತು.

ಸಭೆಯಲ್ಲಿ ಗಾಂಧಿವಾದಿಗಳಾದ ಪ್ರಸನ್ನ, ಜಯದೇವ್, ತುಮಕೂರಿನಿಂದ ಯತಿರಾಜ್, ಚಾಮರಾಜನಗರದಿಂದ ವೆಂಕಟರಾಜು, ಪುಣಜೂರು ದೊರೆಸ್ವಾಮಿ, ಎ.ಡಿ. ಸಿಲ್ವಾ, ತಗಡೂರು ಮೋಹನ್, ಬದನವಾಳು ಮಹದೇವಪ್ಪ, ಉಮಾಶಂಕರ್, ಬೆಂಗಳೂರಿನಿಂದ ಪವಿತ್ರ ಮುದ್ದಯ್ಯ, ಗ್ರಾಮ ಸೇವಾ ಸಂಘದಿಂದ ಲಾವಣ್ಯ, ಅಭಿಲಾಷ್, ಲೇಖಕರಾದ ಜಿ. ಪಿ. ಬಸವರಾಜು ಆಂದೋಲನ ಪತ್ರಿಕೆಯ ರಶ್ಮಿ ಕೋಟಿ ಮತ್ತು ರೈತರಾದ ಕರುಣಾಕರ್ ಭಾಗವಹಿಸಿದ್ದರು. ಸಭೆಯಲ್ಲಿ ಪ್ರಸನ್ನ ಅವರು ನಿರ್ಣಯವನ್ನು ಸಭೆಯಲ್ಲಿ ಓದಿದರು.

ಭಾಗವಹಿಸಿದ ಎಲ್ಲರೂ ಈ ಕರಡು ನಿರ್ಣಯಕ್ಕೆ ಎಲ್ಲರೂ ತಮ್ಮ ಸಮ್ಮತಿ ಸೂಚಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಪ್ರಸನ್ನ ಅವರು, 15 ವರ್ಷಗಳ ಹಿಂದೆ ನಡೆದ ಬದನವಾಳು ಸತ್ಯಾಗ್ರಹ ಮುಖ್ಯವಾಗಿ ಅತಿಯಾದ ವಾಹನಗಳ ಬಳಕೆ, ಆಡಂಬರದ ಕಾರ್ಯಕ್ರಮಗಳು ಹಾಗೂ ವ್ಯಾಪಾರೀಕರಣ ಇಂತಹ ವಿಚಾರವನ್ನು ಮುಖ್ಯವಾಗಿರಿಸಿಕೊಂಡು ಆರಂಭವಾಗಿ ಚಳುವಳಿಯ ರೂಪ ತಳೆಯಿತು.

ಆದರೆ ಇಂದು ಕೂಡ ಪರಿಸ್ಥಿತಿ ಬದಲಾಗಿಲ್ಲ ಹಾಗಾಗಿ ಈ ಸತ್ಯಾಗ್ರವನ್ನು ಮುನ್ನಡೆಸಿಕೊಂಡು ಹೋಗಲು ಚರ್ಚಿಸುವುದು ಮುಖ್ಯವಾಗಿದೆ ಎಂದು ಅವರು ತಿಳಿಸಿದರು.ಇತ್ತೀಚೆಗೆ ಸರ್ಕಾರವು ಬದನವಾಳು ನಂಜನಗೂಡು ಖಾದಿ ಕೇಂದ್ರದ ಅಭಿವೃದ್ಧಿಗೆ 40ಕೋಟಿ ಸರ್ಕಾರ ಮಂಜೂರು ಮಾಡಿದೆ. ಸರ್ಕಾರ ಕೇವಲ ಕಟ್ಟಡ ಕಟ್ಟುವುದನ್ನು ಬೆಳವಣಿಗೆ ಎಂದು ತಿಳಿದಿದೆ.

ಬದನವಾಳು ಖಾದಿ ಕೇಂದ್ರವನ್ನು ಕೇಂದ್ರವಾಗಿಟ್ಟುಕೊಂಡು ಖಾದಿಯ ಬಟ್ಟೆಗಳ ಮಾರಾಟದ ಮೂಲಕ ಮತ್ತೆ ಗ್ರಾಮೀಣ ಮಹಿಳೆಯರಿಗೆ ಅವರ ಊರಿನಲ್ಲೇ ಗ್ರಾಮೀಣ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಸಾಧ್ಯವಿದೆ. ಬದನವಾಳಿಗೆ ಗಾಂಧೀಜಿ ಭೇಟಿ ಕೊಟ್ಟ ಕಾರಣಕ್ಕೆ ಈ ಖಾದಿ ಕೇಂದ್ರಕ್ಕೆ ಅತಿ ಹೆಚ್ಚು ಮಹತ್ವ ಬಂದಿದೆ. ಗ್ರಾಮ ಬದುಕಿನ ಮಹತ್ವ ಸಾರುವ ಸುಸ್ಥಿರ ಬದುಕಿನ ಕನಸನ್ನು ನನಸು ಮಾಡಬೇಕಿದೆ.

ಈ ಸಂಬಂಧ ನಡೆದ ಸಭೆಯಲ್ಲಿ ಬದನವಾಳು ಸತ್ಯಾಗ್ರವನ್ನು ಗ್ರಾಮ ಸತ್ಯಾಗ್ರಹ ಎಂದು ಮರುನಾಮಕರಣ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ನಿರ್ಣಯದ ಕುರಿತು ದೀರ್ಘವಾಗಿ ಸಭೆಯಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕರಡು ನಿರ್ಣಯ:
2015ರ ಚಾರಿತ್ರಿಕ ಬದನವಾಳು ಸತ್ಯಾಗ್ರಹದ ನಿರ್ಣಯಗಳು ಜಾರಿಗೊಳ್ಳದೆ ಉಳಿದಿದೆ. ಸುಸ್ಥಿರ ಬದುಕು ಹಾಗೂ ಸುಸ್ಥಿರ ಆರ್ಥಿಕತೆಗಳು ಕೇವಲ ಮರೀಚಿಕೆಯಾಗಿವೆ. ನಗರಗಳು ಹಾಗೂ ಯಂತ್ರನಾಗರೀಕತೆ ರಾಕ್ಷಸಾಕಾರವಾಗಿ ಬೆಳೆದು ಮನುಕುಲವನ್ನೇ ವಿನಾಶದ ಅಂಚಿಗೆ ತಳ್ಳಿದೆ.

WhatsApp

Join Now

Telegram

Join Now

Instagram

Join Now