ವಿಜಯ ದರ್ಪಣ ನ್ಯೂಸ್……
ಬೆಟ್ಟಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಗಳ ಗ್ರಾಮಸ್ಥರಿಂದ ದೇವನಹಳ್ಳಿ ಪುರಸಭೆಗೆ ಸೇರಿಸದಂತೆ ಮನವಿ

ದೇವನಹಳ್ಳಿ: ತಾಲೂಕಿನಲ್ಲಿ ಭೂಮಿಯ ಬೆಲೆ ಗಗನಕ್ಕೇರಿದ ಹಿನ್ನೆಲೆ ಭೂಮಾಫಿಯಾ ಮಾಡಲು 2023 ರಲ್ಲಿ ಸಚಿವರು ಆದೇಶ ಮಾಡಿರುವುದನ್ನು ಇಟ್ಟುಕೊಂಡು ಪ್ರಸ್ತುತ ತಡಿ ಭೂಮಿಯನ್ನು ಲಪಾಟಯಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಅಂಬೇಡ್ಕರ್ ಸೇನೆಯ ತಾಲ್ಲೂಕು ಅಧ್ಯಕ್ಷ ರಾಯಸಂದ್ರ ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿಗಳಿಗೆ ರಾಯಸಂದ್ರ, ಬೆಟ್ಟಕೋಟೆ, ಬಾಲದಿಮ್ಮನಹಳ್ಳಿ ಗ್ರಾಮಗಳನ್ನು ನಗರಸಭೆಗೆ ಸೇರ್ಪಡೆ ಮಾಡಬಾರದು ಎಂದು ಮನವಿ ಪತ್ರ ಸಲ್ಲಿಸಿ ಮಾತನಾಡಿ ಪುರಸಭೆಯಲ್ಲಾಗಲಿ ಗ್ರಾಮ ಪಂಚಾಯತಿ ಗಳಲ್ಲಾಗಲಿ ಚುನಾಯಿತ ಪ್ರತಿನಿಧಿಗಳಿಲ್ಲದ ಸಮಯದಲ್ಲಿ ಆದೇಶ ಸಾಕಾರಗೊಳಿಸುತ್ತಿರುವುದು ಸಮಂಜಸವಲ್ಲ ಎಂದರು.
ಹಿರಿಯ ವಕೀಲರು ಸಿದ್ದಾರ್ಥ ಮಾತನಾಡಿ ಗ್ರಾಮಸ್ಥರಿಗೆ ಅಂಬೇಡ್ಕರ್ ಸೇನೆಯಿಂದ ಸಾಥ್ ನೀಡಿ ಯಾವುದೇ ಕಾರಣಕ್ಕೂ ನಮ್ಮಗ್ರಾಮವನ್ನು ನಗರ ಸಭೆಗೆ ಸೇರಿಸಲು ಒಪ್ಪುವುದಿಲ್ಲಾ.ಸಂವಿಧಾನಾತ್ಮಕವಾಗಿ ಕಲಸ ಮಾಡದೇ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿರುವುದು ಖಂಡನೀಯ, ಗ್ರಾಮ ಪಂಚಾಯತಿ ಯಲ್ಲಿ ಕ್ರೂಡೀಕರಣದ ರೆವಿನ್ಯೂ ಹಣದಲ್ಲಿ ಗ್ರಾಮಗಳ ಅಭಿವೃದ್ಧಿ ಕಾಣಿತ್ತಿದೆ ಅದನ್ನು ತಪ್ಪಿಸಬಾರದು ಯಾವುದೇ ಆದೇಶವನ್ನು 3 ವರ್ಷಗಳ ಕಾಲ ಮರೆಮಾಚಿ ಚುನಾಯಿತ ಪ್ರತಿನಿಧಿಗಳಿಲ್ಲದಾಗ ಮಾಡುತ್ತಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ ಎಂದರು
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗಿಯಾಗಿದ್ದರು










