ವಿಜಯ ದರ್ಪಣ ನ್ಯೂಸ್….
ಹಸಿರು ಕಾರ್ಯಕ್ರಮ.. ಹಸಿರ ದಿನ ಆಚರಣೆ

ಸಕಲೇಶಪುರ : ಇಂದು ಪರಿಸರ ಪ್ರೇಮಿ ಇತಿಹಾಸ್ ಜಿ ಎಸ್ ಜೊತೆಯಲ್ಲಿ ಗಿಡ ನೆಟ್ಟು 20 ವರ್ಷ ಸಂಭ್ರಮ ಆಚರಿಸಿದ ಭಾರತೀಯ ರೈಲ್ವೆ ತಂಡ 79 th ತಿರುಚಿ ಟ್ರೇನಿಂಗ ಬ್ಯಾಚ್ ಹಸಿರ ಮಡಿಲಲ್ಲಿ ಗಿಡ ನೆಟ್ಟು ಸಂಭ್ರಮಿಸಿದರು.
ಪರಿಸರ ರತ್ನ ಪ್ರಶಸ್ತಿ ಇತಿಹಾಸ್ ಮುಡುಗಿ…
ಪರಿಸರ ರಕ್ಷಿತೋ ರಕ್ಷಿತಃ ಎಂಬ ನಾನುಡಿಯಂತೆ ಪರಿಸರ ಉಳಿಸಿದವರನ್ನು ಪ್ರಕೃತಿ ಉಳಿಸುತ್ತದೆ ಎಂಬುದು ಅಕ್ಷರಶಃ ನಿಜವಾಗಿದ್ದು. ತಾವು ಇಂತಹ ಮಹನ್ ಕಾರ್ಯದಲ್ಲಿ ಭಾಗಿಯಾಗಿ. ಹಸಿರಿನ ಉಳಿವಿಗಾಗಿ, ಹಸಿರು ಕಾಳಜಿ ವಹಿಸಿ, ಸಂಸ್ಥೆ ನಡೆಸುವ ಎಲ್ಲಾ ಹಸಿರು ಕಾರ್ಯಗಳಿಗೆ ಸದಾ ಬೆಂಬಲ ನೀಡುತ್ತ, ಹಸಿರು ಉಳಿವಿಗೆ, ಪರಿಸರ ಸ್ನೇಹಿತನಾಗಿ ಬದುಕು ಕಟ್ಟಿಕೊಂಡ ಸಕಲೇಶಪುರದ ಇತಿಹಾಸ್ ಅವರಿಗೆ ರಾಜ್ಯ ಮಟ್ಟದ ” ಪರಿಸರ ರತ್ನ ಪ್ರಶಸ್ತಿ” ನೀಡಿ ಗೌರವಿಸಲು ನಮ್ಮ ಸಂಸ್ಥೆ ಹರ್ಷಿಸುತ್ತದೆ ಎಂದು ಪರಿಸರ ಸಾಹಿತಿ, ಪರಿಸರ ಹೋರಾಟಗಾರರು, ಮುಖ್ಯಸ್ಥರು, ವೃಕ್ಷ ಬಚಾವೋ ಆಂದೋಲನ ಸಮಿತಿ ಹಾಗೂ ಮಿಡಿತ ಫೌಂಡೇಶನ್ ಸಂಸ್ಥಾಪಕ ಪರಿಸರ ಮಂಜುನಾಥ ಅವರು ತಿಳಿಸಿದ್ದಾರೆ.
##############₹#₹₹₹₹#######₹₹
ಕೃಷಿ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಜುಲೈ 21,:
2026-27 ನೇ ಸಾಲಿಗೆ ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿ ಕಾರ್ಯಕ್ರಮದಡಿ ಬೆಳೆ ಸ್ಪರ್ಧೆಗೆ ಆಸಕ್ತ ಪುರುಷ, ರೈತ ಮಹಿಳೆಯರಿಂದ ಪ್ರತ್ಯೇಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕೆ – ಕಿಸಾನ್ ಪೋರ್ಟಲ್ ರಡಿ ಆರ್ ಎಸ್ ಕೆ ಲಾಗಿನ್ ಅಥವಾ ಸಿಟಿಜನ್ ಲಾಗಿನ್ ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ, ನಾಗರಿಕ ಸೇವಾ ಕೇಂದ್ರದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಫ್ರೂಟ್ಸ್ ಐಡೆಂಟಿಫಿಕೇಶನ್ ಅನ್ನು ಬಳಸಿಕೊಂಡು ಆನ್ಲೈನ್ ಮೂಲಕ ಆಗಸ್ಟ್ 31 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು.
ಪ್ರಸಕ್ತ ಸಾಲಿನ ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿ ಯೋಜನೆಯಡಿ ಆಸಕ್ತ ಪುರುಷ ರೈತರು ಹಾಗೂ ರೈತ ಮಹಿಳೆಯರಿಗೆ ಪ್ರತ್ಯೇಕ ಕೃಷಿ ಪ್ರಶಸ್ತಿ ನೀಡಲು
ಕೇಂದ್ರ/ಪ್ರಸಕ್ತ ಸಾಲಿನಲ್ಲಿ ರೈತರನ್ನು ಕೃಷಿಯತ್ತ ಆಕರ್ಷಿಸಲು ಹಾಗೂ ಪ್ರೋತ್ಸಾಹಿಸುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳು ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಲು ಬೆಂಗಳೂರು ಗ್ರಾಮಾಂತರ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವಾಸೋದ್ಯಮ/ಅತಿಥ್ಯ ಕ್ಷೇತ್ರದಲ್ಲಿ ತರಬೇತಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ. ಜುಲೈ16:
ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ/ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ Food Craft Institute (FCI) ಹಾಗೂ Institute of Hotel Management (IHM) ಬೆಂಗಳೂರು ರವರ ಮೂಲಕ ವಸತಿ ಸಹಿತ ತರಬೇತಿಯನ್ನು ನೀಡಲಾಗುತ್ತದೆ.
ಆಸಕ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿಗಳನ್ನು ಆಗಸ್ಟ್ 10 ರೊಳಗೆ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ನಂ.09, ನೆಲಮಹಡಿ, ಜಿಲ್ಲಾಡಳಿತ ಭವನ, ಬೀರಸಚಿದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ಕಛೇರಿ ಸಮಯದಲ್ಲಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.080-22040633 ಗೆ ಕಛೇರಿಯ ಸಮಯದಲ್ಲಿ ಸಂಪರ್ಕಿಸಲು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










