ವಿಜಯ ದರ್ಪಣ ನ್ಯೂಸ್…..
ಮಲ್ಲೆಪುರ ಗ್ರಾಮದ ಬಡಜನರ ಜಮೀನು ನುಂಗಲು ಸಂಚು :ಬಲಾಡ್ಯರಿಂದ ಅಕ್ರಮ ದಾಖಲೆ ಸೃಷ್ಟಿ ಅಧಿಕಾರಿಗಳ ಶಾಮೀಲು

ದೇವನಹಳ್ಳಿ: ಮಲ್ಲೇಪುರ ಗ್ರಾಮಸ್ಥರಿಂದ ಜಮೀನಿಗಾಗಿ ಹೋರಾಟ ಮಲ್ಲೇಪುರ ಗ್ರಾಮದ ಜಮೀನಿನ ಮೇಲೆ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಬಲಾಡ್ಯ ಭೂಗಳ್ಳರ ಹೆಸರಿಗೆ ಮಾಡಲು ಹೊರಟಿರುವ ಅಧಿಕಾರಿಗಳು, ಸೂಕ್ತ ಕ್ರಮ ವಹಿಸಲು ತಹಸೀಲ್ದಾರ್ಗೆ ಮನವಿ ನೀಡಿದ್ದೇವೆ ಎಂದು ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ಎಂ.ಡಿ. ರಾಮಾಂಜಿನಪ್ಪ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ಮಲ್ಲೇಪುರ ಗ್ರಾಮಸ್ಥರ ಹೋರಾಟದ ನೇತೃತ್ವ ವಹಿಸಿ ಮಾತನಾಡಿ ಮಲ್ಲೇಪುರ ಗ್ರಾಮದ ಸರ್ವೆ ನಂಬರ್ 50 ರ ಗೋಮಾಳ 16 ಎಕರೆ 34 ಗುಂಟೆ ಜಮೀನಿಗೆ ಬಲಾಡ್ಯ ರಾಜಕಾರಣಿಗಳ ಕುಮ್ಮಕ್ಕಿನಿಂದ ಆಕ್ರಮ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಲ್ಲಿನ ಮೂಲ ನಿವಾಸಿಗಳು ಬದುಕು ಕಟ್ಟಿಕೊಂಡಿದ್ದ ಪ್ರದೇಶದಲ್ಲಿ ಅನೇಕ ಕುಟುಂಬದವರು 94ಸಿಸಿ, 60, 53 ಅರ್ಜಿಗಳನ್ನು ನೀಡಲಾಗಿದ್ದರು ಬಡಜನರಿಗೆ ಅವುಗಳ ಹಕ್ಕನ ಹಕ್ಕನ್ನು ನೀಡದೆ ಬಲಾಡ್ಯರ ಪರವಾಗಿ ಕೆಲಸ ಮಾಡುತ್ತಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ದೇವನಹಳ್ಳಿ ತಾಲೂಕಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾಗಿದ್ದರಿಂದ ಜಮೀನಿನ ಬೆಲೆ ಹೆಚ್ಚಿದ್ದು ಕೈಗಾರಿಕಾ ಪ್ರದೇಶವಾಗಿ ರೂಪಿತವಾಗಿರುವುದರಿಂದ ಕೆಲವು ರಾಜಕಾರಣಿಗಳ ಕುಮ್ಮಕ್ಕಿನಿಂದ ಅಧಿಕಾರಿಗಳೊಂದಿಗೆ ಶಾಮಿಲ್ ಆಗಿ ಕೆಲವು ವ್ಯಕ್ತಿಗಳ ಹೆಸರಿಗೆ ಪೋಡಿ ಮಾಡಲು ಹೊರಟಿರುವುದು ಖಂಡನಾರ್ಹ ಕೂಡಲೆ ತಹಸೀಲ್ದಾರವರು, ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಬಡ ಜನರಿಗೆ ನ್ಯಾಯ ಒದಗಿಸಬೇಕು ಎಂದರು.
ಅಂಬೇಡ್ಕರ್ ಸೇವಾ ಸಮಿತಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ ಸ್ವಾತಂತ್ರ ಬಂದು ಸುಮಾರು ವರ್ಷಗಳೇ ಕಳೆದರೂ ಮಲ್ಲೇಪುರ ಗ್ರಾಮದ ಬಡಜನರಿಗೆ ಸ್ವತಂತ್ರವಾಗಿ ಬದುಕಲು ಕೆಲವು ಬಲಾಡ್ಯರಾಜಕಾರಣಿಗಳು ಅಡ್ಡಗಾಲು ಹಾಕುತ್ತಿರುವುದು ಯಾವ ನ್ಯಾಯ ಅನೇಕ ವರ್ಷಗಳಿಂದಂಲೂ ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿರುವ ಭೂ ಸ್ವಾಧೀನಾಭವದಲ್ಲಿರುವ ಬಡ ಜನರು ವಾಸಿಸುತ್ತಿರುವ ಜಮೀನನ್ನು ಅಕ್ರಮ ದಾಖಲೆ ಮಾಡಿ ಭೂಗಳ್ಳರ ಹೆಸರಿಗೆ ಮಾಡಿಕೊಟ್ಟಿದ್ದು ಅದನ್ನು ಮಾರಾಟ ಮಾಡಲು ಸಹ ಭೂಗಳ್ಳರು ಮುಂದಾಗಿದ್ದು ಬಡವರಿಗೆ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ, ಅನೇಕ ಬಾರಿ ಬಡಜನರು ಮನವಿ ನೀಡಿದರೂ ಅಧಿಕಾರಿಗಳು ಮನವಿಯನ್ನು ಪುರಸ್ಕರಿಸುತ್ತಿಲ್ಲ ಇದನ್ನು ಕಂಡ ಅನೇಕ ಸಂಘಟನೆಗಳು. ಬಿಎಸ್ಪಿ ಮುಖಂಡರುಗಳು ಅಧಿಕಾರಿಗಳ ಗಮನಕ್ಕೆ ತಂದರೂ ಗಮನ ಹರಿಸದ ಅಧಿಕಾರಿಗಳು ಬಲಾಡ್ಯರ ಹೆಸರಿಗೆ ಪೋಡಿ ದುರಸ್ಥಿ ಮಾಡುತ್ತಿರುವುದು ಸರಿಯಲ್ಲ ಕೂಡಲೇ ಕಂದಾಯ ಸಚಿವರು ಇತ ಗಮನಹರಿಸಬೇಕು ಮುಂದಿನ ದಿನಗಳಲ್ಲಿ ನಮ್ಮ ಭೂಮಿ ನಮ್ಮ ಹಕ್ಕು? ಎಂದು ಗ್ರಾಮಸ್ಥರ ಸಮ್ಮುಖದಲ್ಲಿ ಡಿ.ಸಿ. ಕಛೇರಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ಎಂ.ಡಿ ರಾಮಾಂಜಿನಪ್ಪ, ಮಲ್ಲೇಪುರ ಗ್ರಾಮದ ಮುಖಂಡರುಗಳಾದ ಮುನಿಶಾಮಪ್ಪ ನರಸಿಂಹಮೂರ್ತಿ, ಮುನಿರಾಜು, ವಕೀಲರಾದ ಶ್ರೀನಿವಾಸ್. ಎಂ.ಎಸ್. ಶ್ರೀನಿವಾಸ್, ರಮೇಶ್, ಪೂಜಪ್ಪ, ಮುನಿಯಪ್ಪ, ವೆಂಕಟೇಶ್, ವೆಂಕಟರಾಯಪ್ಪ, ಮುನಿಆಂಜಿನಪ್ಪ, ಆಧಿನಾರಾಯಣಸ್ವಾಮಿ, ಮುನಿಚಿನ್ನಪ್ಪ, ಕೃಷ್ಣಪ್ಪ, ಕದಿರಪ್ಪ, ಸೇರಿದಂತೆ ನಿವೇಶನಗಳ ವಾರಸುದಾರರು ಮಲ್ಲೇಪುರ ಗ್ರಾಮಸ್ಥರು ಭಾಗಿಯಾಗಿದ್ದರು.










