ವಿಜಯ ದರ್ಪಣ ನ್ಯೂಸ್….
ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯ ನಡೆದ ಕರಗ ಮಹೋತ್ಸವ

ಬೇತಮಂಗಲ: ಕರಗದ ತವರೂರು ಎಂದೇ ಪ್ರಸಿದ್ದಿಯಾಗಿರುವ ಬೇತಮಂಗಲದಲ್ಲಿ ನಿರೀಕ್ಷೆಗೂ ಮೀರಿ ಲಕ್ಷಾಂತರ ಮಂದಿ ಭಕ್ತಾದಿಗಳು ಕರಗ ಮಹೋತ್ಸವದಲ್ಲಿ ಪಾಲ್ಗೊಂಡು ಕರಗದಮ್ಮನ ನೃತ್ಯ ಪ್ರದರ್ಶನ ಕಣ್ಣುಂಬಿಕೊಂಡರು.
ಪಟ್ಟಣದ ಶ್ರೀ ವಿಜಯೇಂದ್ರ ಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಕಡೆಯ ದಿನವಾದ ಶ್ರೀ ರಾಮ ನವಮಿ ಹಬ್ಬ ದಿನದಂದು 116 ನೇ ವರ್ಷದ ದೌಪತಾಂಭ ಸಮೇತ ಧರ್ಮರಾಯ ಸ್ವಾಮಿ ಕರಗ ಮಹೋತ್ಸವವು ರಾಜ್ಯ ಹಾಗೂ ನೆರೆಯ ಆಂಧ್ರ, ತಮಿಳುನಾಡಿನ ಭಕ್ತಾದಿಗಳ ನಡುವೆ ವಿಜೃಂಭಣೆಯಿಂದ ನಡೆಯಿತು.
ರಾತ್ರಿ ಸುಮಾರು 10.50ಕ್ಕೆ ಕರಗ ಪೂಜಾರಿ ಕೃಷ್ಣಮೂರ್ತಿ ಅವರು ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕರಗ ಹೋರುತ್ತಿದ್ದಂತೆ ಗೋವಿಂದ, ಗೋವಿಂದಾ ಎಂಬ ನಾಮ ಸ್ಮರಣೆಯಲ್ಲಿ ತಮಟೆ ವಾದ್ಯಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ನೆರೆದಿದ್ದ ಭಕ್ತರ ಆಕರ್ಷಿಸಿತು.
ಧರ್ಮರಾಯ ಸ್ವಾಮಿ ದೇವಾಲಯದ ಆವರಣ ಮತ್ತು ವೇದಿಕೆಗಳ ಮೇಲೆ ನೃತ್ಯ ಪ್ರದರ್ಶನ ಮಾಡಿದರು ಅನೇಕರು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು
ನಂತರ ವಿಜಯೇಂದ್ರ ಸ್ವಾಮಿ, ಅಯ್ಯಪ್ಪಸ್ವಾಮಿ, ದೇವಾಲಯದ ಒಳಕ್ಕೆ ಪ್ರವೇಶಿಸಿ ಭಕ್ತರನ್ನು ರಂಜಿಸಿದರು ನಂತರ ಸುಬ್ರಹ್ಮಣ್ಯ ಸ್ವಾಮಿ, ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ಗ್ರಾಮದ ಪ್ರಮುಖ ದೇಗುಲ ಮತ್ತು ಬೀದಿಗಳಲ್ಲಿ ಮೆರವಣಿಗೆ ಮೂಲಕ ನೃತ್ಯ ಪ್ರದರ್ಶನ ನೀಡಿದರು.
ಪ್ರಮುಖವಾಗಿ ಬೇತಮಂಗಲ ಬಸ್ ನಿಲ್ದಾಣದ ವೇದಿಕೆಗೆ ಆಗಮಿಸುವ ವೇಳೆಗೆ 4.30 ಗಂಟೆಯಾಗಿತ್ತು 1 ಘಂಟೆಗೂ ಹೆಚ್ಚಿನ ಸಮಯ ಈ ಸ್ಥಳದಲ್ಲಿ ವಿವಿಧ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಭಂಗಿಗಳಲ್ಲಿ ನೃತ್ಯ ಮಾಡಿ ಭಕ್ತರ ಮನಮುಟ್ಟುವಂತೆ ರಂಜಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಜೆ 8 ಘಂಟೆಗೆ ಪುನಃ ದೇವಾಲಯ ತಲುಪಲಿದೆ
ದೇವಾಲಯದಲ್ಲಿ ವಿಶೇಷ ಪೂಜೆ: ಶಿಕ್ಷಕರ ಬಳಗದಿಂದ ರಾತ್ರಿ ಪುಷ್ಪ ಪಲ್ಲಕ್ಕಿ ಮೆರವಣಿಗೆ ನಡೆಯಿತು ಶ್ರೀರಾಮ ನವಮಿಯಂದೇ ಪ್ರತಿ ವರ್ಷವೂ ಪುಷ್ಪ ಪಲ್ಲಕ್ಕಿ, ಕರಗ ಮಹೋತ್ಸವ ನಡೆಯವ ಪದ್ಧತಿ ಇದೆ ಆದ್ದರಿಂದ ಬೆಳಗ್ಗೆಯಿಂದಲೂ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ವಿಜಯೇಂದ್ರ ಸ್ವಾಮಿಯ ಉತ್ಸವಗಳು ನಡೆಯುವ ರಾಜ ಬೀದಿಯಲ್ಲಿ ಅನೇಕ ಭಕ್ತಾರು ವಿವಿಧ ಕಡೆ ಪಾನಕ, ಮಜ್ಜಿಗೆ ಅನ್ನದಾನ ಸೇರಿದಂತೆ ತಂಪು ಪಾನೀಯಗಳನ್ನು ವಿತರಿಸಲಾಯಿತು.
ಜಾತ್ರೆಗೆ ಆಗಮಿಸಿದ್ದ ಲಕ್ಷಾಂತರ ಮಂದಿ ವಿಶೇಷವಾಗಿ ನೆರೆಯ ರಾಜ್ಯಗಳಿಂದ ಬಂದಿದ್ದ ಭಕ್ತರಿಗೆ ಗ್ಯಾಸ್ ಸಮಸ್ಯೆಯಿಂದ ಹೋಟೆಲ್ ಗಳಿಲ್ಲದೆ ಮುಚ್ಚಿದ್ದು, ಪರಿತಪಿಸುತ್ತಿದ್ದ ಭಕ್ತಾದಿಗಳಿಗೆ ನೆರವಾಯಿತು.
ಶಿಕ್ಷಕರ ಬಳಗದ ಪುಷ್ಪ ಪಲ್ಲಕ್ಕಿ ಜೊತೆಗೆ ಬೇತಮಂಗಲ ಗ್ರಾಮ ದೇವತೆಗಳ 11ಕ್ಕೂ ಅಧಿಕ ಪಲ್ಲಕ್ಕಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ನಾಲ್ಕು ಕಡೆ ಆರ್ಕೆಸ್ಟ್ರಾ ಕಾರ್ಯಕ್ರಮ: ಪುಷ್ಪ ಪಲ್ಲಕ್ಕಿ,ಕರಗ ಮಹೋತ್ಸವದ ಅಂಗವಾಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ಶಾಸಕಿ ಎಂ ರೂಪಕಲಾ,ಮಾಜಿ ಶಾಸಕ ವೈ ಸಂಪಂಗಿ, ಸಮಾಜ ಸೇವಕ ವಿ ಮೋಹನ್ ಕೃಷ್ಣ, ರಾಜಪ್ಪ ವೈವಿಧ್ಯಮಯ ಆರ್ಕೆಸ್ಟ್ರಾ ಕಾರ್ಯಕ್ರಮಗಳು ಆಯೋಜಿಸಿದ್ದರು.






