--Ads--

ಏಪ್ರಿಲ್ 2ರಂದು ಸಿದ್ದಗಂಗಾ ಶ್ರೀಗಳ ಜನ್ಮದಿನಾಚರಣೆ ದಾಸೋಹ ಹುಣ್ಣುಮೆ ಆಚರಣೆ

On: March 31, 2026 5:20 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಏಪ್ರಿಲ್ 2ರಂದು ಸಿದ್ದಗಂಗಾ ಶ್ರೀಗಳ ಜನ್ಮದಿನಾಚರಣೆ
ದಾಸೋಹ ಹುಣ್ಣುಮೆ ಆಚರಣೆ

ಮಂಡ್ಯ : ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಪರಮಪೂಜ್ಯ ಸಿದ್ದಗಂಗಾ ಶ್ರೀಗಳ ಉದ್ಯಾನವನದಲ್ಲಿ ಏ.2ರಂದು ಕರ್ನಾಟಕ ರತ್ನ, ತ್ರಿವಿಧ ದಾಸೋಹಿ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರಮಹಾಸ್ವಾಮೀಜಿಯವರ 119ನೇ ಜನ್ಮದಿನಾಚರಣೆ ಹಾಗೂ ದಾಸೋಹ ಹುಣ್ಣಿಮೆ ಕಾರ್ಯಕ್ರಮ ನಡೆಯಲಿದೆ.

ಕಾಯಕಯೋಗಿ ಫೌಂಡೇಶನ್ ಹಾಗೂ ಸಿದ್ದಗಂಗಾ ಶ್ರೀ ಸೇವಾ ಸಮಿತಿ ವತಿಯಿಂದ ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ನಗರಸಭೆ ಮಾಜಿ ಸದಸ್ಯೆ ಕೆ.ವಿದ್ಯಾಮಂಜುನಾಥ್ ಉದ್ಘಾಟಿಸಲಿದ್ದಾರೆ.

ಸಮಾಜಸೇವಕ ಡಾ.ಮಲ್ಲಿಕಾರ್ಜುನಯ್ಯ ದಾಸೋಹಕ್ಕೆ ಚಾಲನೆ ನೀಡಲಿದ್ದು ಸುಪ್ರಸಿದ್ಧ ಗಾಯಕ ಬಿಡದಿ ರೇಣುಕಪ್ಪ ಅವರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಮುಖ್ಯ ಅತಿಥಿಗಳಾಗಿ ಜೆಎಲ್ಎಂ ಕಾರ್ಯಾಧ್ಯಕ್ಷ ಎಂ.ಎಸ್.ಮಂಜುನಾಥ್, ಮುಖಂಡರಾದ ವಿ.ಎಂ.ಮಹೇಂದ್ರ, ಎಲ್.ಸಂದೇಶ್, ಎಚ್.ಅರ್.ಕನ್ನಿಕಾ, ಬಿ.ಎಸ್.ಅನುಪಮಾ ಪಾಲ್ಗೊಳ್ಳಲಿದ್ದಾರೆ.

54ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಯತ್ತಿರುವ ಶರಣ ದಂಪತಿಗಳಾದ ಹೆಚ್.ಸಿ.ನಂಜಮ್ಮಣ್ಣಿ ಡಾ.ಮಲ್ಲಿಕಾರ್ಜುನಯ್ಯ ದಂಪತಿಗಳಿಗೆ ದಾಸೋಹ ಸಿರಿ ಪ್ರಶಸ್ತಿ ನೀಡಿಗೌರವಿಸಲಾಗುತ್ತಿದ್ದು ಸಾರ್ವಜನಿಕರು ಹಾಗೂ ಸ್ವಾಮೀಜಿಯವರ ಭಕ್ತವೃಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕಾಯಕಯೋಗಿ ಫೌಂಡೇಶನ್ ಕೋರಿದೆ.

WhatsApp

Join Now

Telegram

Join Now

Instagram

Join Now