ವಿಜಯ ದರ್ಪಣ ನ್ಯೂಸ್….
ರಾಜ್ಯಮಟ್ಟದ ಜೀವನಾಡಿ ಕನ್ನಡ ಸಾಹಿತ್ಯ ಸ್ಪರ್ಧೆ-2026
ಮಂಡ್ಯ: ಜೀವನಾಡಿ ಕನ್ನಡ ಪತ್ರಿಕೆಯ ಐದನೇ ವಾರ್ಷಿಕೋತ್ಸವ ಅಂಗವಾಗಿ ದಿನಾಂಕ: 13-09-2026ರ ಭಾನುವಾರದಂದು ಬೆಳಗ್ಗೆ 10ಗಂಟೆಗೆ ಮಂಡ್ಯದ ಸ್ಟೇಡಿಯಂ ಪಕ್ಕದಲ್ಲಿರುವ ಗಾಂಧಿ ಭವನದಲ್ಲಿ ಜೀವನಾಡಿ ಕನ್ನಡ ಸಾಹಿತ್ಯ ಸ್ಪರ್ಧೆ-2026ರ ಕಾರ್ಯಕ್ರಮದಲ್ಲಿ ಸಣ್ಣಕಥೆ, ಪ್ರಬಂಧ, ಕವಿತೆ, ಪ್ರಕಾರಗಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಗುವುದು,ಆಸಕ್ತರು ಈ ಕೆಳಕಂಡ ವಿಭಾಗಗಳಿಗೆ ಲೇಖನಗಳನ್ನು ಕಳಿಸಬಹುದೆಂದು ಜೀವನಾಡಿ ಪತ್ರಿಕೆ ಸಂಪಾದಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1. ರಾಜ್ಯಮಟ್ಟದ ಜೀವನಾಡಿ ಕನ್ನಡ ಸಣ್ಣ ಕಥಾ ಸ್ಪರ್ಧೆ- ರೂ.15,000/- ನಗದು ಬಹುಮಾನ
2. ರಾಜ್ಯಮಟ್ಟದ ಜೀವನಾಡಿ ಕನ್ನಡ ಪ್ರಬಂಧ ಸ್ಪರ್ಧೆ- ರೂ.10,000/- ನಗದು ಬಹುಮಾನ
3. ರಾಜ್ಯಮಟ್ಟದ ಜೀವನಾಡಿ ಕನ್ನಡ ಕವನ ಸ್ಪರ್ಧೆ ರೂ. 5,000/- ನಗದು ಬಹುಮಾನ
4. 5ನೇ ವರ್ಷದ ಎಂ.ರವಿಪ್ರಸಾದ್ ಸ್ಮರಣಾರ್ಥ ಹವ್ಯಾಸಿ ರಂಗನಟ/ ನಟಿ ರಾಜ್ಯಮಟ್ಟದ ಪ್ರಶಸ್ತಿ, ರೂ. 10,000/- ನಗದು ಬಹುಮಾನ ಜೊತೆಗೆ ಸನ್ಮಾನ, ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ
ನಿಯಮಗಳು :
1. ಕಥೆ 2500 ಪದಗಳಿಗೆ ಮೀರಿರಬಾರದು.
2. ಪ್ರಬಂಧ 2000 ಪದಗಳಿಗೆ ಮೀರಿರಬಾರದು.
3. ಕವಿತೆ 24 ಸಾಲುಗಳನ್ನು ಮೀರಿರಬಾರದು. (ಇದು ಕಡ್ಡಾಯ)
4. ಈ ತನಕ ಬೇರೆಲ್ಲೂ- ಪತ್ರಿಕೆ, ನಿಯತಕಾಲಿಕೆ, ಬ್ಲಾಗ್, ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೂ ಪ್ರಕಟವಾಗಿರಬಾರದು.
5. ಅನುವಾದಿತ ಕಥೆ / ಪ್ರಬಂಧ/ ಕವಿತೆಗಳಿಗೆ ಅವಕಾಶವಿಲ್ಲ. ಸ್ವತಂತ್ರ ರಚನೆಯಾಗಿರಬೇಕು
6. ಲೇಖನಗಳನ್ನು ನುಡಿ ತತ್ರಾಂಶ ಟೈಪ್ ಮಾಡಿಸಿ ಪತ್ರಿಕೆ ಇ-ಮೇಲ್‌ಗೆ ಕಳುಹಿಸಬೇಕು.
7. ಲೇಖಕರ ಭಾವಚಿತ್ರ, ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ ಮೊದಲಾದವುಗಳನ್ನು ಪ್ರತ್ಯೇಕ ಹಾಳೆಯಲ್ಲಿ ಕಡ್ಡಾಯವಾಗಿ ಬರೆದು ಲಗತ್ತಿಸಿರಬೇಕು.
8. ಲಕೋಟೆಯ ಮೇಲೆ ಜೀವನಾಡಿ ಸಾಹಿತ್ಯ ಸ್ಪರ್ಧೆ – 2026 ಎಂದು ನಮೂದಿಸಿರಬೇಕು.
9. ಬಹುಮಾನಿತ ಕಥೆ, ಪ್ರಬಂಧ ಮತ್ತು ಕವನಗಳನ್ನು ಯಾವಾಗ ಬೇಕಾದರೂ, ಯಾವ ಸ್ವರೂಪದಲ್ಲಾದರೂ ಬಳಸುವ ಹಕ್ಕನ್ನು ಜೀವನಾಡಿ ಪತ್ರಿಕೆ ಕಾಯ್ದಿರಿಸಿಕೊಂಡಿದೆ.
10. ಜೀವನಾಡಿ ಬಳಗದವರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.
11. ಪ್ರವೇಶ ಶುಲ್ಕ ಇರುವುದಿಲ್ಲ. 12. ತೀರ್ಪುಗಾರರ ತೀರ್ಮಾನವೇ ಅಂತಿಮ.
13. ಈ ಸಂಬಂಧ ಪತ್ರ ವ್ಯವಹಾರಗಳಿಗೆ ಅವಕಾಶವಿಲ್ಲ.
14. ಕೊನೆಯ ದಿನಾಂಕ: 15-08-2026, ನಂತರ ಬಂದ ಪ್ರವೇಶಗಳನ್ನು ಕಡ್ಡಾಯವಾಗಿ ಪರಿಗಣಿಸುವುದಿಲ್ಲ.
ವಿ.ಸೂ.: ಪ್ರಶಸ್ತಿ ವಿಜೇತರು ಖುದ್ದಾಗಿ ಹಾಜರಿದ್ದು, ಬಹುಮಾನದ ಹಣ ಪಡೆಯಬೇಕು. ಅವರ ಪರವಾಗಿ ಬರುವವರನ್ನು ಪರಿಗಣಿಸುವುದಿಲ್ಲ.
ಶಾಖಾ ಕಛೇರಿಗಳು :
ಬೆಂಗಳೂರು ಕಛೇರಿ:
ಮುತ್ತುರಾಜ್, ಉಪಸಂಪಾದಕರು, #262, 13 , EISIS ಲೇಔಟ್, ಕೂಡ್ಲು, ಬೆಂಗಳೂರು-68. ಮೊ.9845659517
ಹಾಸನ ಕಛೇರಿ:
ವಿಶ್ವಾಸ್ ಡಿ.ಗೌಡ, ಉಪಸಂಪಾದಕರು, ‘ಗುರುಕೃಪ ನಿಲಯ’ 1ನೇ ಮಹಡಿ, 1ನೇ ಮುಖ್ಯರಸ್ತೆ ವಿಶ್ವೇಶ್ವರಯ್ಯ ಬಡಾವಣೆ, 573201, .9743636831
ಮುಂಬಯಿ ಕಛೇರಿ:
ಗೋಪಾಲ ತ್ರಾಸಿ, ಉಪಸಂಪಾದಕರು, #ಎ-42, ಛೇಡಾ ಕಾಂಪ್ಲೆಕ್ಸ್, ಎಂ.ಜಿ.ರೋಡ್, ಚಾರ್ಕೋಪ್ ಗ್ರಾಮ, ಕಾಂದಿವಲಿ ಪಶ್ಚಿಮ, ಮುಂಬೈ-400067. : 9930262088










