--Ads--

ಜ್ಯುವೆಲ್ಲರಿ ವರ್ತಕರ ಸಂಘದಿಂದ ಶ್ರೀ ರಾಮ ನವಮಿ ಆಚರಣೆ 

On: March 31, 2026 6:10 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಜ್ಯುವೆಲ್ಲರಿ ವರ್ತಕರ ಸಂಘದಿಂದ ಶ್ರೀ ರಾಮ ನವಮಿ ಆಚರಣೆ 

ಮಾಲೂರು: ನಾವೆಲ್ಲರೂ ಅಸೂಯೆ ಮತ್ತು ದ್ವೇಷವನ್ನು ಮರೆತು, ಒಗ್ಗಟ್ಟಿನಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಾ ಬದುಕುವುದೇ ನಿಜವಾದ ರಾಮರಾಜ್ಯ ಇದುವೇ ಶ್ರೀರಾಮನು ನಮಗೆ ತೋರಿಸಿಕೊಟ್ಟ ಮಾರ್ಗ ಎಂದು ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡ ಅವರು ಅಭಿಪ್ರಾಯಪಟ್ಟರು.

ನಗರದ ಕಾರಂಜಿ ಬಡಾವಣೆಯ ಜುವೆಲ್ಲರ್ಸ್ ಮಳಿಗೆಗಳ ಬೀದಿಯಲ್ಲಿ ಜುವೆಲರಿ ವರ್ತಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ರಾಮ ನವಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ವಿಶ್ವದಾದ್ಯಂತ ಇಂದು ಶ್ರೀ ರಾಮ ನವಮಿಯನ್ನು ಅತ್ಯಂತ ಭಕ್ತಿಯಿಂದ ಆಚರಿಸಲಾಗುತ್ತಿದೆ. ವಿಶೇಷವಾಗಿ ಮಾಲೂರು ತಾಲ್ಲೂಕಿನ ಪ್ರತಿ ಹಳ್ಳಿಯಲ್ಲಿ ಮತ್ತು ಪಟ್ಟಣದ ಪ್ರತಿ ಬಡಾವಣೆಗಳಲ್ಲಿ ಶ್ರೀ ರಾಮ ನವಮಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂತಸದ ವಿಷಯ. ನಾವೆಲ್ಲರೂ ‘ವಸುಧೈವ ಕುಟುಂಬಕಂ’ ನಿಮ್ಮಂತೆ ಸಹ ಬಾಳ್ವೆಯ ಜೀವನ ಎನ್ನುವಂತೆ ವಿಶ್ವವೇ ಒಂದು ಕುಟುಂಬ ಎಂಬ ಭಾವನೆಯಿಂದ ಶಾಂತಿ ಮತ್ತು ಸಹಬಾಳ್ವೆಯಿಂದ ಬದುಕಬೇಕು ಎಂದು ಕರೆ ನೀಡಿ ಸರ್ವರಿಗೂ ಶ್ರೀ ರಾಮ ನವಮಿಯ ಶುಭಾಶಯಗಳನ್ನು ಕೋರಿದರು.

ಇನ್ನೂ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಯಾತ್ರಾ ಸ್ಥಳವಾದ ಚಿಕ್ಕ ತಿರುಪತಿಯ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಇದೇ ತಿಂಗಳು  ನಮ್ಮ ಭಾಗದ ಮುಖಂಡರು ಮತ್ತು ಯುವಕ ಮಿತ್ರರು ಹಮ್ಮಿಕೊಂಡಿರುವ ಬೃಹತ್ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದ್ದು. ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ನಟ ಗಿಲ್ಲಿ ನಟ ಸೇರಿದಂತೆ ನಾಡಿನ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ. ಈ ಸಾಂಸ್ಕೃತಿಕ ಸಂಭ್ರಮಕ್ಕೆ ನಾನು ಭಾಗವಹಿಸುತ್ತಿದ್ದು ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಟಿಬಿ ಕೃಷ್ಣಪ್ಪ, ಜುವೆಲ್ಲರ್ಸ್ ವರ್ತಕರ ಸಂಘದ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ, ಪ್ರದೀಪ್ ರೆಡ್ಡಿ, ನಗರ ಬಿಜೆಪಿ ಅಧ್ಯಕ್ಷ ನಂದೀಶ್, ಒಬಿಸಿ ಅಧ್ಯಕ್ಷ ಮಹೇಂದ್ರ, ಬೆಳ್ಳಾವಿ ಸೋಮಣ್ಣ, ಮಾಜಿ ಪುರಸಭೆ ಸದಸ್ಯ ವೆಂಕಟೇಶ್, ವರ್ತಕರಾದ ವಿಶ್ವನಾಥ್, ರಾಕೇಶ್, ಯುವ ಮುಖಂಡ ಸಂಪತ್ ಸೇರಿದಂತೆ ವರ್ತಕರ ಸಂಘದ ಪದಾಧಿಕಾರಿಗಳು, ಮುಖಂಡರು ಸ್ಥಳೀಯ ನಿವಾಸಿಗಳು ಇದ್ದರು.

WhatsApp

Join Now

Telegram

Join Now

Instagram

Join Now