ವಿಜಯ ದರ್ಪಣ ನ್ಯೂಸ್…..
ಭಾರತದಲ್ಲಿ ಅನಿಮೆ ಹವಾ: 3 ಕೋಟಿ ರೂಪಾಯಿ ಬಹುಮಾನದೊಂದಿಗೆ ಗಿನ್ನೆಸ್ ದಾಖಲೆಯ ಗುರಿ ಹೊಂದಿರುವ ‘ದಿ ಜೈಂಟ್ ಹಂಟ್’

ಬೆಂಗಳೂರು, ಏಪ್ರಿಲ್ 1, 2026: ಭಾರತದ ಸೃಜನಶೀಲ ಶಿಕ್ಷಣ ಕ್ಷೇತ್ರದ ಪ್ರವರ್ತಕ ಸಂಸ್ಥೆಯಾದ ಇಮೇಜ್ ಇನ್ಫೋಟೈನ್ಮೆಂಟ್ ಲಿಮಿಟೆಡ್ (ಇಮೇಜ್ ಗ್ರೂಪ್ ಆಫ್ ಕಂಪನೀಸ್), ಇಂದು ‘ದಿ ಜೈಂಟ್ ಹಂಟ್’ ಎಂಬ ವಿಶಿಷ್ಟ ಜಾಗತಿಕ ಅನಿಮೆ ಮತ್ತು ಮಂಗಾ ಕಲಾ ಸ್ಪರ್ಧೆಯನ್ನು ಘೋಷಿಸಿದೆ. ಇದರೊಂದಿಗೆ ‘ವಿಶ್ವದ ಅತಿದೊಡ್ಡ ಅನಿಮೆ ಕಲಾ ಸ್ಪರ್ಧೆ’ಗಾಗಿ ಅಧಿಕೃತ ಗಿನ್ನೆಸ್ ವಿಶ್ವ ದಾಖಲೆಯ ಪ್ರಯತ್ನವನ್ನೂ ಕೈಗೊಂಡಿದೆ.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಉಪಕ್ರಮವನ್ನು ಅನಾವರಣಗೊಳಿಸಲಾಯಿತು. ಭಾರತವು ಜಾಗತಿಕ ಸೃಜನಶೀಲ ಚಳುವಳಿಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ವಿವಿಧ ದೇಶಗಳ ಕಲಾವಿದರು, ವಿದ್ಯಾರ್ಥಿಗಳು ಮತ್ತು ಅನಿಮೆ ಪ್ರಿಯರನ್ನು ಈ ಸ್ಪರ್ಧೆಯು ಒಂದೆಡೆ ಸೇರಿಸಲಿದೆ.
ಜಾಗತಿಕವಾಗಿ ಅನಿಮೆ ಕಲಾ ಸ್ಪರ್ಧೆಯೊಂದಕ್ಕೆ ನೀಡಲಾಗುತ್ತಿರುವ ಅತ್ಯಂತ ದೊಡ್ಡ ಮೊತ್ತವಾದ ₹3 ಕೋಟಿ ಬಹುಮಾನದ ನಿಧಿಯನ್ನು ಈ ಸ್ಪರ್ಧೆಯು ಒಳಗೊಂಡಿದೆ. ‘ದಿ ಜೈಂಟ್ ಹಂಟ್’ ಸ್ಪರ್ಧೆಯು ವ್ಯಾಪ್ತಿ, ಮಾನ್ಯತೆ ಮತ್ತು ಅವಕಾಶಗಳನ್ನು ಮೇಳೈಸಿದ್ದು, ಭಾಗವಹಿಸುವವರಿಗೆ ಅಂತರಾಷ್ಟ್ರೀಯ ಮಟ್ಟದ ಗುರುತು ಮತ್ತು ಉದ್ಯಮದ ಮಾನ್ಯತೆ ಪಡೆಯಲು ಉತ್ತಮ ಅವಕಾಶವನ್ನು ನೀಡುತ್ತದೆ.
ಸೃಜನಶೀಲ ಪ್ರತಿಭೆಗಳಿಗಾಗಿ ಒಂದು ಜಾಗತಿಕ ವೇದಿಕೆ 8 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮುಕ್ತವಾಗಿರುವ ಈ ಸ್ಪರ್ಧೆಯನ್ನು ಮೂರು ವಿಭಾಗಗಳಾಗಿ ವರ್ಗೀಕರಿಸಲಾಗಿದೆ: (8–15 ವರ್ಷಗಳು), (16–24 ವರ್ಷಗಳು) ಮತ್ತು (25 ವರ್ಷ ಮೇಲ್ಪಟ್ಟವರು). ಈ ಸ್ಪರ್ಧೆಯು ಸಂಪೂರ್ಣವಾಗಿ ಆನ್ಲೈನ್ನಲ್ಲಿ ನಡೆಯಲಿದ್ದು, ಕೈಯಿಂದ ಬಿಡಿಸಿದ ಚಿತ್ರಗಳು ಅಥವಾ ಡಿಜಿಟಲ್ ಕಲಾಕೃತಿಗಳನ್ನು ಸ್ವೀಕರಿಸಲಾಗುತ್ತದೆ.
ಇಲ್ಲಿ ಸ್ವಂತಿಕೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಕೃತಕ ಬುದ್ಧಿಮತ್ತೆ ಮೂಲಕ ರಚಿಸಿದ ಅಥವಾ ಎಐ ನೆರವು ಪಡೆದ ಚಿತ್ರಗಳನ್ನು ಅನುಮತಿಸಲಾಗುವುದಿಲ್ಲ. ಇದು ಮಾನವ ಸೃಜನಶೀಲತೆಯನ್ನು ಸಂಭ್ರಮಿಸುವ ಈ ವೇದಿಕೆಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
ಇದರ ಜೊತೆಗೆ, ವಿಶ್ವ ದಾಖಲೆಯ ಪ್ರಯತ್ನ ಯಶಸ್ವಿಯಾದಲ್ಲಿ, ಅರ್ಹ ಭಾಗವಹಿಸುವವರು ಗಿನ್ನೆಸ್ ವಿಶ್ವ ದಾಖಲೆಯ ಭಾಗವಹಿಸುವಿಕೆಯ ಪ್ರಮಾಣಪತ್ರಗಳನ್ನು ಪಡೆಯಲಿದ್ದಾರೆ. ಅಷ್ಟೇ ಅಲ್ಲದೆ, ಭಾರತದಿಂದ ನೋಂದಾಯಿಸಿಕೊಳ್ಳುವ ಮೊದಲ 1,00,000 ಮಂದಿಗೆ ಭಾರತದ ಲೆಗೊ ಪ್ರಮಾಣೀಕೃತ ಸ್ಟೋರ್ಗಳಲ್ಲಿ ಬಳಸಬಹುದಾದ ₹250 ಮೌಲ್ಯದ ಇ-ವೋಚರ್ಗಳನ್ನು ನೀಡಲಾಗುವುದು.
ಈ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಇಮೇಜ್ ಗ್ರೂಪ್ನ ಸಂಸ್ಥಾಪಕ ಮತ್ತು ಸಿಇಒ ಶ್ರೀ ಕೆ. ಕುಮಾರ್ ಅವರು ಹೀಗೆ ಹೇಳಿದರು: “ಪ್ರತಿಭೆಗಳನ್ನು ಸಬಲೀಕರಣಗೊಳಿಸುವ ಮತ್ತು ಅವುಗಳನ್ನು ಜಗತ್ತಿಗೆ ಪರಿಚಯಿಸುವ ವೇದಿಕೆಗಳನ್ನು ನಿರ್ಮಿಸುವುದು ಯಾವಾಗಲೂ ನಮ್ಮ ಆಶಯವಾಗಿದೆ. ಕೃ
ತಕ ಬುದ್ಧಿಮತ್ತೆ ಸೃಜನಶೀಲತೆಯನ್ನು ಮರುರೂಪಿಸುತ್ತಿರುವ ಈ ಕಾಲಘಟ್ಟದಲ್ಲಿ, ಮಾನವ ಕಲ್ಪನಾ ಶಕ್ತಿಯ ಮೌಲ್ಯವನ್ನು ಪುನರುಚ್ಚರಿಸುವುದು ಬಹಳ ಮುಖ್ಯ. ‘ದಿ ಜೈಂಟ್ ಹಂಟ್’ ಕೇವಲ ವಿಜೇತರನ್ನು ಹುಡುಕುವ ಸ್ಪರ್ಧೆಯಲ್ಲ – ಇದು ಮಾನವ ಸೃಜನಶೀಲತೆಗಾಗಿ ವಿಶ್ವದ ಅತಿದೊಡ್ಡ ವೇದಿಕೆಯನ್ನು ನಿರ್ಮಿಸುವ ಪ್ರಯತ್ನವಾಗಿದೆ.
ಇಲ್ಲಿ ಕಲಾವಿದರನ್ನು ಗುರುತಿಸಲಾಗುತ್ತದೆ, ಗೌರವಿಸಲಾಗುತ್ತದೆ ಮತ್ತು ನೆನಪಿಸಿಕೊಳ್ಳಲಾಗುತ್ತದೆ. ಈ ಉಪಕ್ರಮದ ಮೂಲಕ, ಸೃಜನಶೀಲ ಪ್ರತಿಭೆಗಳನ್ನು ಗುರುತಿಸುವ ಮತ್ತು ಸಂಭ್ರಮಿಸುವ ವಿಧಾನವನ್ನು ಮರು ವ್ಯಾಖ್ಯಾನಿಸುವ ಜಾಗತಿಕ ಚಳುವಳಿಯನ್ನು ರೂಪಿಸುವುದು ನಮ್ಮ ಗುರಿಯಾಗಿದೆ.
‘ದಿ ಜೈಂಟ್ ಹಂಟ್’ ಮೂಲಕ ನಾವು ಆ ದೃಷ್ಟಿಕೋನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದೇವೆ – ಇದು ಸೃಜನಾತ್ಮಕ ಕಲಾವಿದರಿಗೆ ಕೇವಲ ಸ್ಪರ್ಧಿಸಲು ಮಾತ್ರವಲ್ಲದೆ, ಇತಿಹಾಸದ ಭಾಗವಾಗಲು ಒಂದು ಸುವರ್ಣ ಅವಕಾಶವಾಗಿದೆ.”
ಹೆಚ್ಚಿನ ಮಾಹಿತಿಗಾಗಿ, www.thegianthunt.com ಗೆ ಭೇಟಿ ನೀಡಿ.











