--Ads--

ಮೆಲ್ಬೋರ್ನ್ ನಲ್ಲಿ  ಸೀಕಲ್ ರಾಮಚಂದ್ರಗೌಡರಿಗೆ “ಮಣ್ಣಿನ ಮಗ” ಪ್ರಶಸ್ತಿ ಪ್ರಧಾನ 

On: April 3, 2026 11:50 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಮೆಲ್ಬೋರ್ನ್ ನಲ್ಲಿ  ಸೀಕಲ್ ರಾಮಚಂದ್ರಗೌಡರಿಗೆ “ಮಣ್ಣಿನ ಮಗ” ಪ್ರಶಸ್ತಿ ಪ್ರಧಾನ 

ಶಿಡ್ಲಘಟ್ಟ : ಆಸ್ಟ್ರೇಲಿಯಾದ ಮೆಲ್ಬೊರ್ನ್‌ ಕನ್ನಡ ಸಂಘ ಮತ್ತು ಒಕ್ಕಲಿಗ ಯುವ ಬ್ರಿಗೇಡ್ ನೀಡುವ ಪ್ರತಿಷ್ಠಿತ “ಮಣ್ಣಿನ ಮಗ” ಪ್ರಶಸ್ತಿಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅವರಿಗೆ ನೀಡಿ ಗೌರವಿಸಲಾಗಿದೆ.

ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ಪುರಸ್ಕರಿಸಿ ಸೀಕಲ್ ರಾಮಚಂದ್ರಗೌಡ ಅವರಿಗೆ ಆಸ್ಟ್ರೇಲಿಯಾದ ಮೆಲ್ಬೊರ್ನ್‌ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ನಾನು ಕೃಷಿ, ನಿರ್ಮಾಣ, ಆರೋಗ್ಯ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ ಕೃಷಿ ಕ್ಷೇತ್ರದಲ್ಲೇ ತೃಪ್ತಿ ಕಂಡಿದ್ದೇನೆ, ಕೃಷಿ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿ ನೀಡಿರುವುದು ಹೆಚ್ಚಿನ ಸಂತಸ ತಂದಿದೆ, ಕೃಷಿಯಲ್ಲಿ ಇನ್ನಷ್ಟು ತೊಡಗಿಸಿಕೊಂಡು ಮತ್ತಷ್ಟು ಸಾಧನೆ ಮಾಡುವ ಹುಮ್ಮಸ್ಸು ಹಾಗು ಜವಾಬ್ದಾರಿ ಹೆಚ್ಚಿದೆ.

— ಸೀಕಲ್ ರಾಮಚಂದ್ರಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗು ‘ಮಣ್ಣಿನ ಮಗ’ ಪ್ರಶಸ್ತಿ ಪುರಸ್ಕೃತರು.

ಕಾರ್ಯಕ್ರಮದಲ್ಲಿ ಶ್ರೀಪ್ರಸನ್ನನಾಥ ಸ್ವಾಮೀಜಿ, ಮೈಸೂರು ಮತ್ತು ಮಡಿಕೇರಿ ಸಂಸದ  ಯದುವೀ‌ರ್ ಒಡೆಯ‌ರ್, ವಿಕ್ಟೋರಿಯಾ ಸರಕಾರದ ಸಚಿವೆ ಕ್ಯಾಸ್ಸೇನ್ದ್ರ ಫೆರ್ನಾಂಡೊ, ಮೆಲ್ಬೋರ್ನ್ ಸಂಸದೆ ಈಡನ್ ಫಾಸ್ಟರ್, ಜೋಹಾನ್ ಮುಲ್ಲಾಹೇಯ್, ಭಾರತೀಯ ರಾಯಭಾರಿ ಅನಿಶ್ ರಂಜನ್, ರವಾಂಡಾ ಹೈಕಮೀಷನರ್ ಮೋಹನ್ ಸುರೇಶ್, ವಿಕ್ಟೋರಿಯಾ ಮೇಯರ್ ಸೋಫಿನಾಥ್, ಶ್ರೀನಿವಾಸ್ ಶರ್ಮ ಭಾಗವಹಿಸಿದ್ದರು.

WhatsApp

Join Now

Telegram

Join Now

Instagram

Join Now