--Ads--

ಕೂರ್ಗಳ್ಳಿಯಲ್ಲಿ  ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ ಟಿ ದೇವೇಗೌಡ ಭೂಮಿ ಪೂಜೆ

On: April 6, 2026 3:42 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಕೂರ್ಗಳ್ಳಿಯಲ್ಲಿ  ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ ಟಿ ದೇವೇಗೌಡ ಭೂಮಿ ಪೂಜೆ

ತಾಂಡವಪುರ ಏಪ್ರಿಲ್ 6 ಸಾರ್ವಜನಿಕರಿಂದ ಮೂಲಸೌಕರ್ಯಗಳನ್ನು ಒದಗಿಸಿ ಕೊಡಬೇಕೆಂದು ಬೇಡಿಕೆ ಇರುವುದರಿಂದ ಮೈಸೂರು ತಾಲ್ಲೂಕು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹೂಟಗಳ್ಳಿ ನಗರಸಭೆ ವ್ಯಾಪ್ತಿಗೆ ಬರುವ ಕೂರ್ಗಳ್ಳಿ ಪ್ರದೇಶದ ವಿವಿಧ ಬೀದಿಗಳ ಅಭಿವೃದ್ಧಿಗೆ ಕಾಯಕಲ್ಪ ಶುರುವಾಗಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಗುದ್ದಲಿಪೂಜೆ ನೆರವೇರಿಸಿದರು.

ಕೆಆರ್‌ಎಸ್ ರಸ್ತೆಯಲ್ಲಿರುವ ಕೂರ್ಗಳ್ಳಿ ಬಳಿ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ೮.೭೦ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕರು, ಹಲವು ದಿನಗಳ ಬೇಡಿಕೆಯಂತೆ ಹೂಟಗಳ್ಳಿ ನಗರಸಭೆಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿಸಲಾಗಿದೆ.ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸೂಚಿಸಿದರು.

ಸ್ಥಳೀಯ ಜನರು ಒಳಚರಂಡಿ, ಕುಡಿಯುವ ನೀರು, ಸಿಸಿ ಚರಂಡಿ, ರಸ್ತೆ,ಬೀದಿದೀಪಗಳ ಹಾಗೂ ಇತರೆ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದರು. ಬಡಾವಣೆಗೆ ಬಂದಾಗ ಅನೇಕ ಸಮಸ್ಯೆಗಳನ್ನು ನೋಡಿದ್ದೆ.ಈಗ ಎಲ್ಲಾ ಬೀದಿಗಳಿಗೂ ಚರಂಡಿ,ಸಿಸಿ ರಸ್ತೆ,ಒಳಚರಂಡಿ ಕಾಮಗಾರಿ ಮಾಡಲಾಗುವುದು ಎಂದರು.

ಹೂಟಗಳ್ಳಿ ನಗರಸಭೆ ವತಿಯಿಂದ ಕೂರ್ಗಳ್ಳಿ ಮುಖ್ಯರಸ್ತೆ, ಕೂರ್ಗಳ್ಳಿ ಅರಳಿಮರದ ವೃತ್ತದಿಂದ ಕೆಐಎಡಿಬಿ ಡಬಲ್ ರಸ್ತೆಯವರೆಗೆ ರಸ್ತೆ ಮತ್ತು ಚರಂಡಿ ನಿರ್ಮಾಣ, ಕೂರ್ಗಳ್ಳಿ ಮುಖ್ಯರಸ್ತೆ ಹಾಲಿನ ಡೈರಿ ಮುಖ್ಯರಸ್ತೆ, ಅಡ್ಡಸ್ತೆಗಳಲ್ಲಿ ರಸ್ತೆ,ಚರಂಡಿ ನಿರ್ಮಾಣ, ಹಳೆ ಅರಣ್ಯ ಭವನ ವೃತ್ತದಿಂದ ಕೂರ್ಗಳ್ಳಿಕೊಪ್ಪಲು ಶ್ರೀರಾಮಮಂದಿರ ವೃತ್ತದವರೆಗೆ ಮುಖ್ಯರಸ್ತೆ, ನಂಜುಂಡೇಗೌಡ ಅವರ ಮನೆಯ ಮುಂಭಾಗ ಹಾಗೂ ಹಿಂಭಾಗದ ಅಡ್ಡರಸ್ತೆಗಳಲ್ಲಿ ರಸ್ತೆ,ಚರಂಡಿ ಹಾಗೂ ಒಳಚರಂಡಿ ನಿರ್ಮಾಣಕಾಮಗಾರಿ, ಕೆಇಬಿ ರಾಮಕೃಷ್ಣ ಮನೆ ಹಾಗೂ ಮಹೇಶ್ ಅವರ ಮನೆ ರಸ್ಯೆಗಳು,ಸೀಮೆಎಣ್ಣೆ ಕೃಷ್ಣಪ್ಪ ಮತ್ತು ಕಿರುಗಾವಲು ಸಿದ್ದೇಗೌಡರ ಮನೆ ರಸ್ತೆ, ಕೂರ್ಗಳ್ಳಿ ಮೇಗಳಕೊಪ್ಪಲು ದೇವೇಗೌಡರ ಮನೆಯಿಂದ ಅಮ್ಮಣ್ಣಿ ಚಿಕ್ಕಣ್ಣ ಮನೆವರೆಗೆ, ರಾಣಿ ಮದ್ರಾಸ್ ಕೃಷ್ಣ ಮನೆಯಿಂದ ವೆಂಕಟೇಶ್ ಮನೆವರೆಗೆ, ಶಿವನಗರ ಮುಖ್ಯರಸ್ತೆ ಅಭಿವೃದ್ಧಿ, ಬೆಳವಾಡಿ ಮುಖ್ಯರಸ್ತೆಯಿಂದ ಆಟೋಲೋಕೇಶ್ ಮನೆವರೆಗೆ, ಮೇಗಳಕೊಪ್ಪಲು ಸೋಮಶೇಖರ್ ಮನೆಯಿಂದ ಚಿಕ್ಕಬೋರಯ್ಯನ ಜಯರಾಮರವರ ಮನೆವರೆಗೆ, ಗಣೇಶ ದೇವಸ್ಥಾನದ ರಸ್ತೆ, ಕೂರ್ಗಳ್ಳಿ ಮೇಗಳಕೊಪ್ಪಲುಸರಸ್ವತಿಪ್ರಾವಿಷನ್ ಸ್ಟೋರ್‌ನಿಂದ ಗಾರ್ಮೆಂಟ್ಸ್ ರಸ್ತೆವರಗೆ ವಿವಿಧ ಕಾಮಗಾರಿಗಳು ನಡೆಯಲಿವೆ.

ಅದೇ ರೀತಿ ಕೂರ್ಗಳ್ಳಿ ಕೆಆರ್‌ಎಸ್ ರಸ್ತೆಯ ಆಟೋಮೋಟಿವ್ ಆಕ್ಸಲ್ ವೃತ್ತದಿಂದ ಡ್ಯಾಮ್‌ಡನ್ ಅಪಾರ್ಟ್‌ಮೆಂಟ್ ಹತ್ತಿರದ ರಿಂಗ್ ರಸ್ತೆಯವರೆಗೆ ಚರಂಡಿ,ರಸ್ತೆ ಅಭಿವೃದ್ದಿ ಕಾಮಗಾರಿ ನಡೆಯಲಿದೆ ಎಂದು ವಿವರಿಸಿದರು.

ನಗರಸಭೆ ಪೌರಾಯುಕ್ತ ಬಿ.ಎನ್.ಚಂದ್ರಶೇಖರ್, ಎಇಇ ಮಧು, ಇಂಜಿನಿಯರ್ ದಿಲೀಪ್, ಜೂನಿಯರ್ ಇಂಜಿನಿಯರ್ ಸದಾಶಿವಪ್ಪ, ಜಿಪಂ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವು,ತಾಪಂ ಮಾಜಿ ಸದಸ್ಯ ಸತೀಶ್,ಮುಖಂಡರಾದ ಪಟೇಲ್ ರಾಮಣ್ಣ, ನಂಜುಂಡೇಗೌಡ, ಚನ್ನೇಗೌಡ, ಬೋರೇಗೌಡ, ಮಹೇಶ್ ಮತ್ತಿತರರು ಹಾಜರಿದ್ದರು.

ಸಾರ್ವಜನಿಕರ ಸಮಸ್ಯೆ ಆಲಿಸಿದ ಜಿಟಿಡಿ ಪಾದಯಾತ್ರೆಯ ಮೂಲಕ ಸಮಸ್ಯೆಗಳ ವೀಕ್ಷಣೆ

ಮೈಸೂರು: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಜಿ.ಟಿ.ದೇವೇಗೌಡರು ಸಾರ್ವಜನಿಕರ ಸಮಸ್ಯೆ ಆಲಿಸಿದರು. ಕುಡಿಯುವ ನೀರು ಸರಬರಾಜು ಆಗುವಲ್ಲಿ ಸರಿಯಾಗಿ ಆಗುತ್ತಿಲ್ಲ. ಬೋರ್‌ವೆಲ್ ನೀರು ಬತ್ತಿ ಹೋಗಿರುವ ಕಾರಣ ಟ್ಯಾಂಕರ್ ನೀರು ಪೂರೈಸಬೇಕು. ವಾರದಲ್ಲಿ ಮೂರು ದಿನಗಳು ನೀರು ಪೂರೈಕೆಯಾಗಯತ್ತಿದ್ದು, ಎರಡು ದಿನಕ್ಕೊಮ್ಮೆ ನೀರು ಬಿಡುವಂತೆ ಮಾಡಬೇಕು ಎಂದು ಕೋರಿದರು. ಮತ್ತೊಬ್ಬರು ಯುಜಿಡಿ ನೀರು ಹರಿಯುತ್ತಿದ್ದು,ಬೇರೆ ಕಡೆ ಮಾರ್ಗಕ್ಕೆ ಸಂಪರ್ಕ ಕೊಡಬೇಕು.ಮುಖ್ಯರಸ್ತೆಯಲ್ಲಿರುವ ಫ್ಯಾಕ್ಟರಿಯಿಂದ ಹೊರ ಬರುವ ಹೊಗೆಯಿಂದ ಉಸಿರಾಟಕ್ಕೆ ತುಂಬಾ ಸಮಸ್ಯೆಯಾಗಿದೆ.

ಜಿಲ್ಲಾಧಿಕಾರಿಗಳು,ಪರಿಸರ ಮಂಡಳಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಹೊಗೆಯಿಂದ ಆಗುವ ಸಮಸ್ಯೆ ತಪ್ಪಿಸಿಲ್ಲ ಎಂದು ಶಾಸಕರ ಮುಂದೆ ಹೇಳಿಕೊಂಡರು.

ಕುಡಿಯುವ ನೀರಿನ ಟ್ಯಾಂಕ್ ದುರಸ್ತಿಗೆ ಸಂಬಂಧಿಸಿದಂತೆ ಕೆಐಎಡಿಬಿ ಅಧಿಕಾರಿಗಳು ಆಕ್ಷೇಪವ್ಯಕ್ತಪಡಿಸಿರುವ ಬಗ್ಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತುಒಳಚರಂಡಿ ಮಂಡಳಿ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.

ನಾವು ಕಾಮಗಾರಿ ಶುರು ಮಾಡಲು ರೆಡಿ ಇದ್ದೇವೆ. ಆದರೆ,ಕೆಐಎಡಿಬಿ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದರು.ತಕ್ಷಣವೇದೂರವಾಣಿ ಮೂಲಕ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ,ಕುಡಿಯುವ ನೀರಿನ ಕಾಮಗಾರಿಗೂ ಈ ರೀತಿ ಆಕ್ಷೇಪವ್ಯಕ್ತಪಡಿಸುವುದು ಸರಿಯಲ್ಲ. ಉಂಡುವಾಡಿ ಯೋಜನೆ ಸಂಪರ್ಕ ಆರಂಭವಾದ ಮೇಲೆ ಕೆಐಎಡಿಬಿ ಟ್ಯಾಂಕ್ ಬಳಸುವುದಿಲ್ಲ. ಅಲ್ಲಿಯತನನಕ ಬಳಸಲು ಅವಕಾಶ ಕೊಡಿ ಎನ್ನುವಂತೆ ಸೂಚಿಸಿದರು.

ಬಳಿಕ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರೊಂದಿಗೆ ಸಮಾಲೋಚಿಸಿ ಕುಡಿಯುವ ನೀರಿನ ವಿಚಾರದಲ್ಲಿ ಆಗುವ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು. ಬಡಾವಣೆಗೆ ಹೆಚ್ಚುವರಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಬೇಕು ಎಂದರು.

ಇದಾದ ಬಳಿಕ ಬೆಳಿಗ್ಗೆ ಮತ್ತು ಸಂಜೆ ನಗರ ಸಾರಿಗೆ ಬಸ್‌ಗಳ ಸಂಚಾರ ಇಲ್ಲದೆ ಮುಖ್ಯರಸ್ತೆಗೆ ನಡೆದುಕೊಂಡು ಹೋಗಬೇಕಾದ ಸನ್ನಿವೇಶ ಇದೆ ಎಂದು ಮಹಿಳೆಯರು ಶಾಸಕರಿಗೆ ಅಲವತ್ತುಕೊಂಡರು.ಕೂಡಲೇ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್ ಜತೆ ಮಾತನಾಡಿ, ಬೆಳಿಗ್ಗೆ ೯.೩೦ರವರೆಗೆ ಹಾಗೂ ಸಂಜೆ ೪.೩೦ರವರೆಗೆ ಹೆಚ್ಚುವರಿಯಾಗಿ ಎರಡು ಬಸ್‌ಗಳ ರೂಟ್ ಕಲ್ಪಿಸಬೇಕು ಎಂದು ಸೂಚಿಸಿದರು.

ಇದಕ್ಕೆ ಒಪ್ಪಿದ ಅಧಿಕಾರಿಗಳು, ಮಂಗಳವಾರದಿಂದಲೇ ಸಂಚಾರ ಮಾಡಲಿದೆ ಎಂದು ಭರವಸೆ ನೀಡಿದರು. ನಂತರ ಪ್ರಮುಖ ಬೀದಿಗಳಲ್ಲಿಪಾದಯಾತ್ರೆ ನಡೆಸಿದ ಶಾಸಕರು ಹಲವಾರು ಸಮಸ್ಯೆಗಳನ್ನು ಆಲಿಸಿದರು. ಮುಂದಿನ ದಿನಗಳಲ್ಲಿ ಪ್ರತಿಯೊಂದು ಕಾಮಗಾರಿ ಶುರು ಮಾಡಲಾಗುವುದು. ಅಭಿವೃದ್ಧಿ ಮಾಡಲೇಬೇಕೆಂದು ಗ್ರಾಪಂನ್ನು ನಗರಸಭೆಯನ್ನಾಗಿ ಮಾಡಿಸಿದ್ದೇನೆ. ಈಗ ಅನುದಾನ ಬಿಡುಗಡೆ ಆಗಿರುವುದರಿಂದ ಕಾಮಗಾರಿಗಳು ಪ್ರಾರಂಭವಾಗಲಿದೆ ಎಂದರು.

ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಕೂರ್ಗಳ್ಳಿ ಬಳಿ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ೮.೭೦ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಮೈಸೂರಿನ ಕೂರ್ಗಳ್ಳಿ ಬಡಾವಣೆಯಲ್ಲಿ ಸಾರ್ವಜನಿಕರಿಂದ ಶಾಸಕ ಜಿ.ಟಿ.ದೇವೇಗೌಡರು ಆಹವಾಲು ಆಲಿಸಿದರು.

WhatsApp

Join Now

Telegram

Join Now

Instagram

Join Now