--Ads--

ನಾಮಪತ್ರ ಹಿಂಪಡೆಯಲು ಬಂದ ವ್ಯಕ್ತಿಯಿಂದ ನಾಮಪತ್ರಗಳ ನಾಶ: ಚುನಾವಣಾಧಿಕಾರಿ ಪೊಲೀಸ್‌ ಠಾಣೆಗೆ ದೂರು 

On: April 9, 2026 3:16 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ನಾಮಪತ್ರ ಹಿಂಪಡೆಯಲು ಬಂದ ವ್ಯಕ್ತಿಯಿಂದ ನಾಮಪತ್ರಗಳ ನಾಶ: ಚುನಾವಣಾಧಿಕಾರಿ ಪೊಲೀಸ್‌ ಠಾಣೆಗೆ ದೂರು 

ಶಿಡ್ಲಘಟ್ಟ : ತಾಲ್ಲೂಕಿನ ಮರಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಾಮಪತ್ರ ಹಿಂಪಡೆಯಲು ಬಂದ ವ್ಯಕ್ತಿ ನಾಮಪತ್ರಗಳನ್ನ ಹರಿದು ಹಾಕಿದ್ದಾರೆಂದು ಎಂದು ಚುನಾವಣಾಧಿಕಾರಿ ಕೆ.ಎಸ್.ಭಾಸ್ಕರರೆಡ್ಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ದೊಡ್ಡತೇಕಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರಿಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲಾಗಿದ್ದು, ಹಿಂಪಡೆಯಲು ಅವಧಿ ನಿಗದಿ ಮಾಡಲಾಗಿತ್ತು.

ಆದರೆ ನಾಮಪತ್ರ ಹಿಂಪಡೆಯುವ ವೇಳೆ ಚಿಕ್ಕನರಸಿಂಹಪ್ಪ ಎಂಬುವರು ನನ್ನ ನಾಮಪತ್ರವನ್ನು ವಾಪಸ್ ಕೊಡಿ ಎಂದು ಚುನಾವಣಾಧಿಕಾರಿಗೆ ಕೇಳಿದ್ದಾನೆ, ನಾಮಪತ್ರವನ್ನು ಹಿಂಪಡೆಯುತ್ತಿದ್ದೇನೆಂದು ಸಹಿ ಹಾಕಿ ರಸೀದಿ ಪಡೆಯುವ ನೆಪದಲ್ಲಿ 12 ಸದಸ್ಯರ ನಾಮಪತ್ರಗಳನ್ನು ಬ್ಯಾಗಿನಿಂದ ತೆಗೆದು ಹರಿದು ಹಾಕಿದ್ದಾರೆನ್ನಲಾಗಿದೆ.

ಇನ್ನು ಘಟನೆ ನಡೆಯುತ್ತಿದ್ದಂತೆ ಚುನಾವಣಾಧಿಕಾರಿ ಭಾಸ್ಕರರೆಡ್ಡಿ, ದಿಬ್ಬೂರಹಳ್ಳಿ ಠಾಣೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ,ತಕ್ಷಣ ಪಿಎಸ್‌ಐ ನಾಗರಾಜು ಸ್ಥಳಕ್ಕೆ ಭೇಟಿ ಪರಿಶೀಲಿಸಿದರು.

ಗ್ರಾಮದ ಮುಖಂಡ ತಿಮ್ಮರಾಜು ಮಾತನಾಡಿ ,
11 ಸ್ಥಾನಗಳಿಗೆ ಚುನಾವಣೆ ನಡೆಸಲು ತೀರ್ಮಾನಿಸಿದ್ದು, 12 ಮಂದಿ ನಾಮ ಪತ್ರ ಸಲ್ಲಿಸಿದ್ದರು,ನಾಮಪತ್ರ ಹಿಂಪಡೆಯಲು ಅನುಮತಿ ನೀಡಲಾಗಿತ್ತು ನಾಮಪತ್ರ ಹಿಂಪಡೆಯುತ್ತೇನೆಂದು ಬಂದಿದ್ದ ಚಿಕ್ಕನರಸಿಂಹಪ್ಪ ನಾಮಪತ್ರಗಳನ್ನು ಹರಿದು ಹಾಕಿದ್ದಾರೆ ಎಂದು ಹೇಳಿದರು.

WhatsApp

Join Now

Telegram

Join Now

Instagram

Join Now